ಬೆಂಗಳೂರು:- ಕಳೆದ ಒಂದು ತಿಂಗಳಿನಿಂದ ನಗರದ ಆಸ್ಪತ್ರೆಗಳಲ್ಲಿ ಹೆಪಟೈಟಿಸ್ ಬಿ ಲಸಿಕೆಯ ಕೊರತೆ ಎದುರಾಗಿದೆ. ಆಸ್ಪತ್ರೆಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಗಳಿಗೂ ಲಸಿಕೆಯನ್ನ ನೀಡಿಲ್ಲ.
ಸುಡಾನ್: ಜೀವ ಉಳಿಸಿಕೊಳ್ಳಲು ಹೋಗುತ್ತಿದ್ದವರನ್ನು ಬಲಿ ಪಡೆದ ದೋಣಿ ದುರಂತ, 25 ಮಂದಿ ಸಾವು
ಜೊತೆಗೆ ಮಗವಿಗೆ ಹೆಪಟೈಟಿಸ್ ಬಿ ಲಸಿಕೆಯನ್ನು ಕಡ್ಡಾಯವಾಗಿ ನೀಡಬೇಕಾಗಿದ್ದು, ಹೊರ ರಾಜ್ಯಗಳಿಂದ ಆಮದು ಮಾಡಿಕೊಳ್ಳವ ಅನಿವಾರ್ಯತೆ ಶೃಷ್ಠಿಯಾಗಿದೆ. ಮಗುವಿಗೆ ಬೂಸ್ಟರ್ ಡೋಸ್ ಸೇರಿದಂತೆ ಮೂರು ಡೋಸ್ ಲಸಿಕೆ ನೀಡಲಾಗುತ್ತದೆ. ಆದರೆ ನಗರದ ಖಾಸಗಿ ಆಸ್ಪತ್ರೆಗಳಲ್ಲಿ ಹೆಪಟೈಟಿಸ್ ಬಿ ವ್ಯಾಕ್ಸಿನ್ ಸಿಗುತ್ತಿಲ್ಲ. ಇದರಿಂದಾಗಿ ಸಾಕಷ್ಟು ಸಮಸ್ಯೆಯಾಗಿದೆ
ಹೆಪಟೈಟಿಸ್ ಬಿ ಸೋಂಕು ಹೆಚ್1ಎನ್1 ನಷ್ಟೇ ಪರಿಣಾಮಕಾರಿಯಾಗಿದ್ದು, ಲಸಿಕೆ ಕಡ್ಡಾಯವಾಗಿ ನೀಡಬೇಕು. ಜೊತೆಗೆ ವೈದ್ಯಕೀಯ ವಿದ್ಯಾರ್ಥಿಗಳು ಹಾಗೂ ವೈದ್ಯರು ಮೂರು ಡೋಸ್ಗಳನ್ನ ಅಗತ್ಯವಾಗಿ ತೆಗೆದುಕೊಳ್ಳಬೇಕು. ಲಸಿಕೆ ತಯಾರಿಕೆಗೆ ಬೇಕಾದ ಕಚ್ಚಾ ವಸ್ತುಗಳು ಸರಿಯಾಗಿ ಸಿಗುತ್ತಿಲ್ಲ ಎಂಬ ಕಾರಣಕ್ಕೆ ಲಸಿಕೆ ಉತ್ತಾಪದನೆಯಾಗುವುದು ಕಡಿಮೆಯಾಗಿದೆ. ಹೀಗಾಗಿ ಆಸ್ಪತ್ರೆಗಳಿಗೆ ಸರಿಯಾಗಿ ಪೂರೈಕೆಯಾಗುತ್ತಿಲ್ಲ. ಜನವರಿಯಿಂದಲೂ ಹೆಪಟೈಟಿಸ್ ಬಿ ಲಸಿಕೆಗೆ ಬೇಡಿಕೆ ಇದ್ದು, ಮೊದಲು ಲಸಿಕೆ ಪೂರೈಸಿ ಅಂತ ವೈದ್ಯರು ಸರ್ಕಾರಕ್ಕೆ ಮನವಿ ಮಾಡುತ್ತಿದ್ದಾರೆ.