ಕೋಲಾರ – ಹಾಲು ಉತ್ಪಾದಕರ ಸಹಕಾರ ಸಂಘಗಳ ಸದಸ್ಯರು ನಮ್ಮ ಪರ ಕೈಎತ್ತಿದ್ದಕ್ಕೆ ನಮಗೆ ಬಹುಮತ ಸಿಕ್ಕಿದ್ದಕ್ಕೆ ಶಾಸಕರು ಅಧಿಕಾರಿಗಳ ಮೇಲೆ ದೌರ್ಜನ್ಯ ಎಸಗಿದ್ದಾರೆ. ಹಾಲು ಒಕ್ಕೂಟದ ವ್ಯವಸ್ಥಾಪಕ (ಎಂಡಿ) ಮೇಲೆ ಹಲ್ಲೆ ನಡೆಸಿದ್ದಾರೆ’ ಎಂದು ಕಾಂಗ್ರೆಸ್ ಶಾಸಕ ಒಕ್ಕೂಟದ ಮಾಜಿ ಅಧ್ಯಕ್ಷ ಕೆ.ವೈ.ನಂಜೇಗೌಡ ಸ್ವಪಕ್ಷೀಯ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಮೇಲೆ ಆರೋಪಿಸಿದರು.
ತಿದ್ದುಪಡಿಯೊಂದಿಗೆ ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕ 2024ಕ್ಕೆ ಅಂಗೀಕಾರ!
ನಗರ ಹೊರವಲಯದ ಕಲ್ಯಾಣ ಮಂಟಪದಲ್ಲಿ ನಡೆದ ಒಕ್ಕೂಟದ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು, ಹಾಲು ಉತ್ಪಾದಕರಲ್ಲದವರು ಹಾಲು ಒಕ್ಕೂಟ ಕೆಡಿಸಲು ಪ್ರಯತ್ನಿಸುತ್ತಿದ್ದಾರೆ. ಸ್ವಾರ್ಥಕಾಗಿ ಕ್ಷೇತ್ರ ವಿಂಗಡಣೆಗೆ ವಿರೋಧ ವ್ಯಕ್ತಪಡಿಸಿ ಹೆಸರು ಕೆಡಿಸಲು ಸಂಚು ರೂಪಿಸಿದ್ದರು. ಕೋಮುಲ್ ಕಟ್ಟಿದ್ದು ಹಾಲು ಉತ್ಪಾದಕರು. ಅವರಿಗೆ ನ್ಯಾಯ ಸಿಗಬೇಕು. ಸ್ವಾರ್ಥಿಗಳಿಗೆ ಸಹಕಾರ ಕೊಡಕೂಡದು’ ಎಂದು ಆಕ್ರೋಶ ವ್ಯಕ್ತಪಡಿಸಿದರು. ‘
ನಾನು 35 ವರ್ಷಗಳಿಂದ ಮಾಲೂರು ತಾಲ್ಲೂಕಿನ ಕೊಮ್ಮನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಅಧ್ಯಕ್ಷನಾಗಿದ್ದೇನೆ. ಅಲ್ಲದೇ ಒಕ್ಕೂಟದ ನಿರ್ದೇಶಕನಾಗಿ ಅಧ್ಯಕ್ಷನಾಗಿ ಕೆಲಸ ಮಾಡಿದ್ದೇನೆ. ಆದರೆ ಈ ಶಾಸಕ ಹಾಲು ಉತ್ಪಾದಕನಲ್ಲ ಹಾಲು ಹಾಕಿಲ್ಲ. ಅಧಿಕಾರ ದುರುಪಯೋಗ ಮಾಡಿಕೊಂಡು ಕಾನೂನು ದುರ್ಬಳಕೆ ಮಾಡಿಕೊಂಡು ಡೆಲಿಗೇಟ್ ಆಗಿ ಸಭೆಗೆ ಬಂದಿದ್ದಾರೆ’ ಎಂದರು.