ಕೋಲಾರ:- ಹಣದ ವಿಚಾರವಾಗಿ ನಡೆದ ಗಲಾಟೆಯಲ್ಲಿ ಯುವಕನಿಗೆ ಚಾಕು ಇರಿದಿರುವ ಘಟನೆ ಕೋಲಾರ ನಗರದ ಶಾರದಾ ಟಾಕೀಸ್ ಬಳಿ ಜರುಗಿದೆ.
MS Dhoni: ಧೋನಿ ಮಗಳ ಶಾಲಾ ಶುಲ್ಕ ಎಷ್ಟು ಗೊತ್ತಾ..? ಗೊತ್ತಾದ್ರೆ ಶಾಕ್ ಆಗ್ತೀರಾ..!
ಬೋವಿ ನಗರ ನಿವಾಸಿ ಸುನಿಲ್ ಕುಮಾರ್ ಎಂಬಾತನಿಗೆ ಚಾಕು ಇರಿಯಲಾಗಿದೆ. ಸುಮನ್ ಎಂಬಾತನಿಗೆ ಚಾಕುವಿನಿಂದ ಹಲ್ಲೆಗೆ ಯತ್ನಿಸಲಾಗಿದ್ದು, ಈ ವೇಳೆ ಸುನಿಲ್ ಕಾಲಿಗೆ ಗಾಯವಾಗಿದೆ. ರಾಹುಲ್ ಹಾಗೂ ಕೃಷ್ಣೋಜಿರಾವ್ ಎಂಬುವರಿಂದ ಚಾಕು ಇರಿಯಲಾಗಿದೆ. ರಾಹುಲ್ ಪರಾರಿ, ಕೃಷ್ಣೋಜಿರಾವ್ ಗು ಗಾಯವಾಗಿದ್ದು, ಗಾಯಳು ಸುನಿಲ್ ಹಾಗೂ ಕೃಷ್ಣೋಜಿರಾವ್ ರನ್ನು ಜಿಲ್ಲಾಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಕೋಲಾರ ನಗರ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.