ಬೆಂಗಳೂರು: KPSC ಗೆಜೆಟೆಡ್ ಪ್ರೊಬೇಷನರ್ಸ್ (KAS) 384 ಹುದ್ದೆಗಳ ಪೂರ್ವಭಾವಿ ಪರೀಕ್ಷೆ ಇಂದು ನಡೆಯಲಿದೆ
ಕರ್ನಾಟಕ ಲೋಕಸೇವಾ ಆಯೋಗದ ವತಿಯಿಂದ ಒಟ್ಟು 384 ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ. ಕೆಪಿಎಸ್ಸಿ ಮಾಹಿತಿ ಪ್ರಕಾರ 2,10,910 ಅರ್ಜಿಗಳು ಸಲ್ಲಿಕೆಯಾಗಿವೆ. ಈ ಮೊದಲು ಆಗಸ್ಟ್ 25ರಂದು ಪರೀಕ್ಷೆ ದಿನಾಂಕವನ್ನು ನಿಗದಿಗೊಳಿಸಲಾಗಿತ್ತು. ಆದರೆ ಅಂದು ಐಬಿಪಿಎಸ್ ಪರೀಕ್ಷೆಗಳು ಇರುವ ಹಿನ್ನಲೆಯಲ್ಲಿ ಪರೀಕ್ಷಾ ದಿನಾಂಕವನ್ನು ಬದಲಾವಣೆ ಮಾಡಲಾಗಿದೆ. ಆಗಸ್ಟ್ 27ರಂದು ಪರೀಕ್ಷೆಗಳು ನಡೆಯಲಿವೆ.
ಪರೀಕ್ಷೆ ಬರೆಯುವ ಅಭ್ಯರ್ಥಿಗಳಿಗೆ ಹಲವು ಸೂಚನೆಗಳನ್ನು ನೀಡಲಾಗಿದೆ.
- ಅಭ್ಯರ್ಥಿಗಳು ಪ್ರವೇಶ ಪತ್ರದ ಜೊತೆಗೆ ಕಪ್ಪು ಬಣ್ಣದ ಬಾಲ್ ಪಾಯಿಂಟ್ ಪೆನ್ನನ್ನು ತರತಕ್ಕದ್ದು.
ಒಎಂಆರ್ ಉತ್ತರ ಹಾಳೆಯಲ್ಲಿನ ಎಲ್ಲಾ ನಮೂದು (Marking) ಗಳನ್ನು ಕಪ್ಪು ಬಾಲ್ ಪಾಯಿಂಟ್ ಪೆನ್ನಿನಿಂದ ಮಾತ್ರ ಮಾಡತಕ್ಕದ್ದು. - ಪ್ರವೇಶ ಪತ್ರವನ್ನು ಪಡೆದುಕೊಂಡ ಕೂಡಲೇ ಅದರಲ್ಲಿನ ವಿವರಗಳನ್ನು ಪರಿಶೀಲಿಸಿಕೊಳ್ಳುವುದು. ಪ್ರವೇಶ ಪತ್ರದಲ್ಲಿ ಭಾವಚಿತ್ರವು ಸ್ಪಷ್ಟವಾಗಿಲ್ಲದಿದ್ದಲ್ಲಿ ಅಥವಾ ಮುದ್ರಿತವಾಗದಿದ್ದಲ್ಲಿ ಪರೀಕ್ಷಾದಿನದಂದು ಅಭ್ಯರ್ಥಿಯು ಸಿಂಧುವಾದ ತನ್ನ ಗುರುತಿನ ಚೀಟಿಯ ಪ್ರತಿ ಪ್ರವೇಶಪತ್ರದ ಪ್ರತಿ ಹಾಗೂ ಪಾಸ್ಪೋರ್ಟ್/ ಸ್ಟ್ಯಾಂಪ್ಅಳತೆಯ 2 ಭಾವಚಿತ್ರಗಳನ್ನು ಕಡ್ಡಾಯವಾಗಿ ಸಂವೀಕ್ಷಕರಿಗೆ ನೀಡಿ ಒಂದು ಭಾವಚಿತ್ರವನ್ನು ನಾಮಿನಲ್ ರೋಲ್ ನಲ್ಲಿನ ನಿಗದಿತ ಅಂಕಣದಲ್ಲಿ ಮತ್ತು ಇನ್ನೊಂದು ಭಾವಚಿತ್ರವನ್ನು ಈ ಸಂಬಂಧ ಸಲ್ಲಿಸುವ ಮುಚ್ಚಳಿಕೆ ಪತ್ರದಲ್ಲಿ ಅಂಟಿಸಿ ದೃಢೀಕರಿಸುವುದು.
