ಕೋಲಾರ : ನಗರಸಭೆಯ ಅಭಿವೃದ್ಧಿಗಾಗಿ ಮುಖ್ಯಮಂತ್ರಿಗಳ ವಿಶೇಷ ಅನುದಾನ 30 ಕೋಟಿ ಬಂದಿದ್ದು ಈ ಹಣವು ನಿರ್ಮಿತಿ ಕೇಂದ್ರ ಮತ್ತು ಕ್ರೆಡಿಲ್ ಇಲಾಖೆಗೆ ವಹಿಸಿದ್ದರ ಬಗ್ಗೆ ನಗರಸಭೆ ಮಾಜಿ ಅಧ್ಯಕ್ಷ ಮುಬಾರಕ್ ಅವರು ಸಭೆಯಲ್ಲಿ ಶಾಸಕರು ಮತ್ತು ಎಂಎಲ್ಸಿಗಳನ್ನು ಸಾಕುವ ಕೇಂದ್ರಗಳ ಎಂದು ಆರೋಪಿಸಿದ್ದಾರೆ.
ಬರೀ ಅರೋಪ ಮಾಡುವುದು ಬಿಟ್ಟು ದಾಖಲೆ ಸಮೇತ ಸಾಬೀತುಪಡಿಸಲಿ ಎಂದು ನಗರಸಭೆ ಅಧ್ಯಕ್ಷೆ ಲಕ್ಷ್ಮೀದೇವಮ್ಮ ಸವಾಲು ಹಾಕಿದರು. ನಗರಸಭೆ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನಗರಸಭೆ ಮಾಜಿ ಅಧ್ಯಕ್ಷರಾಗಿ ಹಿರಿಯ ಸದಸ್ಯರಾಗಿರುವ ಮುಬಾರಕ್ ಅವರು ಪ್ರತಿ ಸಭೆಯಲ್ಲಿ ಬರೀ ಆರೋಪಗಳನ್ನು ಮಾಡಲಿಕ್ಕೆ ಬರತ್ತಾರೆ.
ಒಂದು ಬಾರಿ ಅಭಿವೃದ್ಧಿಗೆ ಶಾಸಕ ಕೊತ್ತೂರು ಮಂಜುನಾಥ್ ಮತ್ತು ಎಂಎಲ್ಸಿ ಅನಿಲ್ ಕುಮಾರ್ ನಯಾ ಪೈಸೆ ಬಂದಿಲ್ಲ ಎಂದು ಹೇಳುವ ಅವರು ಹೇಗೆ 30 ಕೋಟಿ ಅನುದಾನದ ಬಗ್ಗೆ ಮಾತಾಡತ್ತಾರೆ ಇವರಿಗೆ ಏನಾದರೂ ನೈತಿಕತೆ ಇದ್ದರೆ ಮೊದಲು ದಾಖಲೆಗಳನ್ನು ನೀಡಲಿ ಇಲ್ಲದೇ ಹೋದರೆ ಮುಂದಿನ ದಿನಗಳಲ್ಲಿ ಸದಸ್ಯರೇ ಬುದ್ದಿ ಕಲಿಸಬೇಕಾಗುತ್ತದೆ ಎಂದರು.