ಮಹಿಳೆಯರೇ ನೀವು ಸೀರೆ ಕಟ್ಟಿಕೊಂಡು ಸ್ಲಿಮ್ ಆಗಿ ಕಾಣುವ ಮೂಲಕ ನಿಮ್ಮ ಬಾಯ್ ಫ್ರೆಂಡ್ ಅನ್ನು ಇಂಪ್ರೆಸ್ ಮಾಡಬೇಕಂತಿದ್ದರೆ ಈ ಟಿಪ್ಸ್ ಫಾಲೋ ಮಾಡಿ.
Power Cut: ಇಂದು ಬೆಳಿಗ್ಗೆಯಿಂದ ಮೈಸೂರಿನ ಹಲವೆಡೆ ಪವರ್ ಕಟ್..!
ಅನೇಕ ಹುಡುಗರು ತಮ್ಮ ಗರ್ಲ್ ಫ್ರೆಂಡ್ ಹಾಗೂ ಹೆಂಡತಿಗೆ ನೀಡಲು ಇಷ್ಟಪಡುವ ಮೊದಲ ಉಡುಗೊರೆ ಎಂದರೆ ಸೀರೆ. ಏಕೆಂದರೆ ಪ್ರತಿಯೊಬ್ಬ ಪುರುಷನು ತಮ್ಮ ಮನದರಸಿಯನ್ನು ಸೀರೆಯಲ್ಲಿ ನೋಡಲು ಇಷ್ಟಪಡುತ್ತಾರೆ.
ಆದರೆ ಸೀರೆ ಉಟ್ಟಾಗ ಕೆಲ ಮಹಿಳೆಯರು ತಾವು ದಪ್ಪ ಕಾಣುತ್ತೇವೆ ಎಂದು ಆತಂಕಪಡುತ್ತಾರೆ. ಆದರೆ ಇನ್ಮುಂದೆ ನೀವು ಈ ಬಗ್ಗೆ ಆಲೋಚಿಸಬೇಕಾಗಿಲ್ಲ. ಮಹಿಳೆಯರೇ ನೀವು ಸೀರೆ ಕಟ್ಟಿಕೊಂಡು ಸ್ಲಿಮ್ ಆಗಿ ಕಾಣುವ ಮೂಲಕ ನಿಮ್ಮ ಬಾಯ್ ಫ್ರೆಂಡ್ ಅನ್ನು ಇಂಪ್ರೆಸ್ ಮಾಡಬೇಕಂತಿದ್ದರೆ ಈ ಟಿಪ್ಸ್ ಫಾಲೋ ಮಾಡಿಮಾಡಿ
ಸೀರೆ ಉಟ್ಟಾಗ ಅನೇಕ ಮಹಿಳೆಯರು ಒಳಗೆ ಲಂಗ ಅಥವಾ ಸ್ಕರ್ಟ್ ಧರಿಸುತ್ತಾರೆ. ಆದರೆ ಅವುಗಳನ್ನು ಹತ್ತಿಯಿಂದ ತಯಾರಿಸಲಾಗಿರುತ್ತದೆ. ಅಲ್ಲದೇ ದುಂಡು ಮುಖ ಹೊಂದಿರುವವರನ್ನು ದಪ್ಪವಾಗಿ ಕಾಣುವಂತೆ ಮಾಡುತ್ತದೆ. ಹಾಗಾಗಿ ಲಂಗ ಬದಲಿಗೆ ಉತ್ತಮವಾದ ಶೇಪ್ ವೇರ್ ಧರಿಸುವುದರಿಂದ ನೀವು ಸೀರೆ ಉಟ್ಟಾಗ ಸ್ಲಿಮ್ ಆಗಿ ಕಾಣುತ್ತೀರಿ. ಈಗಂತೂ ಈ ಶೇಪ್ವೇರ್ಗಳು ಎಲ್ಲೆಡೆ ಮಾರಾಟ ಮಾಡಲಾಗುತ್ತಿದೆ. ನೀವು ಕೂಡ ಇದನ್ನು ಸುಲಭವಾಗಿ ಧರಿಸಬಹುದು.
