ಚಿತ್ರ.ದುರ್ಗ:- ಮಹಾ ಕುಂಭಮೇಳದಲ್ಲಿ ಕಾಲ್ತುಳಿತ ಪ್ರಕರಣದಲ್ಲಿ ಸಂಬಂಧಿಸಿದಂತೆ ಚಿತ್ರದುರ್ಗದಿಂದ ತೆರಳಿದ್ದ ನಾಗ ಸಾಧು ಸಾವನ್ನಪ್ಪಿದ್ದಾರೆ.
ಕೇಂದ್ರದ ಬಜೆಟ್ಗೆ ಕೌಂಟ್ಡೌನ್, ಇಡೀ ದೇಶದ ಚಿತ್ತ ಬಜೆಟ್ನತ್ತ, ಯಾರ್ಯಾರಿಗೆ ಸಿಗಬಹುದು ಲಾಭ!
ನಾಗಸಾಧು ರಾಜನಾಥ್ ಮಹಾರಾಜ್(49) ಕಾಲ್ತುಳಿತಕ್ಕೆ ಸಿಲುಕಿ ದುರ್ಮರಣಕ್ಕಿಡಾಗಿದ್ದಾರೆ. ಕಳೆದ ಒಂದು ವಾರದ ಹಿಂದೆಯಷ್ಟೇ ಕುಂಭಮೇಳಕ್ಕೆ ತೆರಳಿದ್ದ ರಾಜನಾಥ್ ಮಹಾರಾಜ್ ಬಂಜಾರ ಗುರುಪೀಠದ ಪೀಠಾಧಿಪತಿ ಸರ್ಧಾರ್ ಸೇವಾಲಾಲ್ ಶ್ರೀಗಳ ಒಡನಾಡಿಯಾಗಿದ್ದರು.
ಇವರ ಸಾವಿನ ಬಗ್ಗೆ ಉತ್ತರಪ್ರದೇಶದ ಪೊಲೀಸರು, ಕರ್ನಾಟಕ ಪೊಲೀಸರಿಗೆ ಮಾಹಿತಿ ನೀಡಿದ್ದು, ರಾಜನಾಥ್ ಸಾವಿನ ಬಗ್ಗೆ ಖಚಿತ ಪಡಿಸಿದ್ದಾರೆ.