ಬೆಂಗಳೂರು: ರಾಜ್ಯದಲ್ಲಿ ಬಿಸಿಲ ಬೇಗೆಯೊಂದಿಗೆ ಚುನಾವಣಾ ಕಾವು ಸಹ ಹೆಚ್ಚಾಗತೊಡಗಿದೆ. ದಕ್ಷಿಣ ಕರ್ನಾಟಕದ 14 ಸ್ಥಾನಗಳಿಗೆ ಏಪ್ರಿಲ್ 26ರಂದು ಮತದಾನ ಪ್ರಕ್ರಿಯೆ ನಡೆಯಲಿದ್ದು ಇನ್ನು ಕೇವಲ 10 ದಿನಗಳಷ್ಟೇ ಬಾಕಿ ಉಳಿದಿದೆ.
ಚುನಾವಣಾ ರಣತಂತ್ರಕ್ಕೆ ಕೇವಲ ಒಂದೇ ವಾರ ಬಾಕಿ ಇದೆ. ಇದರಂತೆ ಕೋಲಾರದಲ್ಲೂ ಲೋಕಸಭಾ ಚುನಾವಣೆ ಕಾವು ರಂಗೇರುತ್ತಿದೆ..
ಇದರ ನಡುವೆ ಕೋಲಾರದ ಲೋಕಸಭಾ ಚುನಾವಣಾ ಕಣದಲ್ಲಿ ಅಭ್ಯರ್ಥಿಗಳ ನಡುವೆ ಜಟಾಪಟಿ ಶುರುವಾಗಿದ್ದು, ನಾನಾ ನೀನಾ ಎಂದು ಜಿದ್ದಿಗೆ ಬಿದ್ದಿದ್ದಾರೆ. ಎನ್ ಡಿ ಎ ಮೈತ್ರಿಕೂಟದ ಜೆಡಿಎಸ್ ಅಭ್ಯರ್ಥಿ ಕೋಲಾರದ ಅಭ್ಯರ್ಥಿ ಮಲ್ಲೇಶ್ ಬಾಬು ( ಮೀಸಲು ) ರವರು ಬಿ ವೈ ವಿಜೇಂದ್ರರನ್ನು ಸ್ವಗೃಹದಲ್ಲಿ ಭೇಟಿ ಮಾಡಿದ್ರು. ಬಿಜೆಪಿ ರಾಜ್ಯಾಧ್ಯಕ್ಷ ಜೊತೆಗೆ ಕೋಲಾರ ಕ್ಷೇತ್ರವನ್ನು ಯಾವ ರೀತಿ ಗೆಲ್ಲಬಹುದು ಎಂದು ಚುನಾವಣಾ ರಣತಂತ್ರದ ಬಗ್ಗೆ ಸುಧೀರ್ಘ ಚರ್ಚೆ ನಡೆಸಿದರು.. ಮಲ್ಲೇಶ್ ಬಾಬು ಜೊತೆಗೆ ಉದ್ಯಮಿಯಾದ ಆರ್. ಎಸ್ . ಲಕ್ಷ್ಮಿ ಪ್ರಸಾದ್ ಸಾಥ್ ನೀಡಿದರು..