ಬೆಂಗಳೂರು:- KSRTC, BMTC ಟಿಕೆಟ್ ದರ ಹೆಚ್ಚಳ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ಈ ಮೂಲಕ ಹೊಸವರ್ಷಕ್ಕೆ ರಾಜ್ಯ ಸರ್ಕಾರ ಪ್ರಯಾಣಿಕರಿಗೆ ಬಿಗ್ ಶಾಕ್ ಕೊಟ್ಟಿದೆ.
ದಿ ಹುಬ್ಬಳ್ಳಿ ಅರ್ಬನ್ ಕೋ ಅಪರೇಟಿವ್ಸ್ ಬ್ಯಾಂಕ್ ಲಿ ನಿರ್ದೇಶಕರಾಗಿ ಆಯ್ಕೆಯಾದ ಮಲ್ಲಿಕಾರ್ಜುನ ಸಾವಕಾರಗೆ ಸನ್ಮಾನ!
ಸಾಲು ಸಾಲು ಬೆಲೆ ಏರಿಕೆಯಿಂದ ತತ್ತರಿಸಿರೋ ಜನರಿಗೆ ಇದೀಗ ಮತ್ತೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಶಕ್ತಿ ಯೋಜನೆಯಿಂದ ಮಹಿಳೆಯರಿಗೆನೋ ಫ್ರೀ ಇದೆ. ಒಂದು ಕೊಟ್ಟು ಮತ್ತೊಂದು ಕಸಿದುಕೊಂಡಿದ್ದಾರೆ ಎನ್ನುವುದು ಜನರ ಮಾತು. ಇದನ್ನೇ ಅಸ್ತ್ರ ಮಾಡ್ಕೊಂಡ ಬಿಜೆಪಿ, ಇವತ್ತು ಬೀದಿಗಿಳಿದು ಸರ್ಕಾರದ ವಿರುದ್ಧ ಹೋರಾಟ ಮಾಡಿದೆ.
ನಾಳೆ ಸಾರಿಗೆ ಇಲಾಖೆ ಅಧಿಕೃತವಾಗಿ ದರ ಏರಿಕೆ ಪಟ್ಟಿ ಬಿಡುಗಡೆ ಮಾಡುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಕೆಎಸ್ಆರ್ಟಿಸಿ ಸಾಮಾನ್ಯ ಬಸ್ ನ ಸದ್ಯದ ಟಿಕೆಟ್ ದರ ಮತ್ತು 15% ರಷ್ಟು ಹೆಚ್ಚಳ ನಂತರದ ದರ ಎಷ್ಟಾಗಬಹುದು ಎನ್ನುವ ಅಂದಾಜು ಪಟ್ಟಿ ಈ ಕೆಳಗಿನಂತಿದೆ.
ಬಸ್ ಪ್ರಯಾಣ ದರ ಎಲ್ಲಿಗೆ ಎಷ್ಟು ಹೆಚ್ಚಳ?
ಬೆಂಗಳೂರು ಟು ಹುಬ್ಬಳ್ಳಿ ಸದ್ಯದ ದರ 501 ರೂ. ಇದೆ. ಹೆಚ್ಚಳದ ನಂತರ 576 ರೂಪಾಯಿ ಆಗಲಿದೆ. ಹಾಗೇ ಬೆಂಗಳೂರು ಟು ಬೆಳಗಾವಿ ಸದ್ಯದ ದರ 631 ರೂ. ಇದೆ. ಏರಿಕೆ ಬಳಿಕ 725 ರೂಪಾಯಿ ಆಗಲಿದೆ. ಬೆಂಗಳೂರು ಟು ಕಲಬುರಗಿ 706 ರೂಪಾಯಿ ಇದ್ದು, ಹೈಕ್ ಬಳಿಕ 811 ರೂ. ಆಗಲಿದೆ. ಬೆಂಗಳೂರು ಟು ಮೈಸೂರು ಸದ್ಯದ ಬಸ್ ಚಾರ್ಜ್ 185 ರೂ. ಇದೆ. ಏರಿಕೆ ಬಳಿಕ 213 ರೂಪಾಯಿ ಆಗಲಿದೆ. ಬೆಂಗಳೂರು ಟು ಮಡಿಕೇರಿ 358 ರೂಪಾಯಿ ಇದ್ದು, ಹೆಚ್ಚಳದ ನಂತ್ರ 411 ರೂಪಾಯಿ ಆಗಲಿದೆ. ಇನ್ನು ಬೆಂಗಳೂರು ಟು ಚಿಕ್ಕಮಗಳೂರು ಸದ್ಯದ ಬಸ್ ಪ್ರಯಾಣ ದರ 285 ರೂಪಾಯಿ ಇದ್ದು, ಏರಿಕೆ ಬಳಿಕ 328 ರೂಪಾಯಿ ಆಗಲಿದೆ.
