ಕಲಬುರ್ಗಿ:- ಬಿಸಿಲೂರು ಕಲಬುರಗಿಯಲ್ಲಿ ನಡೆದ ರಾಮೋತ್ಸವದಲ್ಲಿ ಶ್ರೀ ರಾಮನ 101 ಅಡಿ ಎತ್ತರದ ಭಾವಚಿತ್ರಕ್ಕೆ ಹಿಂದೂ ಜಾಗೃತಿ ಸೇನೆ ಕಾರ್ಯಕರ್ತರು ಕ್ಷೀರಾಭಿಷೇಕ ಮಾಡಿದ್ರು.
ಜೈ ಶ್ರೀರಾಮ ಘೋಷಣೆ ಮೂಲಕ ಸಡಗರ ಸಂಭ್ರಮ ಆಚರಿಸಿದ ಕೇಸರಿ ಕಾರ್ಯಕರ್ತರು ಅಯೋಧ್ಯ ಪ್ರಭುವಿಗೆ ನಮೋ ನಮೋ ಅಂತ ಮಂತ್ರ ಜಪಿಸಿ ರಾಮ ಭಕ್ತಿ ಪ್ರದರ್ಶಿಸಿದರು.
ಇದೇವೇಳೆ ಮತ್ತೊಂದೆಡೆ ನಡೆದ ರಾಮೋತ್ಸವದಲ್ಲಿ ಭಕ್ತರು ರಂಗೋಲಿಯಲ್ಲಿ ರಾಮನ ಚಿತ್ರ ಬಿಡಿಸಿ ಭಕ್ತಿ ವ್ಯಕ್ತಪಡಿಸಿದ್ರು.