ಮಹಾ ಕುಂಭ ಮೇಳದಲ್ಲಿ ರುದ್ರಾಕ್ಷಿ ಮಾರುತ್ತಿದ್ದ ಮೊನಾಲಿಸಾ ಇದೀಗ ಬಾಲಿವುಡ್ ಬಾಗಿಲು ತೆರೆದಿದ್ದಾಳೆ. ಸಿನಿಮಾದಲ್ಲಿ ನಟಿಸೋ ಆಫರ್ ಬಂದ ಬೆನ್ನಲ್ಲೇ ಇದೀಗ ಮತ್ತೋಂದು ದೊಡ್ಡ ಆಫರ್ ಮೊನಾಲಿಸಾಗೆ ಒಲಿದು ಬಂದಿದೆ.
ಕೇರಳದ ಜನಪ್ರಿಯ ಚೆಮ್ಮನೂರ್ ಜ್ಯೂವೆಲ್ಲರಿ ತನ್ನ ಪ್ರಚಾರದ ರಾಯಭಾರಿಯಾಗಿ ಮೊನಾಲಿಸಾಳನ್ನು ನೇಮಿಸಿಕೊಳ್ಳಲು ಮುಂದಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಂಸ್ಥೆಯ ಬಾಬಿ ಚೆಮ್ಮನೂರು, ಇವತ್ತು ಮೊನಾಲಿಸಾ ಕೇರಳದ ಕಲ್ಲಿಕೋಟೆಗೆ ಬರಲಿದ್ದಾರೆ. ಅಲ್ಲಿ ಅವರನ್ನು ಕಂಪನಿಯ ಪ್ರಚಾರದ ರಾಯಭಾರಿಯಾಗಿ ನೇಮಕ ಮಾಡಿಕೊಳ್ಳಲಾಗುತ್ತದೆ. ಅವರಿ 15 ಲಕ್ಷ ರೂಪಾಯಿ ಸಂಬಳ ನೀಡಲಾಗುವುದು ಎಂದು ತಿಳಿಸಿದ್ದಾರೆ.
16 ವರ್ಷದ ಹುಡುಗಿ ಮಧ್ಯ ಪ್ರದೇಶದ ಖಾರ್ಗೊನ್ ಜಿಲ್ಲೆಯ ಮೊನಾಲಿಸ ತನ್ನ ಕಣ್ಣುಗಳ ಮೂಲಕವೇ ರಾತ್ರೋ ರಾತ್ರಿ ಫೇಮಸ್ ಆಗಿದ್ದಳು. ಈಕೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಬಾಲಿವುಡ್ ನಿಂದ ಆಫರ್ ಬಂದಿತ್ತು. ಇತ್ತೀಚೆಗೆ ಬಂದ ವರದಿಯ ಪ್ರಕಾರ, ದಿ ಡೈರಿ ಆಫ್ ಮನಿಪುರ ಸಿನಿಮಾದಲ್ಲಿ ಮೋನಾಲಿಸಾ ನಟಿಸಲಿದ್ದಾರೆ ಎನ್ನಲಾಗುತ್ತಿದೆ.
ಸೋಷಿಯಲ್ ಮೀಡಯಾದಲ್ಲಿ ವೈರಲ್ ಆಗುತ್ತಿದ್ದಂತೆಯೇ ‘ಮೊನಾಲಿಸಾ ಭೋಂಸ್ಲೆ 08’ ಅನ್ನೋ ಯುಟ್ಯೂಬ್ ಚಾನಲ್ ಆರಂಭಿಸಿದ್ದಾರೆಇದುವರೆಗೂ ಕೇವಲ 9 ವಿಡಿಯೋ ವ್ಲಾಗ್ ಮಾಡಿರೋ ಮೊನಾಲಿಸಾ ಎಂಟೇ ದಿನಗಳಲ್ಲಿ ಸರಿ ಸುಮಾರು 3 ಲಕ್ಷ ಸಬ್ಸ್ಕ್ರೈಬರ್ಸ್ ಹೊಂದಿದ್ದಾರೆ. ಸೋಷಿಯಲ್ ಬ್ಲೇಡ್ ಅನ್ನೋ ವೆಬ್ಸೈಟ್ ಈಕೆಯ ಯುಟ್ಯೂಬ್ ವಿಡಿಯೋ ಆದಾಯ ತಿಂಗಳಿಗೆ 10 ಲಕ್ಷ ರೂಪಾಯಿ ದಾಟಲಿದೆ ಎಂದು ಅಂದಾಜಿಸಲಾಗಿದೆ.