ಹುಬ್ಬಳ್ಳಿ : ಜಿಲ್ಲೆಯ ಲಕ್ಷ್ಮಿ ದಳವಾಯಿಗೆ ಸಮಯಕ್ಕೆ ಸರಿಯಾಗಿ ಆಕೆಗೆ ಟಾಟಾ ಮೋಟರ್ಸ್ ಮತ್ತು ವಿದ್ಯಾ ಪೋಷಕ್ಕಿಂದ ನೆರವು ಮತ್ತು ಮಾರ್ಗದರ್ಶನ ಸಿಕ್ಕಿದುದರಿಂದ ಮತ್ತು ಆಕೆಯ ಕಠಿಣ ಪರಿಶ್ರಮದಿಂದ 10 ನೇ ತರಗತಿಯ ಪರೀಕ್ಷೆಯಲ್ಲಿ ಶೇ 90 ಅಂಕಪಡೆದುಕೊಂಡು ನಂತರ ಇಂಜಿನಿಯರ್ ವೃತ್ತಿ ಬದುಕಿನಲ್ಲಿ ಸುಂದರ ಬದುಕುಕಟ್ಟಿಕೊಂಡಿದ್ದಾರೆ.
ಈ ಕುರಿತು ಕಂಪನಿಯ ಪ್ರಮುಖರು ಮಾಹಿತಿ ನೀಡಿದ್ದು
ಟಾಟಾ ಮೋಟರ್ಸ್ನಿಂದ ಶಿಷ್ಯವೇತನ, ಅತ್ಯಾವಶ್ಯಕ ವಸ್ತುಗಳ ಸರಬರಾಜು, ತಜ್ಞನಿರ್ದೇಶಿತ ಮನೆಪಾಠ ಅಧಿವೇಶನ ಮತ್ತು ಐಐಟಿ-ಜೆಇಇಗೆ ಕೋಚಿಂಗ್ ಅವಳು ತನ್ನ ಕನಸಿನ ವೃತ್ತಿಯನ್ನು ನನಸಾಗಿಸಿಕೊಳ್ಳಲು ನೆರವಾಯಿತು. ಬೆಂಗಳೂರಿನ ಐಟಿ ಕಂಪನಿಯೊಂದರಲ್ಲಿ ಇಂಜಿನಿಯರ್ ಆಗಿ ಯಶಸ್ವಿಯಾಗಿ ಕೆಲಸ ಮಾಡುತ್ತ ಅನೇಕರಿಗೆ ಪ್ರೇರಣೆಯಾಗಿದ್ದಾರೆ.
ಲಕ್ಷ್ಮಿ ಮಾತನಾಡಿ, ನನ್ನ ಶಿಕ್ಷಣದುದ್ದಕ್ಕೂ ಟಾಟಾ ಮೋಟರ್ಸ್ ಮತ್ತು ವಿದ್ಯಾ ಪೋಷಕ್ ನಿರಂತರ ಬೆಂಬಲದೊಂದಿಗೆ ನನ್ನ ಕನಸುಗಳಿ ಸಾಕಾರಗೊಳಿಸಿಕೊಳ್ಳಲು ನೆರವಾಯಿತು ಎಂದರು.
ವಿದ್ಯಾ ಪೋಷಕ್’ ಅಡಿ ಹಣಕಾಸು ನೆರವಿನ ಜೊತೆಗೆ ಲಕ್ಷ್ಮಿಗೆ ಸಾಫ್ಟ್ ಸ್ಕಿಲ್ಸ್ ಮತ್ತು ವೃತ್ತಿ ಮಾರ್ಗದರ್ಶನದಲ್ಲೂ ತರಬೇತಿ ಒದಗಿಸಲಾಯಿತು. ಹೊಸದಾಗಿ ಕಂಡುಕೊಂಡ ಆತ್ಮವಿಶ್ವಾಸದೊಂದಿಗೆ ಲಕ್ಷ್ಮಿ ತಾನು ಎದುರಿಸಿದ ಎಲ್ಲಾ ಸಂದರ್ಶನಗಳಲ್ಲೂ ತೇರ್ಗಡೆಯಾಗಿ ಬೆಂಗಳೂರಿನ ಮುಂಚೂಣಿ ಐಟಿ ಕಂಪನಿಗಳ ಪೈಕಿ ಒಂದು ಕಂಪನಿಯಲ್ಲಿ ಉದ್ಯೋಗವನ್ನೂ ಗಳಿಸಿಕೊಂಡಿದ್ದಾರೆ.
ಟಾಟಾ ಮೋಟರ್ಸ್ ಸಿಎಸ್ಆರ್ ಮುಖ್ಯಸ್ಥ ವಿನೋದ್ ಕುಲಕರ್ಣಿ, ಲಕ್ಷ್ಮಿ ಶಿಕ್ಷಣದ ಮೂಲಕ ಪ್ರಗತಿ ಸಾಧಿಸಲು ಪ್ರೋತ್ಸಾಹ ನೀಡುವ ಟಾಟಾ ಮೋಟರ್ಸ್ ಅಚಲ ಬದ್ಧತೆಗೆ ಒಂದು ಸುಂದರವಾದ ಉದಾಹರಣೆಯಾಗಿದೆ. ಲಕ್ಷ್ಮಿಯಂತವರ ಯಶೋಗಾಥೆಗೆ ಮಾರ್ಗ ಕಲ್ಪಿಸಿರುವುದು ಮಾತ್ರವಲ್ಲದೆ, ಅವಕಾಶಗಳನ್ನು ಅನಾವರಣಗೊಳಿಸಿಕೊಳ್ಳಲು ನಮ್ಮ ಶೈಕ್ಷಣಿಕ ಉಪಕ್ರಮಗಳು ಹೊಂದಿರುವ ಅಪಾರ ಸಂಭಾವ್ಯತೆಯನ್ನೂ ಎತ್ತಿತೋರಿಸುತ್ತದೆ ಎಂದು ಹೇಳಿದರು.