ಮಹಿಳೆಯರಲ್ಲಿ ಬಿಳುಪು ಹೋಗುವುದು ಸಹಜ, ಅದರಲ್ಲೂ ಮುಟ್ಟಿನ ಸಮಯದಲ್ಲಿ ಸ್ವಲ್ಪ ಅಧಿಕ ಬಿಳುಪು ಹೋಗಬಹುದು, ಆದರೆ ಪ್ರತಿದಿನ ತುಂಬಾನೇ ಬಿಳುಪು ಹೋಗುವುದು ಅಂದರೆ ಒಳುಡುಪು ಒದ್ದೆಯಾಗುವಷ್ಟು ಬಿಳುಪು ಹೋಗುತ್ತಿದ್ದಾರೆ ನಿರ್ಲಕ್ಷ್ಯ ಮಾಡಲೇಬಾರದು,
Cucumber: ಬೇಸಿಗೆಯಲ್ಲಿ ಸೌತೆಕಾಯಿ ತಿಂದರೆ ಇಷ್ಟೆಲ್ಲಾ ಲಾಭಗಳಿದ್ಯಾ..? ಇಲ್ಲಿದೆ ಫುಲ್ ಡೀಟೇಲ್ಸ್
ಈ ಮನೆ ಮದ್ದುಗಳನ್ನು ಟ್ರೈ ಮಾಡಿ ಬಿಳುಪು ಹೋಗುವುದನ್ನು ತಡೆಯಿರಿ
ಮೆಂತೆ
ಒಂದು ಕಪ್ ನೀರಿಗೆ 1 ಚಮಚ ಮೆಂತೆ ಹಾಕಿ ಕುದಿಸಿ, ಒಂದು ಲೋಟ ನೀರು ಅರ್ಧ ಕೋಟ ಆಗುವವರೆಗೆ ಕುದಿಸಿ, ನಂತರ ತಣ್ಣಗಾದ ಮೇಲೆ ಕುಡಿಯಿರಿ.
ಬೆಂಡೆಕಾಯಿ ಅಂತೂ ತುಂಬಾ ಒಳ್ಳೆಯದು
ಬಿಳುಪು ಹೋಗುವುದನ್ನು ತಡೆಗಟ್ಟಲು ಬೆಂಡೆಕಾಯಿ ಕೂಡ ತುಂಬಾ ಒಳ್ಳೆಯದು. ಒಂದೆರಡು ಬೆಂಡೆಕಾಯಿ ಕತ್ತರಿಸಿ ನೀರಿಗೆ ಹಾಕಿ ಕುದಿಸಿ, ನಂತರ ಸ್ವಲ್ಪ ಬಿಸಿ ಇರುವಾಗ ಕುಡಿಯಿರಿ, ತುಂಬಾ ತಣ್ಣಗಾದರೆ ಕುಡಿಯುವುದು ಕಷ್ಟ.
ಬಿಳಿ ದಾಸವಾಳದ ಹೂ
ಬಿಲಿ ದಾಸವಾಳದ ಹೂ ತಿನ್ನುವುದು ಅಥವಾ ಅದನ್ನು ನೀರಿಗೆ ಹಾಕಿ ಕುದಿಸಿ ಕುಡಿಯುವುದು ಒಳ್ಳೆಯದು. ಹೀಗೆ ಮಾಡುವುದರಿಂದ ಬಿಳುಪು ಹೋಗುವುದು ಕಡಿಮೆಯಾಗುವುದು,’
ಕೊತ್ತಂಬರಿ ಬೀಜ
ಕೊತ್ತಂಬರಿ ಬೀಜ ತುಂಬಾ ತಂಪು ಹಾಗೂ ಬಿಳುಪು ಹೋಗುವುದನ್ನು ತಡೆಗಟ್ಟಲು ಸಹಕಾರಿ. ಕೊತ್ತಂಬರಿ ಬೀಜ ಹಾಕಿ ಬೆಲ್ಲದ ಕಾಫಿ ಮಾಡಿ ಕುಡಿಯಿರಿ.
ನೆಲ್ಲಿಕಾಯಿ
ನೆಲ್ಲಿಕಾಯಿಯ ಪುಡಿ ಬಿಸಿ ನೀರಿನಲ್ಲಿ ಹಾಕಿ ಕುಡಿದರೆ ತುಂಬಾನೇ ಒಳ್ಳೆಯದು.. ಇದರಲ್ಲಿ ವಿಟಮಿನ್ ಸಿ ಆರೋಗ್ಯ ವೃದ್ಧಿಸುತ್ತೆ.
ಗಂಜಿ ನೀರು
ಬಿಳುಪು ಹೋಗುವ ಸಮಸ್ಯೆ ಇರುವವರು ಗಂಜಿ ನೀರು ಕುಡಿಯುವುದು ಒಳ್ಳೆಯದು, ಗಂಜಿ ನೀರು ಬಿಳುಪು ಹೋಗುವುದನ್ನು ತಡೆಗಟ್ಟಲು ಸಹಕಾರಿ.
ಸೀಬೆಕಾಯಿ ಎಲೆ
ಬಿಳುಪು ಹೋಗುವುದು, ಜನನೇಂದ್ರೀಯದಲ್ಲಿ ತುರಿಕೆ ಕಂಡು ಬಂದರೆ ಸೀಬೆಕಾಯಿ ಗಿಡದ ಎಳೆಯ ಎಲೆಗಳನ್ನು ಕಿತ್ತು ಅದನ್ನು ನೀರಿನಲ್ಲಿ ಹಾಕಿ ದಿನದಲ್ಲಿ ಎರಡು ಬಾರಿ ಕುದಿಸಿ ಕುಡಿದರೆ ಒಳ್ಳೆಯದು.