ಕಲಬುರಗಿ: ಜಮೀನು ವಿವಾದ ಹಿನ್ನೆಲೆ ಮನೆಗೆ ಬೆಂಕಿ ಹಚ್ಚಿ ಇಡೀ ಕುಟುಂಬ ಹತ್ಯೆಮಾಡಲು ಯತ್ನಿಸಲಾಗಿದೆ. ಕಲಬುರಗಿ ಜಿಲ್ಲೆಯ ಕಡಣಿ ಗ್ರಾಮದಲ್ಲಿ ಘಟನೆ ನಡೆದಿದೆ. ಶಿವಲಿಂಗಪ್ಪ ಎಂಬಾತನೇ ಈ ಕೃತ್ಯ ಎಸಗಿದ ವ್ಯಕ್ತಿ ಎನ್ನಲಾಗಿದೆ. ಗುಂಡೇರಾವ್ ಎಂಬುವವರಿಗೆ ನಾಲ್ಕು ಎಕರೆ ಜಮೀನು ಮಾರಿ 12 ಲಕ್ಷ ಅಡ್ವಾನ್ಸ್ ಪಡೆದಿದ್ದ. ಆದರೆ ರಿಜಿಸ್ಟಾರ್ ಮಾಡಿಕೊಡುವ ವಿಚಾರಕ್ಕೆ ಕಿರಿಕ್ ಮಾಡಿದ್ದ. ಅದೇ ಕೋಪಕ್ಕೆ ಗುಂಡೇರಾವ್ ಮನೆಗೆ ಪೆಟ್ರೋಲ್ ಬಾಂಬ್ ಎಸೆದು ಸಾಮೂಹಿಕ ಹತ್ಯೆ ನಡೆಸಲು ಮುಂದಾಗಿದ್ದಾನೆ. ಅದೃಷ್ಟವಷಾತ್ ಗ್ರಾಮಸ್ಥರ ಸಹಾಯದಿಂದ ಇಡೀ ಕುಟುಂಬ ಬಚಾವ್ ಆಗಿದೆ. ಎಲ್ಲರಿಗೂ ಸಣ್ಣಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.ಘಟನಾ ಸ್ಥಳಕ್ಕೆ ಪೊಲೀಸ್ ಆಯುಕ್ತ ಶರಣಪ್ಪ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ಸಂಬಂಧ ತನಿಖೆ ಮುಂದುವರೆದಿದೆ.
ಪಕ್ಷದಲ್ಲಿ ಅಸಮಾಧಾನ ನಿಜ: ಹೈಕಮಾಂಡ್ ಎಲ್ಲವನ್ನು ಬಗೆಹರಿಸುತ್ತೆ – ಅರವಿಂದ್ ಬೆಲ್ಲದ್