ಬೆಂಗಳೂರು ಟು ಹಾಸನ ಸದ್ಯದ ಪ್ರಯಾಣ ದರ 246 ರೂಪಾಯಿ ಇದೆ. ಹೆಚ್ಚಳದ ನಂತರ 282 ರೂಪಾಯಿ ಆಗಲಿದೆ. ಬೆಂಗಳೂರು ಟು ಮಂಗಳೂರು ಬಸ್ ಪ್ರಯಾಣ ದರ 424 ಇದ್ದು, ಹೈಕ್ ಆದ್ರೆ 477 ರೂ. ಆಗಲಿದೆ. ಬೆಂಗಳೂರು ಟು ರಾಯಚೂರು ಬಸ್ ಪ್ರಯಾಣ ದರ ಸದ್ಯಕ್ಕೆ 556 ರೂ. ಇದೆ. ಹೆಚ್ಚಳದ ನಂತರ 639 ರೂಪಾಯಿ ಆಗಲಿದೆ. ಇನ್ನು ಬೆಂಗಳೂರು ಟು ಬಳ್ಳಾರಿ ಸದ್ಯದ ದರ 376 ರೂಪಾಯಿ ಇದೆ. ಹೆಚ್ಚಳದ ನಂತ್ರ 432 ರೂಪಾಯಿ ಆಗಲಿದೆ.
ಮೆಜೆಸ್ಟಿಕ್ನಿಂದ ಜಯನಗರಕ್ಕೆ ಸದ್ಯ 20 ರೂಪಾಯಿ ಇದೆ.. ಆದ್ರೆ ದರ ಏರಿಕೆ ಬಳಿಕ 23 ರೂಪಾಯಿ ಆಗಲಿದೆ. ಮೆಜೆಸ್ಟಿಕ್ನಿಂದ ಸರ್ಜಾಪುರಕ್ಕೂ 25 ರೂಪಾಯಿ ಇದೆ.. ಪ್ರಯಾಣ ದರ ಏರಿಕೆ ಬಳಿಕ 28 ರೂ. ಆಗಲಿದೆ. ಮೆಜೆಸ್ಟಿಕ್ ಟು ಅತ್ತಿಬೆಲೆಗೆ ಸದ್ಯದ ಪ್ರಯಾಣ ದರ 25 ರೂಪಾಯಿ ಇದೆ.. ಚಾರ್ಜ್ ಹೈಕ್ ಬಳಿಕ 28 ರೂಪಾಯಿ ಆಗಲಿದೆ. ಮೆಜೆಸ್ಟಿಕ್ನಿಂದ ಹಾರೋಹಳ್ಳಿಗೆ 25 ರೂಪಾಯಿ ದರ ಇದೆ. ಹೆಚ್ಚಳದ ನಂತರ 28.75 ರೂ. ಆಗಲಿದೆ. ಹಾಗೇ ಮೆಜೆಸ್ಟಿಕ್ನಿಂದ ಬನಶಂಕರಿಗೆ 20 ರೂಪಾಯಿ ಇದೆ.. ಪ್ರಯಾಣ ದರ ಜಾಸ್ತಿ ಆದ್ರೆ 23 ರೂಪಾಯಿ ಆಗಲಿದೆ.. ಇನ್ನು ಮೆಜೆಸ್ಟಿಕ್ನಿಂದ ಏರ್ಪೋರ್ಟ್ಗೆ ಈಗ 235 ರೂಪಾಯಿ ಇದೆ.. ದರ ಏರಿಕೆ ಆದ್ರೆ 270 ರೂಪಾಯಿ ಆಗಲಿದೆ.