ಬೆಂಗಳೂರು: ಕೋಲಾರ ಸೀಟು ಜೆಡಿಎಸ್ಗೆ ಬಿಟ್ಟು ಕೊಟ್ಟಿದ್ದೇವೆ ಎಂದು ಅಧಿಕೃತವಾಗಿ ರಾಧಾ ಮೋಹನ್ ದಾಸ್ ಅಗರವಾಲ್ ಘೋಷಣೆ ಮಾಡಿದ್ದಾರೆ.
BIGG News: 5, 8, 9ನೇ ತರಗತಿಗೆ ಪರೀಕ್ಷೆ ನಡೆಸಲು ವೇಳಾಪಟ್ಟಿ ಪ್ರಕಟ: ಗೊಂದಲಕ್ಕೆ ತೆರೆ ಎಳೆದ ಶಿಕ್ಷಣ ಇಲಾಖೆ!
ಈ ಸಂಬಂಧ ಇಂದು ಅರಮನೆ ಮೈದಾನದ ವೃಕ್ಷ ಸಭಾಂಗಣದಲ್ಲಿ ರಾಜ್ಯ ಮಟ್ಟದ ಕಾರ್ಯಾಗಾರದಲ್ಲಿ ರಾಜ್ಯ ಚುನಾವಣಾ ಉಸ್ತುವಾರಿ ರಾಧಾ ಮೋಹನದಾಸ್ ಅಗರ್ವಾಲ್ (Radha Mohandas Agarwal) ಘೋಷಣೆ ಮಾಡಿದ್ದಾರೆ. ಕೋಲಾರ ಸೀಟು ಜೆಡಿಎಸ್ಗೆ ಬಿಟ್ಟು ಕೊಟ್ಟಿದ್ದೇವೆ. ಈ ಮೂಲಕ ಜೆಡಿಎಸ್ಗೆ ಮೂರು ಸೀಟು ಬಿಟ್ಟು ಕೊಟ್ಟಿದ್ದೇವೆ ಎಂದು ಹೇಳಿದ್ದಾರೆ.
ಪ್ರಧಾನಿ ಮೋದಿಗಾಗಿ ಕೆಲಸ ಮಾಡಿ ನಿಮ್ಮ ವಯಕ್ತಿಕ ಮುನಿಸು ಏನೇ ಇದ್ರೂ ಬಿಟ್ಟುಬಿಡಿ.ಬಿಜೆಪಿಯ 25 ಅಭ್ಯರ್ಥಿಗಳ ಆಯ್ಕೆ ಮಾಡಿದೆ ಜೆಡಿಎಸ್ಗೆ ಮೂರು ಕ್ಷೇತ್ರ ಬಿಟ್ಟು ಕೊಟ್ಟಿದ್ದೇವೆ. ಅಭ್ಯರ್ಥಿ ಯಾರಾಗಾಬೇಕು ಅಂತ ನಾವು ಹಸ್ತಕ್ಷೇಪ ಮಾಡಿಲ್ಲ ಆದ್ರೆ ಒಟ್ಟಾಗಿ ಎಲ್ಲಾರು ಕೆಲಸ ಮಾಡಿ ಎಂದು ಹೇಳಿದ್ದರು.