ಜೈಪುರ: ರಾಜಸ್ಥಾನದ ಜೋಧ್ಪುರದ ಪಾವೋಟಾದಲ್ಲಿನ ಸ್ಯಾಟಲೈಟ್ ಆಸ್ಪತ್ರೆಯಲ್ಲಿ ಲ್ಯಾಬ್ ಅಟೆಂಡರ್ ತನ್ನ ಫೋನ್ನಲ್ಲಿ ಯೂಟ್ಯೂಬ್ ಟ್ಯುಟೋರಿಯಲ್ ವಿಡಿಯೋ ನೋಡಿದ ಬಳಿಕ ರೋಗಿಗೆ ಇಸಿಜಿ ಮಾಡಿರುವುದು ವಿಡಿಯೋದಲ್ಲಿ ರೆಕಾರ್ಡ್ ಆಗಿದೆ.
ಯೂಟ್ಯೂಬ್ ಟ್ಯುಟೋರಿಯಲ್ ನೋಡುತ್ತಾ ಸಿಬ್ಬಂದಿಯು ಇಸಿಜಿ ಮಾಡುವುದನ್ನು ಗಮನಿಸಿದ ರೋಗಿಯ ಕುಟುಂಬಸ್ಥರು, ಇಸಿಜಿ ಮಾಡಲು ಸರಿಯಾಗಿ ಗೊತ್ತಿರುವವರನ್ನು ಕರೆಸಿ ಮಾಡಿಸಿ ಎಂದು ಎಷ್ಟೇ ಒತ್ತಾಯಿಸಿದರೂ ಪರಿಗಣಿಸದೇ ಇಸಿಜಿ ಮಾಡುವುದನ್ನು ಮುಂದುವರೆಸಿದ್ದಾರೆ.
Dolo 650: ಸಣ್ಣ-ಪುಟ್ಟ ರೋಗಕ್ಕೆಲ್ಲಾ “ಡೋಲೋ 650” ಮಾತ್ರೆ ನುಂಗುವ ಮುನ್ನ ಎಚ್ಚರ! ಈ ಸ್ಟೋರಿ ನೋಡಿ
ಸ್ವತಃ ರೋಗಿ ಹಾಗೂ ರೋಗಿಯ ಜೊತೆಗಿರುವವರು ವಿಡಿಯೋ ರೆಕಾರ್ಡ್ ಮಾಡಿದ್ದು, ಲ್ಯಾಬ್ ಅಟೆಂಡರ್ಗೆ ನರ್ಸ್ ಇಸಿಜಿ ಮಾಡುವಂತೆ ಒತ್ತಾಯಿಸಿರುವುದು ತಿಳಿದುಬಂದಿದೆ. ಬಳಿಕ ಅಟೆಂಡರ್ಗೆ ಪ್ರಶ್ನಿಸಿದಾಗ ಇಸಿಜಿ ಮಾಡಲು ಬರುವುದಿಲ್ಲ ಎಂದು ಒಪ್ಪಿಕೊಂಡಿದ್ದಾನೆ. ಆದರೆ ದೀಪಾವಳಿಯ ಕಾರಣ ಆಸ್ಪತ್ರೆಯಲ್ಲಿ ಯಾವುದೇ ನೌಕರರು ಇರದ ಕಾರಣ ತಾನಾಗಿಯೇ ಇಸಿಜಿ ಮಾಡಲು ಪ್ರಯತ್ನಿಸುವಂತೆ ಒತ್ತಾಯಿಸಿದ್ದಾರೆ ಎಂದು ತಿಳಿಸಿದ್ದಾನೆ.
ಇದಕ್ಕೆ ಸಂಬಂಧಿಸಿದಂತೆ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಬಿಎಸ್ ಜೋಧಾ ಮಾತನಾಡಿ, ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋ ವೈರಲ್ ಆದ ನಂತರ, ಘಟನೆಯ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಖಚಿತಪಡಿಸಿದ್ದಾರೆ.