ತಮಿಳು ಚಿತ್ರರಂಗದ ಖ್ಯಾತ ನಟ ವಿಶಾಲ್ ಅವರನ್ನು ಕಂಡು ಅಭಿಮಾನಿಗಳು ಶಾಕ್ ಆಗಿದ್ದಾರೆ. ಏಕಾಏಕಿ ವಿಶಾಲ್ ಯಾಕೆ ಹೀಗಾದರು ಎಂಬು ಅಭಿಮಾನಿಗಳು ಕಂಗಲಾಗಿದ್ದಾರೆ. ಕಟ್ಟು ಮಸ್ತಾದ ದೇಹ, ಅದ್ಭುತವಾದ ಮಾತುಗಾರ ವಿಶಾಲ್ ಏಕಾಏಕಿ ಬಾಗಿದ್ದಾರೆ. ಅವರ ದೇಹ ನಡುಗುತ್ತಿದ್ದು ಬಾಯಿಂದ ಪದಗಳೇ ಸ್ಪಷ್ಟವಾಗಿ ಉಚ್ಚರಣೆ ಆಗುತ್ತಿಲ್ಲ. ವಿಶಾಲ್ ಸ್ಥಿತಿ ಕಂಡು ಅಭಿಮಾನಿಗಳು ಕಣ್ಣೀರಿಡುತ್ತಿದ್ದಾರೆ.
ಎರಡು ದಿನಗಳ ಹಿಂದೆ ವಿಶಾಲ್ ಮಧಾಗಜಾರಾಜಾ ಸಿನಿಮಾದ ಕಾರ್ಯಕ್ರಮವೊಂದರಲ್ಲಿ ಕಾಣಿಸಿಕೊಂಡಿದ್ದರು. ಈ ವೇಳೆ ವಿಶಾಲ್ ಅವರನ್ನು ನೋಡಿ ಪ್ರತಿಯೊಬ್ಬರು ಶಾಖ್ ಆಗಿದ್ದರು. ವಿಶಾಲ್ ಅವರ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದವು. ಸದ್ಯ ವಿಶಾಲ್ ಸ್ಥಿತಿಯನ್ನು ಕಂಡ ತಮಿಳು ಚಿತ್ರರಂಗ ಅವರ ಸಹಾಯಕ್ಕೆ ನಿಂತಿದೆ.
ಸುದ್ದಿ ತಿಳಿದ ವಿಶಾಲ್ ಅವರ ಪ್ರತಿಯೊಬ್ಬ ಸ್ನೇಹಿತರು ವಿಶಾಲ್ ಗೆ ಕರೆ ಮಾಡಿ ಆರೋಗ್ಯ ವಿಚಾರಿಸಿದ್ದಾರೆ. ಅಲ್ಲದೆ ಅವರು ಮೊದಲಿನಂತಾಗಲು ಏನೆಲ್ಲಾ ನೆರುವು ಬೇಕೋ ಆ ಎಲ್ಲಾ ನೆರವನ್ನು ನೀಡಲು ಸಿನಿಮಾ ಜಗತ್ತಿನ ಗೆಳೆಯರು ಸಜ್ಜಾಗಿದ್ದಾರೆ. ಕೆಲವು ಸ್ನೇಹಿತರು ವೈಯಕ್ತಿಕವಾಗಿ ನಟನನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದಾರೆ. ಆದಷ್ಟು ಬೇಗ ವಿಶಾಲ್ ಮೊದಲಿನಂತಾಗಲಿ ಎಂದು ಪ್ರತಿಯೊಬ್ಬರು ಆಶೀಸುತ್ತಿದ್ದಾರೆ.