ಬೆಂಗಳೂರು:- ರಾಜಧಾನಿ ಬೆಂಗಳೂರಿನ ಪ್ರತಿಷ್ಠಿತ ಸರ್ಕಾರಿ ಆಸ್ಪತ್ರೆಯಲ್ಲಿ MRI ಸ್ಕ್ಯಾನಿಂಗ್ ಕೊರತೆ ಎದುರಾಗಿದೆ.
ಉಚಿತ ಅಥವಾ ಕಡಿಮೆ ದರದಲ್ಲಿ ಮಾಡಿಸಬಹುದಾದ ಸ್ಕ್ಯಾನಿಂಗ್ಗೆ ಖಾಸಗಿ ಲ್ಯಾಬ್ಗಳಲ್ಲಿ ದುಬಾರಿ ಹಣ ತೆತ್ತು ರೋಗಿಗಳು ಸುಸ್ತಾಗಿದ್ದಾರೆ.
ಭೂಸ್ವಾಧೀನ ಹೆಸರಿನಲ್ಲಿ ಬಹುಕೋಟಿ ವಂಚನೆ ಕೇಸ್: ಬೆಂಗಳೂರು, ಧಾರವಾಡ KIADB ಕಚೇರಿ ಮೇಲೆ ED ದಾಳಿ!
ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆಗೆ ನಿತ್ಯ ನೂರಾರು ಜನರು ಚಿಕಿತ್ಸೆಗೆ ಬರುತ್ತಾರೆ. ಉಚಿತ ಚಿಕಿತ್ಸೆ ದೊರೆಯುತ್ತದೆ ಎಂದು ನಿತ್ಯ ಬಡ ಪೋಷಕರು ಮಕ್ಕಳನ್ನು ಕರೆದುಕೊಂಡು ಈ ಸರ್ಕಾರಿ ಆಸ್ಪತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಆದರೆ ಸಣ್ಣಪುಟ್ಟ ಸ್ಕ್ಯಾನ್ಗೂ ಸಾವಿರಾರೂ ರೂಪಾಯಿ ಖರ್ಚು ಮಾಡಬೇಕಾಗಿ ಬರುತ್ತಿದೆ.
ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆಯಲ್ಲಿ ಎಂಆರ್ಐ ಸ್ಕ್ಯಾನಿಂಗ್ಗೆ ಬೇಡಿಕೆ ಇದೆ. ಆದರೆ ಇಲ್ಲಿ ಸ್ಕ್ಯಾನಿಂಗ್ ಸೆಂಟರ್ ಇಲ್ಲದ ಕಾರಣ ಪೋಷಕರು ಸಾವಿರಾರು ರೂಪಾಯಿ ಖರ್ಚು ಮಾಡಿ ಹೊರಗಡೆ ಸ್ಕ್ಯಾನ್ ಮಾಡಿಸಲು ಹೋಗಬೇಕಾದ ಸ್ಥಿತಿ ಎದುರಾಗಿದೆ.
ಉಚಿತ ಅಥವಾ ಕಡಿಮೆ ದರದಲ್ಲಿ ಮಾಡಿಸಬಹುದಾದ ಸ್ಕ್ಯಾನಿಂಗ್ಗೆ ಖಾಸಗಿ ಲ್ಯಾಬ್ಗಳಲ್ಲಿ ದುಬಾರಿ ಹಣ ತೆತ್ತು ರೋಗಿಗಳು ಸುಸ್ತಾಗಿದ್ದಾರೆ. ಇಂದಿಗೂ ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆಯಲ್ಲಿ ಎಂಆರ್ಐ ಸ್ಕ್ಯಾನಿಂಗ್ ಸೌಲಭ್ಯ ಇಲ್ಲದೆ ಖಾಸಗಿ ಲ್ಯಾಬ್ಗಳಿಗೆ ರೋಗಿಗಳ ಅಲೆದಾಟ ನಿಂತಿಲ್ಲ. ನಿತ್ಯ 300 ರಿಂದ 350 ಮಕ್ಕಳು ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ಬರುತ್ತಾರೆ.
ರೋಗಿಗಳು ಆಲ್ಟ್ರಾಸೌಂಡ್ ಸ್ಕ್ಯಾನಿಂಗ್ ಸೇರಿದಂತೆ ಬೇರೆ ಎಲ್ಲ ರೀತಿಯ ಸ್ಕ್ಯಾನಿಂಗ್ ಮಾಡಿಸಲು ಖಾಸಗಿ ಲ್ಯಾಬ್ ಮೊರೆ ಹೋಗುತ್ತಿದ್ದು ಸಾವಿರಾರು ರೂಪಾಯಿ ಖರ್ಚು ಮಾಡಬೇಕಿದೆ. ಇದು ಬಡ ರೋಗಿಗಳಿಗೆ ದೊಡ್ಡ ಹೊರೆಯಾಗಿದೆ.