ಕೆ.ಆರ್.ಪುರ: ಕದಂಬ ಡಾ.ವಿಷ್ಣು ಅಭಿಮಾನಿಗಳ ಬಳಗದ ವತಿಯಿಂದ ಸಾಹಸಸಿಂಹ ಡಾ.ವಿಷ್ಣುವರ್ಧನ್ ಅವರ 74ನೇ ಹುಟ್ಟುಹಬ್ಬವನ್ನು ಭಟ್ಟರಹಳ್ಳಿಯಲ್ಲಿ ಅದ್ದೂರಿಯಾಗಿ ಆಚರಣೆ ಮಾಡಲಾಯಿತು.
ನಾಗಮಂಗಲ ಗಲಭೆ ಕೇಸ್: ಆರ್ ಅಶೋಕ್, ಶೋಭಾ ಕರಂದ್ಲಾಜೆ ವಿರುದ್ಧ ದಾಖಲಾಯ್ತು FIR!
ಮಾಜಿ.ಎಪಿಎಂಸಿ ನಾಮ ನಿರ್ದೇಶಿತ ಸದಸ್ಯ ಬಿ.ವಿ.ಮಂಜುನಾಥ ಅವರು ಮಾತನಾಡಿ ನೆಚ್ಚಿನ ನಟನ ಹುಟ್ಟುಹಬ್ಬವನ್ನು ಪ್ರತಿವರ್ಷದಂತೆ ಈ ವರ್ಷವು ಕೇಕ್ ಕತ್ತರಿಸುವ ಮೂಲಕ ಸಮಾಜಮುಖಿಯಾಗಿ ಆಚರಣೆ ಮಾಡಲಾಯಿತು ಎಂದು ಹೇಳಿದರು.
ಮಹಾನ್ ನಟ ನಮ್ಮ ಜೊತೆಗೆ ಇಲ್ಲದಿದ್ದರೂ ಅವರು ಮಾಡಿರುವ ಕಾರ್ಯಗಳು ಹಾಗೂ ಅವರು ನಟಿಸಿರುವ ಮೊದಲ ಚಿತ್ರದಿಂದ ಕೊನೆಯ ಚಿತ್ರದವರೆಗೆ ಅಭಿಮಾನಿಗಳಿಗೆ ರಸದೌತನ ಉಣಬಡಿಸಿದ ಮಹಾನ್ ನಟ ಎಂದು ಸ್ಮರಿಸಿದರು.
ದಿವಂಗತ ಸಾಹಸಸಿಂಹ ಡಾ. ವಿಷ್ಣುವರ್ಧನ್ ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಪ್ರತಿಮೆಗೆ ವಿವಿಧ ಬಗೆಯ ಹೂಗಳಿಂದ ಅಲಂಕಾರ ಗೊಳಿಸಲಾಗಿದ್ದು,ಸಾರ್ವಜನಿಕರಿಗೆ ಅನ್ನದಾನ
ಮಾಡಲಾಯಿತು ಎಂದರು.ಅವರ ಹೆಸರಿನಲ್ಲಿ ಪ್ರತಿ ವರ್ಷ ನಮ್ಮಿಂದಾಗುವ ಕೆಲವು ಸಮಾಜಮುಖಿ ಕಾರ್ಯಗಳು ಮಾಡುತ್ತಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಸುಬ್ಬಣ್ಣ,ವೆಂಕಿ,
ಮುನಿಸ್ವಾಮಣ್ಣ,ಚಂದ್ರಣ್ಣ,
ಪ್ರಭು,ದಿಲೀಪ್,ಬಾಬು,ರವಿ ಮತ್ತಿತರರು ಇದ್ದರು.