ಬೆಂಗಳೂರು: ಒಳ್ಳೆ ಕೆಲಸ..ಕೈ ತುಂಬ ಸಂಬಳ ಸಿಗ್ತಿತ್ತು..ಆದ್ರೆ ಮನೆಯಲ್ಲಿ ನೆಮ್ಮದಿ ಮಾತ್ರ ಇರಲಿಲ್ಲ..ಪ್ರೀತಿಸಿ ಮದುವೆಯಾಗಿದ್ದ ಪತ್ನಿ ಜೊತೆಗೆ ಡಿವೋರ್ಸ್ ಆಗಿತ್ತು..ಎರಡನೆ ಮದುವೆ ಆದ್ರೂ ಸಂಸಾರದ ಬಂಡಿ ಸರಿ ದಿಕ್ಕಿನಲ್ಲಿ ಸಾಗ್ತಿರಲಿಲ್ಲ..ಹಾಗಾಗಿ ಅದು ಕೂಡ ವಿಚ್ಛೇದನ ಹಂತದಲ್ಲಿತ್ತು..ಈ ಎಲ್ಲಾ ಕಾರಣದಿಂದ ಖಿನ್ನತೆಗೆ ಒಳಗಾಗಿದ್ದ ಕೆಎಸ್ ಡಿ ಎಲ್ ಅಧಿಕಾರಿ ಜೀವನವನ್ನೇ ಅಂತ್ಯಗೊಳಿಸಿಕೊಂಡಿದ್ದಾನೆ..
.ಕೆಎಸ್ ಡಿಎಲ್ ಖರೀದಿ ವಿಭಾಗದಲ್ಲಿ ಕೆಲಸ ಮಾಡ್ತಿದ್ದ ಅಧಿಕಾರಿ ಅಮೃತ ಶಿರೂರ್ ಒಂದು ತಿಂಗಳ ಹಿಂದಷ್ಟೇ ಬೆಂಗಳೂರಿಗೆ ವರ್ಗಾವಣೆ ಆಗಿದ್ರು ಅದಕ್ಕೂ ಮೊದಲು ಶಿವಮೊಗ್ಗದಲ್ಲಿ ಜ್ಯೂನಿಯರ್ ಅಸಿಸ್ಟೆಂಟ್ ಆಗಿ ಕೆಲಸಕ್ಕೆ ಸೇರಿ ಸದ್ಯ ಅಧಿಕಾರಿಯಾಗಿ ಬಡ್ತಿ ಪಡೆದಿದ್ರು..ಬೆಂಗಳೂರಿಗೆ ಬಂದಿದ್ದ ಅಮೃತ್ ಮಹಾಲಕ್ಷ್ಮಿ ಲೇಔಟ್ ನಮುನೇಶ್ವರ ಬ್ಲಾಕ್ ನಲ್ಲಿ ಬಾಡಿಗೆ ಮನೆ ಪಡೆದು ವಾಸವಾಗಿದ್ರು..ಆದ್ರೆ ಮಾನಸಿಕ ಖಿನ್ನತೆಗೆ ಒಳಗಾಗಿ ಡಿಸಂಬರ್ 28 ರಂದು ಸಂಜೆ 5.30 ಕ್ಕೆ ಮನೆಯಲ್ಲಿಯೇ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯರ ಮಾಡಿಕೊಂಡಿದ್ದಾರೆ..
ಬೆಳ್ಳಂ ಬೆಳಗ್ಗೆ ಟೀ ಜೊತೆಗೆ ಬಿಸ್ಕತ್ ತಿಂತೀರಾ..? ಹಾಗಾದ್ರೆ ಈ ಅಭ್ಯಾಸ ಈಗ್ಲೇ ಬಿಟ್ಟು ಬಿಡಿ!