- ಅಭ್ಯರ್ಥಿಗಳಿಗೆ ವಸ್ತ್ರ ಸಂಹಿತೆ:
- ಕೆಎಎಸ್ 384 ಹುದ್ದೆಗಳ ಪೂರ್ವಭಾವಿ ಪರೀಕ್ಷೆಯನ್ನು ಬರೆಯಲು ಆಗಮಿಸುವ ಅಭ್ಯರ್ಥಿಗಳು ತುಂಬು ತೋಳಿನ ಶರ್ಟ್/ T.Shirt/ Frills/ ಪದರಗಳುಳ್ಳ (layered) ವಿವಿಧ ರೀತಿಯ ವಿನ್ಯಾಸವುಳ್ಳ ವಸ್ತ್ರಗಳನ್ನು ಧರಿಸುವುದನ್ನು ನಿಷೇಧಿಸಿದೆ ಹಾಗೂ ಸರಳ ಉಡುಪು ಧರಿಸಿ ಪರೀಕ್ಷೆಗೆ ಹಾಜರಾಗುವುದು.
- ಯಾವುದೇ ರೀತಿಯ ಆಭರಣಗಳನ್ನು (Metal and Non metal) ಧರಿಸುವಂತಿಲ್ಲ (ಮಂಗಳ ಸೂತ್ರ ಮತ್ತು ಕಾಲುಂಗುರ ಹೊರತುಪಡಿಸಿ). ಶೂ ಮತ್ತು ಸಾಕ್ಸ್ ಧರಿಸುವುದನ್ನು ನಿಷೇಧಿಸಿದೆ ಹಾಗೂ ಸರಳ ಚಪ್ಪಲಿಗಳನ್ನು ಧರಿಸಿ ಹಾಜರಾಗುವುದು.
- ಅಭ್ಯರ್ಥಿಗಳು ಕಡ್ಡಾಯವಾಗಿ ತರಬೇಕಾದ ದಾಖಲೆಗಳು:
- ಪರೀಕ್ಷೆಯ ಪ್ರವೇಶ ಪತ್ರ (Exam Admit Card). (original Identification card), Passport, PAN CARD, Voter ID, Aadhar-U.I.D., Govt. Employer Id. (or) Driving Licence ಯಾವುದಾದರೊಂದು. ಪಾಸ್ಪೋರ್ಟ್/ ಸ್ಟ್ಯಾಂಪ್ಅಳತೆಯ 2 ಭಾವ ಚಿತ್ರಗಳು (Photo). ಅಂಗವಿಕಲ ಅಭ್ಯರ್ಥಿಗಳು (Person With Disabilities Candidates) ನಿಗದಿತ ಅಂಗವಿಕಲ ಪ್ರಮಾಣ ಪತ್ರಗಳು. ಅಭ್ಯರ್ಥಿಯು ಪ್ರವೇಶ ಪತ್ರವನ್ನು ಹಾಗೂ ಒಂದು ಗುರುತಿನ ಚೀಟಿಯನ್ನು ಹಾಜರುಪಡಿಸದಿದ್ದಲ್ಲಿ ಪರೀಕ್ಷೆಗೆ ಅನುಮತಿಸಲಾಗುವುದಿಲ್ಲ. (ನಕಲು ಪ್ರತಿ ಅಥವಾ ಸ್ಕ್ಯಾನ್ ಮಾಡಿರುವ ಪ್ರತಿಯನ್ನು ಅನುಮತಿಸಲಾಗುವುದಿಲ್ಲ).
- ಒಟ್ಟು ಎರಡು ಪತ್ರಿಕೆಗಳ ಪರೀಕ್ಷೆಗಳು ಆಗಸ್ಟ್ 27ರ ಮಂಗಳವಾರ ನಡೆಯಲಿದೆ. ಬೆಳಗ್ಗೆ 10 ರಿಂದ 12 ಗಂಟೆಯ ತನಕ ಪತ್ರಿಕೆ-1 ಪರೀಕ್ಷೆ ನಡೆಯಲಿದೆ. ಮಧ್ಯಾಹ್ನ 2 ರಿಂದ 4 ಗಂಟೆಯ ತನಕ ಪತ್ರಿಕೆ-2 ಪರೀಕ್ಷೆಗಳು ನಡೆಯಲಿವೆ.