ಅನೇಕ ಮಹಿಳೆಯರು ಸೀರೆ ಕಟ್ಟಿಕೊಂಡಾಗ ಸಾಮಾನ್ಯವಾದ ಚಪ್ಪಲಿ ಧರಿಸುತ್ತಾರೆ. ಆದರೆ ಈ ಸಿಂಪಲ್ ಚಪ್ಪಲಿಗಳು ನೀವು ಸೀರೆ ಧರಿಸಿದಾ್ ನಿಮ್ಮನ್ನು ಕುಳ್ಳರಂತೆ ಹಾಗೂ ಗುಂಡಾಗಿ ಕಾಣುವಂತೆ ಮಾಡುತ್ತದೆ. ಇದರಿಂದ ನಿಮ್ಮ ಲುಕ್ ಹಾಳಾಗುತ್ತದೆ. ಹಾಗಾಗಿ ಇದರ ಬದಲು ಹೀಲ್ಸ್ ಧರಿಸಿ. ಏಕೆಂದರೆ ಹೀಲ್ಸ್ ಧರಿಸುವುದಕ್ಕೂ ಹಾಗೂ ಸಿಂಪಲ್ ಚಪ್ಪಲಿ ಧರಿಸುವುದಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಅಲ್ಲದೇ ನೀವು ಹೀಲ್ಸ್ ಧರಿಸಿದಾಗ ಉದ್ದವಾಗಿ ತೆಳ್ಳಗೆ ಕಾಣುತ್ತೀರಿ. ಮತ್ತು ನಿಮ್ಮ ವಾಕಿಂಗ್ ಸ್ಟೈಲ್ ಕೂಡ ಚೇಂಚ್ ಆಗುವುದನ್ನು ನೀವು ಕಾಣುತ್ತೀರಿ
ಯಾವಾಗಲೂ ಸೀರೆ ಖರೀದಿಸುವಾಗ ಎಚ್ಚರಿಕೆಯಿಂದ ಖರೀದಿಸಬೇಕು. ಸದಾ ಅತಿ ದಪ್ಪವಾಗಿರುವ ಸೀರೆಗಳಿಗಿಂತ ತೆಳುವಾದ ಸೀರೆಗಳನ್ನು ಆರಿಸಿಕೊಳ್ಳಿ. ಏಕೆಂದರೆ ಇಂತಹ ಸೇರೆಯನ್ನು ಧರಿಸಿದಾಗ ನೀವು ಸ್ಲಿಮ್ ಆಗಿ ಕಾಣುತ್ತೀರಿ. ಜೊತೆಗೆ ಪಲ್ಲುವನ್ನು ದೊಡ್ಡದಾಗಿ ಬಿಡಿ. ಇದರಿಂದ ಬಾಡಿ ಸ್ಟ್ರಕ್ಚರ್ ಸೂಪರ್ ಆಗಿ ಕಾಣುತ್ತದೆ
ಬಹು ಬಣ್ಣದ ಸೀರೆ: ಮಹಿಳೆಯರೇ ಇನ್ಮುಂದೆ ಬಹುವರ್ಣದ ಸೀರೆಗಳ ಮೇಲೆ ಸಣ್ಣ ಆಕೃತಿಗಳನ್ನು ಹೊಂದಿರುವ ವಿನ್ಯಾಸಗಳಿರುವ ಸೀರೆಗಳನ್ನು ಆರಿಸಿಕೊಳ್ಳಿ. ಇತ್ತೀಚಿನ ದಿನಗಳಲ್ಲಿ ಅನೇಕ ಮಹಿಳೆಯರು ಸೀರೆಯೊಂದಿಗೆ ಕಾಂಟ್ರಾಸ್ಟ್ ಬ್ಲೌಸ್ ಧರಿಸುತ್ತಾರೆ. ಆದರೆ ನೀವು ತೆಳ್ಳಗೆ ಕಾಣಬೇಕೆಂದು ಬಯಸಿದರೆ, ಕಾಂಟ್ರಾಸ್ಟ್ ಬ್ಲೌಸ್ ಧರಿಸುವ ಬದಲು ಏಕವರ್ಣದ ಬಣ್ಣದ ಸೀರೆ ಮತ್ತು ಬ್ಲೌಸ್ ಧರಿಸಿ, ಇದು ನಿಮ್ಮನ್ನು ಹೆಚ್ಚು ಸುಂದರವಾಗಿ ಮತ್ತು ನಾಜೂಕಾಗಿ ಕಾಣುವಂತೆ ಮಾಡುವಲ್ಲಿ ಸಹಾಯಕವಾಗಿದೆ
ಸೀರೆ ಬಾರ್ಡರ್: ಬಾರ್ಡರ್ ಇರುವ ಸೀರೆಗಳು ಉಡಲು ಸುಂದರವಾಗಿರುತ್ತದೆ. ಆದ್ದರಿಂದ ಅನೇಕ ಮಹಿಳೆಯರು ದೊಡ್ಡ ಬಾರ್ಡರ್ ಇರುವ ಸೀರೆಗಳನ್ನು ಉಡಲು ಹೆಚ್ಚು ಆದ್ಯತೆ ನೀಡುತ್ತಾರೆ. ಆದರೆ ನೀವು ಸಣ್ಣ ಕಾಣಬೇಕೆಂದು ಬಯಸಿದರೆ ಚಿಕ್ಕ ಬಾರ್ಡರ್ ಇರುವ ಸೀರೆಗಳನ್ನು ಆಯ್ಕೆ ಮಾಡಿ ಮತ್ತು ಯಾವುದೇ ಬಾರ್ಡರ್ ಇಲ್ಲದೇ ಇರುವ ಸೀರೆಯನ್ನು ಸಹ ಉಡಬಹುದು.
![](https://ainlivenews.com/wp-content/uploads/2024/01/Ad-Banner-copy-scaled.jpg)