ಕೆಜಿಎಫ್ – ಮನೆಯ ಮುಂದಿನ ರಸ್ತೆಯ ವಿಚಾರಕ್ಕೆ ವ್ಯಕ್ತಿಯ ಮೇಲೆ ಹಾರೆಯಿಂದ ಹಲ್ಲೆ ಮಾಡಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ಕೋಲಾರ ಜಿಲ್ಲೆಯ ಕೆ ಜಿ ಎಫ್ ತಾಲೂಕಿನ ಕಣ್ಣೂರು ಗ್ರಾಮದಲ್ಲಿ ನಡೆದಿದೆ. ಮನೆಯ ಮುಂದಿನ ರಸ್ತೆ ವಿಚಾರಕ್ಕೆ ವ್ಯಕ್ತಿ ಒಬ್ಬನನ್ನು ಭೀಕರವಾಗಿ ಕೊಲೆ ಮಾಡಲಾಗಿದೆ.
ಹಾರೆಯಿಂದ ಹೊಡೆದು ಮಂಜುನಾಥ್ (38) ಎನ್ನುವ ವ್ಯಕ್ತಿಯೊಬ್ಬರ ಹತ್ಯೆಯಾಗಿದೆ. ಕಣ್ಣೂರು ಗ್ರಾಮದ ಮುನಿವೆಂಕಟಪ್ಪ ಹಾಗೂ ರಾಜೇಶ್ ಎಂಬುವವರು ಮಂಜುನಾಥ್ ಅವರನ್ನು ಭೀಕರವಾಗಿ ಕೊಲೆ ಮಾಡಿದ್ದಾರೆ.
ಮಂಜುನಾಥ್ ಹಾಗೂ ಮುನಿ ವೆಂಕಟಪ್ಪ ಕುಟುಂಬದ ನಡುವೆ ಈ ಒಂದು ಗಲಾಟೆ ನಡೆದಿದೆ.ರಸ್ತೆ ವಿವಾದ ವಿಚಾರಕ್ಕೆ ಹಾರೆಯಿಂದ ಹೊಡೆದು ಮಂಜುನಾಥನನ್ನು ಕೊಲೆ ಮಾಡಿದ್ದಾರೆ. ಕ್ಯಾಸಂಬಳ್ಳಿ ಠಾಣೆ ಪೋಲಿಸರಿಂದ ಮುನಿ ವೆಂಕಟಪ್ಪ ಹಾಗೂ ರಾಜೇಶನ್ನು ಬಂಧಿಸಿಲಾಗಿದೆ.