ಕೊಪ್ಪಳ:- ಕೊಪ್ಪಳ ಗವಿಮಠದ ಜಾತ್ರೆಗೆ ಅದ್ದೂರಿ ತೆರೆ ಬಿದ್ದಿದೆ. ಇನ್ನು ಕಳೆದ ಹದಿನೈದು ದಿನಗಳಿಂದ ನಡೆದ ಜಾತ್ರೆಯಲ್ಲಿ ಸರಿಸುಮಾರು ಇಪ್ಪತ್ತು ಲಕ್ಷಕ್ಕೂ ಅಧಿಕ ಜನ ದಾಸೋಹದಲ್ಲಿ ಊಟ ಮಾಡಿದ್ದಾರೆ.
ಮನ್ ಮುಲ್ ಚುನಾವಣೆ ; ಎಸ್.ಪಿ.ಸ್ವಾಮಿ ವಿರುದ್ಧ ಶಿಸ್ತು ಕ್ರಮ – ಮಾಜಿ ಜಿಲ್ಲಾಧ್ಯಕ್ಷ ಸಿ.ಪಿ.ಉಮೇಶ್
ಕೊಪ್ಪಳದ ಗವಿಮಠದ ಜಾತ್ರೆಯನ್ನು ದಕ್ಷಿಣ ಭಾರತದ ಕುಂಭಮೇಳ ಎಂದು ಕರೆಯುತ್ತಾರೆ. ಇದಕ್ಕೆ ಕಾರಣ, ಜಾತ್ರೆಯಲ್ಲಿ ಭಾಗಿಯಾಗುವ ಲಕ್ಷ ಲಕ್ಷ ಜನರು. ಇದೇ ಜನವರಿ 15 ರಂದು ಗವಿಸಿದ್ದೇಶ್ವರರ ರಥೋತ್ಸವ ಅದ್ದೂರಿಯಾಗಿ ನಡೆದಿತ್ತು. ಅಂದು ಸರಿಸುಮಾರು ಐದು ಲಕ್ಷ ಜನ ಭಾಗಿಯಾಗಿದ್ದರು. ಜನವರಿ 15 ರಿಂದ ಆರಂಭವಾಗಿದ್ದ ಜಾತ್ರೆಗೆ ಇಂದು ವಿದ್ಯುಕ್ತ ತೆರೆ ಬಿದ್ದಿದೆ
ಜನವರಿ 12 ರಿಂದಲೇ ಆರಂಭವಾಗಿದ್ದ ಮಹಾದಾಸೋಹಕ್ಕೆ ಕೂಡ ಇಂದು ತೆರೆಬಿದ್ದಿದೆ. ಇಂದು ಕೂಡ ಲಕ್ಷಕ್ಕೂ ಅಧಿಕ ಜನರು ಮಹಾ ದಾಸೋಹದಲ್ಲಿ ಪ್ರಸಾದ ಸೇವಿಸಿದರು. ಇಂದು ಕೊನೆಯ ದಿನ್ನ ಹಿನ್ನೆಲೆಯಲ್ಲಿ ಗೋದಿ ಹುಗ್ಗಿ, ಅನ್ನ, ಸಾರು, ಬದನೆಕಾಯಿ ಪಲ್ಲೆಯನ್ನು ಮಾಡಲಾಗಿತ್ತು.
ಮುಂಜಾನೆ ಏಳುಗಂಟೆಯಿಂದ ರಾತ್ರಿ ಹನ್ನೆರಡುಗಂಟೆವರಗೆ ಲಕ್ಷಕ್ಕೂ ಅಧಿಕ ಜನರು ಸರದಿ ಸಾಲಿನಲ್ಲಿ ನಿಂತು ಪ್ರಸಾದ ಸೇವಿಸಿದ್ದಾರೆ.