ತೆಲುಗು ಸಮುದಾಯದ ವಿರುದ್ಧ ನಾಲಿಗೆ ಹರಿಬಿಟ್ಟ ಕಾರಣಕ್ಕೆ ನಟಿ ಹಾಗೂ ಬಿಜೆಪಿ ವಾಕ್ತಾರೆ ಕಸ್ತೂರಿ ಶಂಕರ್ ಅವರನ್ನು ಅರೆಸ್ಟ್ ಮಾಡಲಾಗಿತ್ತು. ಚೆನ್ನೈ ಕೋರ್ಟ್ ನಿರ್ದೇಶನದಂತೆ ಪೊಲೀಸರು ನಟಿಯನ್ನು ಹೈದರಾಬಾದ್ನಲ್ಲಿ ಅರೆಸ್ಟ್ ಮಾಡಿ ಚೆನ್ನೈಗೆ ಕರೆತಂದಿದ್ದರು. ಕಸ್ತೂರಿ ಶಂಕರ್ ಅವರನ್ನೂ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು ಈ ಬಗ್ಗೆ ವಿಚಾರಣೆ ನಡೆಸಿದ ಕೋರ್ಟ್ ಷರತ್ತು ಬದ್ಧ ಜಾಮೀನು ನೀಡಿದೆ.
ಜಾಮೀನು ಪಡೆದು ಹೊರಗೆ ಬರುತ್ತಿದ್ದಂತೆ ಅವರ ಬೆಂಬಲಿಗರು ಶಾಲು ಹೊದಿಸಿ ಶುಭಾಶಯ ಕೋರಿದ್ದಾರೆ. ಕೋರ್ಟ್ ಆವರಣದಲ್ಲಿಯೇ ಒಂದಷ್ಟು ಜನ ಆಕೆಯನ್ನು ಶಾಲು ಹೊದಿಸಿ ಅಭಿನಂದಿಸಿದ್ದಾರೆ.
ಇದೇ ವೇಳೆ ಮಾತನಾಡಿದ ಕಸ್ತೂರಿ ಶಂಕರ್, ಬಿರುಗಾಳಿಯಂತೆ ನನ್ನನ್ನು ಬದಲಾಯಿಸಿದವರಿಗೆ ಧನ್ಯವಾದ. ಕೆಲವರು ನನ್ನನ್ನ ಜೈಲು ಸೇರುವಂತೆ ಮಾಡಿದರು. ನನ್ನದು ಸಣ್ಣ ಧ್ವನಿ ಆದ್ರೆ ಈಗ ಚಂಡಮಾರುತವಾಗಿ ಬದಲಾಗಿದೆ ಅಂತ ಕಸ್ತೂರಿ ಶಂಕರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.