ಅಡುಗೆ ಮನೆಯಲ್ಲಿ ಬೇಕಾಗುವ ಮುಖ್ಯ ಪದಾರ್ಥಗಳಲ್ಲಿ ಒಂದು ಶುಂಠಿ. ಸಾಂಬಾರು, ಟೀ, ಸ್ನ್ಯಾಕ್ಸ್ ಹೀಗೆ ಹಲವು ಅಡುಗೆಗಳನ್ನು ತಯಾರಿಸುವಾಗಲೂ ಶುಂಠಿ ಮುಖ್ಯವಾಗಿ ಬೇಕಾಗುತ್ತದೆ. ಆದರೆ, ಶುಂಠಿಯ ಸಿಪ್ಪೆ ತೆಗೆಯುವ ಕೆಲಸ ಹಲವರಿಗೆ ತಲೆನೋವು.
Channapatna by election: NDA ಅಭ್ಯರ್ಥಿ ನಿಖಿಲ್ ಪರ ಪರಿಷತ್ ಶಾಸಕ ಟಿ.ಎ ಶರವಣ ಮತಯಾಚನೆ
ಎಲ್ಲಾ ವಿಧದ ಅಡುಗೆಗೂ ಶುಂಠಿ ಇರಲೇಬೇಕು. ಕೆಲವರಂತೂ ಶುಂಠಿ ಟೀಯನ್ನು ಇಷ್ಟ ಪಟ್ಟು ಸೇವಿಸುತ್ತಾರೆ. ಆದರೆ ಅಡುಗೆಗೆ ಬಳಸುವ ಮುನ್ನ ಇದರ ಸಿಪ್ಪೆ ಸುಲಿದು ಬಳಸುವುದು ಉತ್ತಮ. ಈ ಸಿಪ್ಪೆಯೂ ಅಂಟಿಕೊಂಡಿರುವುದರಿಂದ ಇದನ್ನು ಸುಲಿಯುವುದು ತುಂಬಾ ಕಿರಿಕಿರಿ ಉಂಟುಮಾಡುವ ಕೆಲಸವಾಗಿದೆ. ಎಳೆ ಶುಂಠಿಯ ಸಿಪ್ಪೆಯನ್ನು ಕೈ ಬೆರಳು ಸಹಾಯದಿಂದಲೇ ಸುಲಿಯ ಬಹುದು
ಸಿಪ್ಪೆ ತೆಗೆಯಲು ಇಲ್ಲಿದೆ ಕೆಲವು ಟಿಪ್ಸ್.
ಶುಂಠಿ ಮಣ್ಣಿನೊಳೆಗೆ ಬೆಳೆಯುವುದರಿಂದ, ಶುಂಠಿಯನ್ನು ಚೆನ್ನಾಗಿ ತೊಳೆದುಕೊಳ್ಳಿ. ಸ್ವಲ್ಪ ಸಮಯದವರೆಗೆ ಅದನ್ನು ನೀರಿನಲ್ಲಿ ನೆನೆ ಹಾಕಿದರೆ ಸುಲಭವಾಗಿ ಸಿಪ್ಪೆ ತೆಗೆಯಬಹುದು.
ಚಾಕುವಿನಲ್ಲಿ ಸಿಪ್ಪೆ ತೆಗೆದರೆ ಶುಂಠಿಯ ಅರ್ಧ ಭಾಗವೇ ಸಿಪ್ಪೆಯೊಂದಿಗೆ ಹೋಗುತ್ತವೆ. ಹೀಗಾಗಿ ಇದರ ಸಿಪ್ಪೆ ತೆಗೆಯಲು ಸ್ಪೂನ್ ಬಳಸುವುದು ಉತ್ತಮ ಮಾರ್ಗವಾಗಿದೆ. ಚಮಚದ ಮುಂಭಾಗವನ್ನು ಬಳಸಿ ಶುಂಠಿಯ ಸಿಪ್ಪೆಯನ್ನು ತೆಗೆಯಿರಿ.
ಶುಂಠಿಯನ್ನು ಸ್ವಲ್ಪ ಸಮಯದವರೆಗೆ ಬಿಸಿ ನೀರಿನಲ್ಲಿ ನೆನೆಸಿಡಬೇಕು. ಆ ಬಳಿಕ ಶುಂಠಿ ಸಿಪ್ಪೆಯಲ್ಲಿ ಕೈಯಿಂದಲೇ ತೆಗೆಯಬಹುದು.
ಅಡುಗೆಗೆ ಮುನ್ನ ಅರ್ಧ ಗಂಟೆಗಳ ಕಾಲ ಶುಂಠಿಯನ್ನು ಫ್ರಿಡ್ಜ್ನಲ್ಲಿ ಇಡಬೇಕು. ಆಗ ಸಿಪ್ಪೆ ಮೃದುವಾಗುತ್ತದೆ, ಚಾಕು ಸಹಾಯದಿಂದ ಸುಲಭವಾಗಿ ತೆಗೆಯಬಹುದು.
ಶುಂಠಿ ಕತ್ತರಿಸುವ ಸಾಧನಗಳು ಮಾರುಕಟ್ಟೆಯಲ್ಲಿ ಸಿಗುತ್ತದೆ. ಇದನ್ನು ಬಳಸಿಕೊಂಡು ಶುಂಠಿಯ ಮೇಲ್ಪದರ ತೆಗೆಯುವುದು ಕಷ್ಟವೇನಲ್ಲ