ಹುಬ್ಬಳ್ಳಿ: ಫೆಬ್ರುವರಿ 4 ರಂದು ಬಸವಣ್ಣನ ನಾಡು ಬಸವಣಬಾಗೇವಾಡಿಯಲ್ಲಿ ಕ್ರಾಂತಿವೀರ ಬ್ರಿಗೇಡ್ ಕೆಲಸಕ್ಕೆ ಚಾಲನೆ ನೀಡಲಾಗುತ್ತದೆ. 1008 ಮಠಾಧೀಶರ ಪಾದ ಪೂಜೆ ಮಾಡಿ ಬ್ರಿಗೇಡ್ ಸ್ಥಾಪನೆ ಮಾಡಲಾಗುತ್ತದೆ. ಮಾಜಿ ಸಚಿವ ಈಶ್ವರಪ್ಪ ನೇತೃತ್ವದಲ್ಲಿ ಕ್ರಾಂತಿವೀರ ಬ್ರಿಗೇಡ್ ಸ್ಥಾಪನೆ ಮಾಡಲಾಗುವುದು ಎಂದು ಮಕನಾಪೂರದ ಸೋಮೇಶ್ವರ ಸ್ವಾಮೀಜಿ ಹೇಳಿದರು.
ಹುಬ್ಬಳ್ಳಿಯಲ್ಲಿಂದು ಮಾಜಿ ಸಿಎಂ ಈಶ್ವರಪ್ಪ ನೇತೃತ್ವದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ವಕ್ಫ ವಿಚಾರವಾಗಿ ಜನ ಹೆದರಿದ್ದಾರೆ. ಹುಲಿ ಬಂದಾಗ,ಸಿಂಹ ಬಂದಾಗ ಜನ ಹೇಗೆ ಹೆದರ್ತಾರೋ. ಹಾಗೆ ವಕ್ಫ ಹೆಸರು ಬಂದಾಗ ಮಠಾಧೀಶರು ಹೆದರಿದ್ದಾರೆ. ಹಿಂದೂ ಧರ್ಮ,ಮಠ ಮಂದಿರ ರಕ್ಷಣೆಗೆ ನಾವಿದ್ದೇವೆ. ಹೀಗಾಗಿ ನಾವು ಕ್ರಾಂತಿವೀರ ಬ್ರಿಗೇಡ್ ಸ್ಥಾಪನೆ ಮಾಡಿದ್ದೇವೆ ಎಂದರು.
EPF Death Claim: ಆಧಾರ್ ದೃಢೀಕರಣ ಇಲ್ಲದೇ ಇದ್ದರೂ EPF ಡೆತ್ ಕ್ಲೈಮ್ ಸಾಧ್ಯವೆ..? ಇಲ್ಲಿದೆ ಮಾಹಿತಿ
ವಕ್ಫ ವಿಚಾರವಾಗಿ ನಾವು ಕಲಬುರಗಿಗೆ ಬಂದ್ ಕರೆ ಕೊಟ್ಟಿದ್ದೇವು. ಇದೇ 20 ರಂದು ಕಲಬುರಗಿ ಬಂದ್ ಗೆ ಕರೆ ಕೊಟ್ಟಿದ್ವೀ. ಆದ್ರೆ ಡಿಸಿ ಕೆಲ ಮಠಗಳ ಪಹಣಿಯಲ್ಲಿದ್ದ ವಕ್ಫ ಎಂದು ತಗೆದುಹಾಕಿದ್ದಾರೆ ಎಂದು ಅವರು ಹೇಳಿದರು.
ನಮಗೆ ಈಶ್ವರಪ್ಪ ಬೆನ್ನೆಲುಬಾಗಿ ನಿಂತಿದ್ದಾರೆ. ನಮ್ಮ ಸಂಘಟನೆಗೆ ರಾಜಕೀಯ ಉದ್ದೇಶ ಇಲ್ಲ. ಯಾವ ಪಕ್ಷದವರು ಬಂದರೂ ನಮ್ಮ ಸ್ವಾಗತಕ್ಕೆ ಸ್ವಾಗತ. ವಕ್ಫ ಅನ್ನೋದು ದೆವ್ವ. ದೆವ್ವ ನಮ್ಮ ಮುಂದೆ ಬಂದು ನಿಂತಿದೆ ಎಂದ ಅವರು, ಫೆಬ್ರುವರಿ 4 ರಂದು ಬಸವಣ್ಣನ ನಾಡು ಬಸವನ ಬಾಗೇವಾಡಿಯಲ್ಲಿ ಕ್ರಾಂತಿವೀರ ಬ್ರಿಗೇಡ್ ಕೆಲಸಕ್ಕೆ ಚಾಲನೆ ನೀಡಲಾಗುತ್ತದೆ ಎಂದು ಅವರು ಮಾಹಿತಿ ನೀಡಿದರು.
ಮಠಾಧೀಶರ ಪಾದ ಪೂಜೆ ಮಾಡಿ ಬ್ರಿಗೇಡ್ ಸ್ಥಾಪನೆ ಮಾಡಲಾಗುತ್ತದೆ. ಬ್ರಿಗೇಡ್ ಗೆ ಈಶ್ವರಪ್ಪನವರು ಮಾರ್ಗದರ್ಶಕರು. ಅವರು ಹಿರಿಯರು ಇದ್ದಾರೆ,ಅವರು ಬ್ರಿಗೇಡ್ ಗೆ ಮಾರ್ಗದರ್ಶಕರಾಗಿ ಕೆಲಸ ಮಾಡ್ತಾರೆ ಎಂದು ವಿಜಯಪುರ ಜಿಲ್ಲೆಯ ಮಕನಾಪೂರ ಮಠದ ಸೋಮೇಶ್ವರ ಸ್ವಾಮೀಜಿ ಹೇಳಿದರು.