ಕುಶಾಲನಗರದಲ್ಲಿ ಲಾಡ್ಜ್ ಹಾಗು ಹೋಟೆಲ್ ಗಳಿಂದ ಕಳುಷಿತ ನೀರನ್ನು ಚೆರಂಡಿ ಮೂಲಕ ಕಾವೇರಿ ನದಿಗೆ ಹರಿಸಲಾಗುತ್ತಿತ್ತು. ಕಳೆದ ಮೂರು ದಿನಗಳ ಹಿಂದೆ ಈ ಬಗ್ಗೆ “ಚಾನಲ್ ಕೂರ್ಗ್ ನಲ್ಲಿ ವರದಿ ಪ್ರಕಟಿಸಿ ಕ್ರಮಕ್ಕೆ ಒತ್ತಾಯ ಮಾಡಲಾಗಿತ್ತು. ಇಂದು ಕುಶಾಲನಗರ ಪುರಸಭೆ ವತಿಯಿಂದ ಚರಂಡಿಯ ದುರಸ್ತಿ ಕಾರ್ಯ ಹಾಗೂ ಕಲುಷಿತ ನೀರನ್ನು ಬಿಡುತ್ತಿರುವವರ ಮೇಲೆ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ.
ಇನ್ನಾದರೂ ಪುರಸಭೆ ಪರವಾನಿಗೆಯನ್ನು ನೀಡುವಾಗ ಎಲ್ಲಾ ಮಾನದಂಡಗಳನ್ನು ಪರಿಶೀಲಿಸಿ ಪರವಾನಿಗೆ ನೀಡುವಂತೆ ಪರಿಸರ ಪ್ರೇಮಿಗಳು ಒತ್ತಾಯಿಸಿದ್ದಾರೆ. ಇಂತದ್ದೇ ಘಟನೆ ಮರುಕಳಿಸಿದರೆ ಪುರಸಭೆಯ ಮುಖ್ಯ ಅಧಿಕಾರಿ ಹಾಗೂ ಆಡಳಿತ ಮಂಡಳಿಯನ್ನು ಗುರಿಯಾಗಿರಿಸಿ ಕಾನೂನಿನ ಮೊರೆ ಹೋಗಲಾಗುವುದು ಎಂದು ಎಚ್ಚರಿಸಿದ್ದಾರೆ.
Recruitment: ನಿಮ್ಹಾನ್ಸ್’ನಲ್ಲಿ ಕೆಲಸ ಖಾಲಿ ಇದೆ..! ತಿಂಗಳಿಗೆ ₹ 90,000 ಸಂಬಳ – ಇಂದೇ ಕೊನೆ ದಿನಾಂಕ
ಜಿಲ್ಲೆಯಲ್ಲಿ ಪರಿಸರ ಇಲಾಖೆ ಇದ್ದು, ಪರಿಸರ ಸಂರಕ್ಷಣೆ ಹಾಗೂ ನೈರ್ಮಲ್ಯವನ್ನು ಪಾಲಿಸಿದವರ ಮೇಲೆ ಕ್ರಮ ಕೈಗೊಳ್ಳಬೇಕಾದ ಈ ಇಲಾಖೆ ಬೆಚ್ಚಿಗಿನ ಮಹಡಿಯ ಮೇಲೆ ಮೇಲೆ ತಂಪಾಗಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕುಳಿತಿದ್ದಾರೆ. ಇಲಾಖೆ ವತಿಯಿಂದ ಯಾವುದೇ ಕ್ರಮ ಇದುವರೆಗೆ ಕೈಗೊಳ್ಳದಿರುವ ಬಗ್ಗೆ ತಮ್ಮ ಆಕ್ಷೇಪವನ್ನು ಹಲವರು ವ್ಯಕ್ತಪಡಿಸಿದ್ದಾರೆ.