ರಾಮನಗರ: ಕುಮಾರಸ್ವಾಮಿ ಮನೆದೇವ್ರು ದುರ್ಯೋಧನ, ಅವರ ಲಾಂಛನ ನಾಗರಹಾವು. ಇದನ್ನ ಹೇಳಿದ್ದು ಇದೇ ಯಡಿಯೂರಪ್ಪನವರು. ಈಗ ಕಚ್ಚಿಸಿಕೊಳ್ಳೋಕೆ ಜೊತೆಗೆ ಕರೆದುಕೊಂಡಿದ್ದಾರೆ ಎಂದು ಕಾಂಗ್ರೆಸ್ ಶಾಸಕ ಹೆಚ್.ಸಿ ಬಾಲಕೃಷ್ಣ ಲೇವಡಿ ಮಾಡಿದ್ದಾರೆ.
ಸಭೆಯನ್ನುದ್ದೇಶಿಸಿ ಮಾತನಾಡಿದ ಶಾಸಕರು, ಕುಮಾರಸ್ವಾಮಿ ಮನೆದೇವ್ರು ದುರ್ಯೋಧನ, ಅವರ ಲಾಂಛನ ನಾಗರಹಾವು. ಇದನ್ನ ಹೇಳಿದ್ದು ಇದೇ ಯಡಿಯೂರಪ್ಪನವರು. ಈಗ ಕಚ್ಚಿಸಿಕೊಳ್ಳೋಕೆ ಜೊತೆಗೆ ಕರೆದುಕೊಂಡಿದ್ದಾರೆ. ಕುಮಾರಸ್ವಾಮಿ ಯಾರನ್ನೂ ಬೆಳೆಸುವ ಕೆಲಸ ಮಾಡಿಲ್ಲ. ಎಲ್ಲಾ ಕಡೆ ಅವರ ಕುಟುಂಬದರನ್ನ ಪ್ರತಿಷ್ಠಾಪನೆ ಮಾಡ್ತಾರೆ ಎಂದು ಕುಟುಕಿದ್ದಾರೆ.
ಗ್ರಾಹಕರಿಗೆ ಭರ್ಜರಿ ಗುಡ್ ನ್ಯೂಸ್: ಭಾರಿ ಡಿಸ್ಕೌಂಟ್, ಕೇವಲ 699 ರೂ.ಗೆ ಸಿಗಲಿದೆ ಜಿಯೋ ಭಾರತ್ 4 ಜಿ ಫೋನ್!
ಕುಮಾರಸ್ವಾಮಿಗೆ ನಾವ್ಯಾರೂ ಒಕ್ಕಲಿಗರ ರೀತಿ ಕಾಣುವುದಿಲ್ವಾ? ನಾವು ಅಣ್ಣ-ತಮ್ಮಂದಿರು, ಈ ಜಿಲ್ಲೆಯ ಮಕ್ಕಳು ನಾವು. ಜಗಳ ಆಡಿದ್ದೀವಿ, ಆದ್ರೆ ದ್ವೇಷ ಮಾಡಿಲ್ಲ. ಸಿಪಿವೈಗೆ ಅನ್ಯಾಯ ಆಗೋದು ಗೊತ್ತಾದಾಗ ಅವರನ್ನು ಕರೆತಂದು ಟಿಕೆಟ್ ಕೊಟ್ಟಿದ್ದೀವಿ. ಅವರು ಟೂರಿಂಗ್ ಟಾಕೀಸ್. ಮಂಡ್ಯಕ್ಕೆ ಹೋದ್ರು, ರಾಮನಗರಕ್ಕೂ ಹೋದ್ರು ಈಗ ಇಲ್ಲಿಗೆ ಬಂದವ್ರೆ ಎಂದು ಕಿಡಿ ಕಾರಿದ್ದಾರೆ.