ಕನ್ನಡದ ನಟ ‘ನೆನೆಪಿರಲಿ’ ಪ್ರೇಮ್ ಅವರು ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ಪುಣ್ಯ ಸ್ನಾನ ಮಾಡಿದ್ದಾರೆ. ಈ ಕುರಿತು ನಟ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಕೂಡ ಹಂಚಿಕೊಂಡು ಮಾಹಿತಿ ನೀಡಿದ್ದಾರೆ.
ಮಹಾ ಕುಂಭಮೇಳದಲ್ಲಿ ಡಿಕೆಶಿ ಪುಣ್ಯಸ್ನಾನ: ಯತ್ನಾಳ್ ವ್ಯಂಗ್ಯ ಮಾಡಿದ ಪರಿ ಹೀಗಿದೆ!
ಕುಂಭ ಮೇಳ ಪುಣ್ಯ ಸ್ನಾನ. ಎಲ್ಲರ ಬಾಳು ಅಮೃತಮಯವಾಗಿರಲಿ’ ಎಂದು ಪ್ರೇಮ್ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಇದರೊಂದಿಗೆ ಪುಣ್ಯ ಸ್ನಾನದ ಫೋಟೋ ಕೂಡ ನಟ ಹಂಚಿಕೊಂಡಿದ್ದಾರೆ.
ಇನ್ನೂ ಇತ್ತೀಚೆಗೆ ಕನ್ನಡದ ಕಲಾವಿದರಾದ ರಾಜ್ ಬಿ ಶೆಟ್ಟಿ, ನಿರೂಪಕಿ ಅನುಶ್ರೀ, ಕೆಜಿಎಫ್ ನಟಿ ಶ್ರೀನಿಧಿ ಶೆಟ್ಟಿ, ಬಿಗ್ ಬಾಸ್ ಸಾನ್ಯ ಅಯ್ಯರ್ ಸೇರಿದಂತೆ ಅನೇಕರು ಮಹಾ ಕುಂಭಮೇಳದಲ್ಲಿ ಭಾಗಿಯಾಗಿದ್ದರು.