ಶ್ರೀನಿವಾಸಪುರ – ಜನ ಸಾಮಾನ್ಯರಿಗೆ ಎದುರಾಗುತ್ತಿರುವ ಸಮಸ್ಯೆಗಳ ಪರಿಹಾರಕ್ಕಾಗಿ ಜನ ಸಂಪರ್ಕ ಸಭೆಯನ್ನು ಏರ್ಪಡಿಸಲಾಗಿದೆ ಎಂದು ಕೋಲಾರ ಜಿಲ್ಲಾ ಎಸ್ ಪಿ ಬಿ ನಿಖಿಲ್ ರವರು ತಿಳಿಸಿದರು. ಗೌನಿಪಲ್ಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೋಲಾರ ಜಿಲ್ಲಾ ಎಸ್ ಪಿ ಬಿ. ನಿಖಿಲ್ ರವರ ಅಧ್ಯಕ್ಷತೆಯಲ್ಲಿ ನಡೆದ ಮೊಟ್ಟ ಮೊದಲ ಜನ ಸಂಪರ್ಕ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು, ಗೌನಿಪಲ್ಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೈಗೊಳ್ಳಬೇಕಾದ ಕಾರ್ಯಚಟುವಟಿಕೆಗಳು,
ಮಂಗಳವಾರದಂದು ಈ ಕೆಲಸಗಳನ್ನು ಮಾಡಲೇಬಾರದು! ಯಾಕೆ ಗೊತ್ತಾ.? ಇಲ್ಲಿದೆ ಮಾಹಿತಿ
ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಅಂಗಡಿ ಮುಂಗಟ್ಟುಗಳಲ್ಲಿ ಹಾಗೂ ಮನೆಗಳ ಹತ್ತಿರದಲ್ಲಿ ಸಿ ಸಿ ಕ್ಯಾಮೆರಾಗಳ ಅಳವಡಿಕೆಯಿಂದ ಭಧ್ರತೆಯ ವಾತಾವರಣ ನಿರ್ಮಾಣವಾಗುತ್ತದೆ. ಇನ್ನು ಸಿವಿಲ್ ಪ್ರಕರಣಗಳಲ್ಲಿ ಪೊಲೀಸರು ಯಾವುದೇ ನೈಜ ಜವಾಬ್ದಾರಿಯನ್ನು ಸ್ವೀಕರಿಸಲು ಸಾಧ್ಯವಿಲ್ಲ. ನ್ಯಾಯಾಲಯದ ಆದೇಶದಂತೆ ಪೊಲೀಸ್ ಇಲಾಖೆ ಕಾರ್ಯನಿರ್ವಾಹಿಸಬೇಕಾಗುತ್ತದೆ.
ಜನ ಸಾಮಾನ್ಯರು ಸಿವಿಲ್ ಪ್ರಕರಣಗಳಲ್ಲಿ ಪೊಲೀಸರಿಗೆ ಒತ್ತಡ ಏರುವ ಬದಲು ನ್ಯಾಯಾಲಯ ಅಥವಾ ಹಿರಿಯ ಸಮ್ಮುಖದಲ್ಲಿ ಬಗೆಹರಿಸಿಕೊಳ್ಳುವ ಕೆಲಸ ಮಾಡಬೇಕು ಹಾಗೂ ಸಂಚಾರಿ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಲು ಸೂಚಿಸಿದರು. ಇನ್ನು ರಾತ್ರಿ ಬೀಟ್ಗೆ ಸಂಬಂಧಿಸಿದಂತೆ ಹಲವು ಬದಲಾವಣೆಗಳನ್ನು ಮಾಡಲಾಗಿದ್ದು ಸಾರ್ವಜನಿಕರು ಅದರ ಅರಿವನ್ನು ತಿಳಿದುಕೊಳ್ಳಬೇಕಾಗಿದೆ ಎಂದರು. ಕಾರ್ಯಕ್ರಮದಲ್ಲಿ ಎಸ್ ಪಿ ಬಿ ನಿಖಿಲ್ ಸೇರಿದಂತೆ ಗೌನಿಪಲ್ಲಿ ಹಾಗೂ ರಾಯಲ್ಪಾಡು ವೃತ್ತದ ಸಿ ಪಿ ಐ ಶಿವಕುಮಾರ್, ಪಿ ಎಸ್ ಐ ರಾಮ, ಪಿ ಎಸ್ ಐ ಶ್ರೀನಿವಾಸಗೌಡ, ಸಾರ್ವಜನಿಕರು ಹಾಗೂ ಪೋಲೀಸ್ ಸಿಬ್ಬಂದಿ ವರ್ಗ ಹಾಜರಿದ್ದರು.