ಕೋಲಾರ:- ಜಿಲ್ಲೆಯ ಶ್ರೀನಿವಾಸಪುರ ದಲ್ಲಿ ಮಳೆ ಸಾಕಷ್ಟು ಅವಾಂತರ ಕ್ಕೆ ಕಾರಣವಾಗಿದೆ. ಪಟ್ಟಣದ ಚಿಂತಾಮಣಿ ರಸ್ತೆಯಲ್ಲಿ ಇರುವ ರೈಲ್ವೆ ಅಂಡರ್ ಪಾಸ್ನಲ್ಲಿ ನೀರು ತುಂಬಿ ನಿಂತ ಪರಿಣಾಮ ಪ್ರತಿ ಸಾರಿ ಸಾರ್ವಜನಿಕರು ಪ್ರಯಾಸ ಪಡುವಂತಾಗಿದೆ.
ವಿದೇಶದಿಂದ ಅಕ್ರಮ ಚಿನ್ನ ಸಾಗಾಟ… ಕೆಂಪೇಗೌಡ ಏರ್ಪೋರ್ಟ್ ನಲ್ಲಿ 06 ಕೋಟಿ ಮೌಲ್ಯದ ಚಿನ್ನ ಸೀಜ್!
ಶಾಲಾ ಮಕ್ಕಳು ಮನೆಗಳಿಗೆ ತೆರಳುವುದಕ್ಕೆ ಪ್ರಯಾಸದಿಂದ ತೆರಳಿದರು ಇನ್ನು ವಿಶ್ವಪ್ರಸಿದ್ಧ ಮಾವಿನ ಮಾರುಕಟ್ಟೆ ಗೆ ಹೋಗಲೂ ಸಹ ಇದೇ ರಸ್ತೆಯನ್ನು ಬಳಸಬೇಕು.ಹೀಗಾಗಿ ಮಾವಿನ ಹಣ್ಣು ತುಂಬಿದ ಲಾರಿಗಳು ಸಾಗಲು ಸಹ ಕಷ್ಟ ವಾಗಿದೆ.ಇದಷ್ಡೆ ಅಲ್ಲದೆ ಪಟ್ಟಣದಲ್ಲಿ ಹಲವು ಬಡಾವಣೆಗಳಲ್ಲಿ ಮಳೆ ನೀರು ಮನೆಗಳಿಗೆ ನುಗ್ಗಿದೆ.ರಸ್ತೆ ಪಕ್ಕದಲ್ಲಿ ನೀರು ಹರಿಯಲು ಸಮರ್ಪಕವಾಗಿ ಚೆರಂಡಿ ವ್ಯವಸ್ಥೆ ಇಲ್ಲ.ಪರಿಣಾಮ ನೀರು ಮನೆಗಳಿಗೆ ನುಗ್ಗಿದೆ.ರಾಜಾಜಿ ರಸ್ತೆ,ಅಂಬೇಡ್ಕರ್ ಪಾಳ್ಯ,ದಲ್ಲಿ ಪ್ರತಿ ಭಾರಿ ಮಳೆಯಲ್ಲಿ ಇದೇ ರೀತಿ ಸಮಸ್ಯೆ ಕಾಡುತ್ತಿದ್ದು ಅಧಿಕಾರಿಗಳು ಜನಪ್ರತಿನಿಧಿಗಳಿಗೆ ಸಾರ್ವಜನಿಕರು ಹಿಡಿ ಶಾಪ ಹಾಕುವಂತಾಗಿದೆ..