ಬೆಳಗಾವಿ: ಕೆಟಿಸಿಪಿ ತಿದ್ದುಪಡಿ ಕಾಯ್ದೆ 2021 ಜಾರಿಗೆ ತಂದು 3 ವರ್ಷಗಳಾದರೂ ಕಲಂ-4(ಕೆ)(3) ರಂತೆ ನಿಯಮಗಳನ್ನು ರಚಿಸದೇ ಭ್ರಷ್ಟಾಚಾರಕ್ಕೆ ಎಡೆಮಾಡಿಕೊಡುತ್ತಿರುವ ಕುರಿತು ವಿಧಾನ ಪರಿಷತ್ ಶಾಸಕರಾದ ಟಿ.ಎ ಶರವಣ ರವರು ಕರ್ನಾಟಕ ವಿಧಾನಮಂಡಲದ ಚಳಿಗಾಲದ ಅಧಿವೇಶನದಲ್ಲಿ ಧ್ವನಿ ಎತ್ತಿದ್ದಾರೆ. ಸದನದಲ್ಲಿ ಮಾತನಾಡಿದ ಅವರು,
ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ 1961ರ ಮೂಲ ಕಾಯ್ದೆಗೆ 2021ರಲ್ಲಿ ಹೊಸದಾಗಿ ತಿದ್ದುಪಡಿ ತಂದು 4ಐ, 4ಜೆ, 4ಕೆ ಹೊಸ ಕಲಂ ಗಳನ್ನು ಸೇರ್ಪಡೆಗೊಳಿಸಲಾಗಿದೆ. ಆದರೆ ಸದರಿ ಕಾಯ್ದೆಯ ತಿದ್ದುಪಡಿಯಂತೆ 4(ಕೆ)(3) ರಡಿಯಲ್ಲಿ ಸರ್ಕಾರವು ಯೋಜನಾ ಪ್ರಾಧಿಕಾರಗಳಿಲ್ಲದ ನಗರ ಸ್ಥಳೀಯ ಸಂಸ್ಥೆಗಳು / ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಭೂ ಅಭಿವೃದ್ಧಿಗಳಿಗೆ ಸಂಬಂಧಿಸಿದಂತೆ ನಿಯಮಗಳನ್ನು ರಚಿಸಬೇಕಾಗಿದ್ದು,
Drumstick Tea Health Benefits: ನುಗ್ಗೆಸೊಪ್ಪಿನ ಚಹಾ ಕುಡಿಯೋದರಿಂದ ಎಷ್ಟೆಲ್ಲಾ ಲಾಭಗಳಿವೆ ಗೊತ್ತಾ..?
ಇದುವರೆಗೂ ಕಳೆದ ಮೂರು ವರ್ಷಗಳಿಂದ ನಿಯಮಗಳನ್ನು ರಚಿಸದೇ ಸಾರ್ವಜನಿಕರಿಗೆ ತೊಂದರೆಯುಂಟು ಮಾಡಿ ಅಲ್ಲದೆ ಅಧಿಕಾರಿಗಳಲ್ಲಿ ಭ್ರಷ್ಟಾಚಾರಕ್ಕೆ ದಾರಿ ಮಾಡಿ ಕೊಡುತ್ತಿದೆ ಎಂದು ಪ್ರಶ್ನಿಸಿದರು.
ಜೊತೆಗೆ ನಗರ ಯೋಜನಾ ಸಂಬಂಧಪಟ್ಟ ಬಡಾವಣೆ ನಕ್ಷೆಗಳು ಮತ್ತು ಕಟ್ಟಡ ನಕ್ಷೆಗಳು, ಗ್ರಾಮಾಂತರ ಪ್ರದೇಶಗಳಲ್ಲಿ ಆನ್ಲೈನ್ ಆಗಬೇಕು ಎಂದು ಆಗ್ರಹಿಸಿದರು. ಇದಕ್ಕೆ ಉತ್ತರಿಸಿದ ನಗರಾಭಿವೃದ್ದಿ ಸಚಿವರಾದ ಸುರೇಶ್ ಬಿ.ಎಸ್ ಅವರು ಇನ್ನು ಒಂದು ತಿಂಗಳೊಳಗೆ ನಿಯಮಗಳನ್ನು ರೂಪಿಸುವುದಾಗಿ ತಿಳಿಸಿದರು. ಅಲ್ಲದೆ ಟಿ ಎ ಶರವಣ ಅವರು ಕೇಳಿದ್ದ ಈ ಪ್ರಶ್ನೆಗೆ ಕೇವಲ ಇಂಗ್ಲಿಷ್ ಅಲ್ಲಿ ಉತ್ತರಿಸಿದ್ದರ ಬಗ್ಗೆಯೂ ಸದನದಲ್ಲಿ ಪರಿಷತ್ ಶಾಸಕರು ಧ್ವನಿ ಎತ್ತಿದ್ದಾರೆ.