ಬೆಂಗಳೂರು:- KSDL ಅಧಿಕಾರಿ ಅಮೃತ್ ಶಿರೂರ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ವಿಭಾಗ ಡಿಸಿಪಿ ಸೈದುಲು ಅಡಾವತ್ ಪ್ರತಿಕ್ರಿಯೆ ಕೊಟ್ಟಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧ ಹೀನಾಯ ಸೋಲು: ಸುವರ್ಣಾವಕಾಶ ಕೈ ಚೆಲ್ಲಿದ ಭಾರತ!
KSDL ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ದೂರು ಬಂದಿತ್ತು. ಮನೆ ಮಾಲೀಕ ಗಿರೀಶ್ ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆಗೆ ದೂರು ನೀಡಿದ್ರು. ಠಾಣೆ ಸಿಬ್ಬಂದಿ ಹೋಗಿ ಪರಿಶೀಲನೆ ನಡೆಸಿದ್ದಾರೆ.
ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. 10 ವರ್ಷದಿಂದ ಕೆಎಸ್ ಡಿ ಎಲ್ ನಲ್ಲಿ ಕೆಲಸ ಮಾಡ್ತಿದ್ರು. ಸ್ಥಳದಲ್ಲಿ ಒಂದು ಡೆತ್ ನೋಟ್ ಸಿಕ್ಕಿದೆ. ನನ್ನ ಸಾವಿಗೆ ನಾನೇ ಕಾರಣ ಎಂದು ಡೆತ್ ನೋಟ್ ನಲ್ಲಿ ಬರೆಯಲಾಗಿದೆ. ಮುಂದಿನ ದಿನಗಳಲ್ಲಿ ಪ್ರಕರಣದ ತನಿಖೆ ನಡೆಸಲಾಗುತ್ತೆ. ಡೆತ್ ನೋಟ್ ನಲ್ಲಿ ಯಾವ ಅಧಿಕಾರಿ ಹೆಸರು ಕೂಡ ಉಲ್ಲೇಖ ಇಲ್ಲ.
ನನ್ನ ಕೆಲಸಕ್ಕೆ ನ್ಯಾಯ ಒದಗಿಸಲಾಗ್ತಿಲ್ಲ ಎಂದು ಮಾತ್ರ ಡೆತ್ ನೋಟ್ ನಲ್ಲಿ ಉಲ್ಲೇಖಿಸಲಾಗಿದೆ. ಘಟನಾ ಸ್ಥಳ ನೋಡಿದಾಗ ಯಾವುದೇ ರೀತಿಯ ಸಂಶಯ ಕಂಡು ಬಂದಿಲ್ಲ. ಇನ್ನೂ ಮೆಡಿಕಲ್ ರಿಪೋರ್ಟ್ ಬರಬೇಕಿದೆ. ಅದರ ಆಧಾರದ ಮೇಲೆ ತನಿಖೆ ನಡೆಸಲಾಗುತ್ತೆ. ಅಮೃತ್ ಗೆ ಮೊದಲ ಡಿವೋರ್ಸ್ ಬಳಿಕ ಮತ್ತೊಂದು ಮದುವೆ ಆಗಿದೆ. ಅದು ಕೂಡ ವಿಚ್ಛೇದನ ಪ್ರಕ್ರಿಯೆ ನಡೆಯುತ್ತಿದೆ ಎಂದರು.