ದೀಕ್ಷಿತ್ ಶೆಟ್ಟಿ ಅಭಿನಯದ ಕೆಟಿಎಂ ಸಿನಿಮಾ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದ್ದು, ಅಭಿಮಾನಿಗಳ ಪ್ರೀತಿಗೆ ದೀಕ್ಷಿತ್ ಶೆಟ್ಟಿ ಭಾವುಕರಾದರು.
ಕೆಟಿಎಂ ಹೌಸ್ ಫುಲ್ ಪ್ರದರ್ಶನ ಹಿನ್ನೆಲೆ ಪ್ರೇಕ್ಷಕಪ್ರಭುವಿಗೆ ದೀಕ್ಷಿತ್ ಧನ್ಯವಾದ ತಿಳಿಸಿದ್ದಾರೆ. ಕೆಟಿಎಂ ಸಿನಿಮಾಗೆ ಎಲ್ಲೆಡೆಯಿಂದ ಅದ್ಭುತ ರೆಸ್ಪಾನ್ಸ್ ಸಿಕ್ಕಿದೆ. ಕೈ ಮುಗಿದು ಪ್ರೇಕ್ಷಕರಿಗೆ ದೀಕ್ಷಿತ್ ಹಾಗೂ ಚಿತ್ರತಂಡ ಥ್ಯಾಂಕ್ಸ್ ಹೇಳಿದ್ದಾರೆ.
ಇಷ್ಟವಾದರೂ ಹಾಗೂ ಇಷ್ಟವಾಗದೇ ಇದ್ರೂ ರಿವ್ಯೂ ಬರೆಯಿರಿ. ನನ್ನದೂ ಇದು ಮೂರು ವರ್ಷದ ಕನಸು. ನಿಮ್ಮ ಪ್ರಾಮಾಣಿಕ ರಿವ್ಯೂ ಬರೆಯಿರಿ. ನಾನು ದಿಯಾ ಹಾಗೂ ದಸರಾದಂತಹ ಸಿನಿಮಾ ಮಾಡಿದರೂ ಫಸ್ಟ್ ಡೇ ಶೋಗಾಗಿ, ಟೈಮ್ ಗಾಗಿ ಹೋರಾಡಬೇಕು. ನಿಮ್ಮ ಸಪೋರ್ಟ್ ನಮಗೆ ಬೇಕು. ಹಾಲಲ್ಲಿಯಾದರೂ ಹಾಕಿ, ನೀರಲ್ಲಿಯಾದರೂ ಹಾಕಿ ಸೈಡ್ ಗೆ ಹಾಕಬೇಡಿ ಎಂದು ದೀಕ್ಷಿತ್ ಮನವಿ ಮಾಡಿದ್ದಾರೆ.