ನೆಲಮಂಗಲ: ಪಾದಚಾರಿ ಮೇಲೆ ಕೆಎಸ್ಆರ್ ಟಿಸಿ ಬಸ್ ಹರಿದು, ವೃದ್ಧ ಪಾದಚಾರಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನೆಲಮಂಗಲ ನಗರದ ಬಸ್ ನಿಲ್ದಾಣದಲ್ಲಿ ಜರುಗಿದೆ.
RCB ತಂಡಕ್ಕೆ ಹೊಸ ನಾಯಕನ ಘೋಷಣೆ: ಪಟಿದಾರ್ ಹೆಸರು ಹೇಳಿ ವಿರಾಟ್ ಹೇಳಿದ್ದೇನು?
ಹಣ್ಣಿನ ವ್ಯಾಪಾರಿ 70 ವರ್ಷದ ರಂಗಸ್ವಾಮಿ ಮೃತ ವೃದ್ಧ. ಕೆಎಸ್ಆರ್ ಟಿಸಿ ಬಸ್ ಚಾಲಕನ ನಿರ್ಲಕ್ಷ್ಯದಿಂದ ಈ ಘಟನೆ ನಡೆದಿದೆ. ಘಟನೆ ಬಳಿಕ ಕೆಎಸ್ಆರ್ ಟಿಸಿ ಚಾಲಕ ಸ್ಥಳದಿಂದ ನಾಪತ್ತೆ ಆಗಿದ್ದು, ಚಾಲಕನ ವಿರುದ್ಧ ಸ್ಥಳೀಯ ಜನರ ಆಕ್ರೋಶ ಹೊರ ಹಾಕಿದ್ದಾರೆ. ಸ್ಥಳಕ್ಕೆ ನೆಲಮಂಗಲ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದರು. ಹಾಗೂ ಇದೇ ವೇಳೆ ಬಸ್ ವಶಕ್ಕೆ ಪಡೆಯಲಾಗಿದೆ.