ಸಾವಿಗು ಮುನ್ನ ಡೆತ್ ನೋಟ್ ಬರೆದಿದ್ದ ಅಮೃತ್ ಶಿರೂರ್ ತನ್ನ ಸಾವಿಗೆ ಕಾರಣವನ್ನ ಉಲ್ಲೇಖಿಸಿದ್ದಾರೆ..ಡೆತ್ ನೋಟ್ ಅನ್ನ ಕೈನಲ್ಲಿಯೇ ಹಿಡಿದುಕೊಂಡು ನೇಣಿಗೆ ಕೊರಳೊಡ್ಡಿದ್ದಾನೆ..ಹಾಗಾದ್ರೆ ಅಮೃತ್ ಶಿರೂರ್ ಬರೆದಿರುವ ಡೆತ್ ನೋಟ್ ನಲ್ಲಿ ಏನಿದೆ ಅನ್ನೋದನ್ನ ನೋಡೋದಾದ್ರೆ.. ನನ್ನ ತಂದೆ ತಾಯಿಗೆ ನಾನು ಉತ್ತಮ ಮಗನಾಗಲಿಲ್ಲ..ಜೊತೆಗೆ ನನ್ನ ಪತ್ನಿಗೆ ಒಳ್ಳೆಯ ಗಂಡನಾಗಲಿಲ್ಲ..ನನ್ನ ಸಾವಿಗೆ ನಾನೆ ಕಾರಣ..ನನ್ನ ಸಾವಿಗೆ ಯಾರು ಕೂಡ ಕಾರಣರಲ್ಲ..ನನ್ನ ಕೆಲಸಕ್ಕೆ ನಾನು ನ್ಯಾಯ ಒದಗಿಸಲಾಗ್ತಿಲ್ಲ ಅಂತಾ ಬರೆದಿದ್ದು..ಅಧಿಕಾರಿಗಳ ಒತ್ತಡ ಏನಾದ್ರು ಇತ್ತಾ ಅನ್ನುವ ನಿಟ್ಟಿನಲ್ಲಿ ತನಿಖೆ ನಡೆಸಲಾಗ್ತಿದೆ..
ಮೂಲತಃ ಶಿವಮೊಗ್ಗದ ಶಿರಳಕೊಪ್ಪ ಗ್ರಾಮದವನಾದ ಅಮೃತ್ ಶಿರೂರ್ 2014 ರಲ್ಲಿ ಕೆ ಎಸ್ ಡಿ ಎಲ್ ನಲ್ಲಿ ಕೆಲಸಕ್ಕೆ ಸೇರಿದ್ರು..ಮೊದಲು ಪ್ರೇಮವಿವಾಹವಾಗಿದ್ದ ಈತನ ದಾಂಪತ್ಯ ಜೀವನದಲ್ಲಿ ಬಿರುಕು ಕಾಣಿಸಿಕೊಂಡಿತ್ತು..ಪತ್ನಿಯಿಂದ ವಿಚ್ಛೇದನ ಪಡೆದಿದ್ದ ಅಮೃತ್ ಶಿರೂರ್ 2019ರಲ್ಲಿ ಮತ್ತೊಂದು ಮದುವೆಯಾಗಿದ್ದ ಆದ್ರೆ ಎರಡನೆ ಮದುವೆ ಬಳಿಕವೂ ಸಂಸಾರ ಹಳಿ ತಪ್ಪಿತ್ತು.. ಇಬ್ಬರ ನಡುವೆ ವೈಮನಸ್ಸು ಉಂಟಾಗಿ ಪತ್ನಿಯಿಂದ ದೂರವಾಗಿದ್ದ.ಅಲ್ಲದೇ ದಂಪತಿ ವಿಚ್ಛೇದನ ಅರ್ಜಿ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಮುನೇಶ್ವರ ಬ್ಲಾಕ್ ನಲ್ಲಿ ಬಾಡಿಗೆ ಮನೆ ವೊಂದರಲ್ಲಿ ಏಕಾಂಗಿಯಾಗಿ ವಾಸವಾಗಿದ್ದ..ಅಮೃತ್ ಶಿರೂರ್ ಕೌಟುಂಬಿಕ ಕಾರಣಕ್ಕಾಗಿ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗ್ತಿದೆ..
ಸದ್ಯ ಘಟನೆ ಸಂಬಂಧ ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿರೊ ಮಹಾಲಕ್ಷ್ಮೀ ಲೇಔಟ್ ಪೊಲೀಸರು ಅಮೃತ್ ಶಿರೂರ್ ಸಾವಿನ ತನಿಖೆ ನಡೆಸ್ತಿದ್ದು..ಡೆತ್ ನೋಟ್ ಎಫ್ಎಸ್ಎಲ್ ಗೆ ರವಾನಿಸಲು ಸಿದ್ಧತೆ ನಡೆಸಿಕೊಂಡಿದ್ದಾರೆ..ಜೊತೆಗೆ ಮೆಡಿಕಲ್ ರಿಪೋರ್ಟ್ ಬಂದ ಬಳಿಕ ವರದಿ ಆಧರಿಸಿ ತನಿಖೆ ಮಡೆಸಲಿದ್ದಾರೆ..ತನಿಖೆ ಬಳಿಕವಷ್ಟೇ ಸಾವಿನ ಸತ್ಯಾಸತ್ಯತೆ ಗೊತ್ತಾಗಲಿದೆ.