ಮಂಡ್ಯ:-KSRTC ಬಸ್ ಪಲ್ಟಿಯಾಗಿ ಸುಮಾರು 33 ಮಂದಿ ಪ್ರಯಾಣಿಕರು ಗಾಯಗೊಂಡಿರುವ ಘಟನೆ ಮದ್ದೂರಿನ ರುದ್ರಾಕ್ಷಿಪುರದ ಬಳಿ ಜರುಗಿದೆ.
IPL 2025: RCB ಗೆ ಬಂತು ಆನೆಬಲ: ತಂಡಕ್ಕೆ ಸ್ಟಾರ್ ಪ್ಲೇಯರ್ ಎಂಟ್ರಿ!
ಬಸ್ ಚಲಿಸುತ್ತಿದ್ದ ವೇಳೆ ಚಾಲಕ ಅಚಾನಕ್ಕಾಗಿ ಹಿಂಬದಿ ತಿರುಗಿನೋಡಿದ್ದು, ಈ ವೇಳೆ ಚಕ್ರ ಡಿವೈಡರ್ ಮೇಲೆ ಹತ್ತಿದೆ. ಹೀಗಾಗಿ ಬಸ್ ಪಲ್ಟಿ ಹೊಡೆದಿದೆ. ಇದರಿಂದ ಬಸ್ನಲ್ಲಿದ್ದ ಪ್ರಯಾಣಿಕರ ಪೈಕಿ 30 ಮಂದಿ ಗಾಯಗೊಂಡಿದ್ದಾರೆ.
ಗಾಯಗೊಂಡಿರುವ ಪ್ರಯಾಣಿಕರಿಗೆ ಮದ್ದೂರು ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಜಿಲ್ಲಾಧಿಕಾರಿ ಡಾ. ಕುಮಾರ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ,
ಗಾಯಾಳುಗಳಿಗೆ ಹೆಚ್ಚುವರಿ ಚಿಕಿತ್ಸೆಯ ಅಗತ್ಯ ಬಿದ್ದರೆ ಮಿಮ್ಸ್ ಅಥವಾ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಿ ಚಿಕಿತ್ಸೆ ಕೊಡಿಸುವಂತೆ ಸೂಚನೆ ನೀಡಿದ್ದಾರೆ