ಕೋಲಾರ : ನಗರದ ಇಟಿಸಿಎಂ ಆಸ್ಪತ್ರೆಯ ನರ್ಸಿಂಗ್ ಕಾಲೇಜಿನ ಲ್ಯಾಂಪ್ ಲೈಟಿಂಗ್ ಸಮಾರಂಭ ಅದ್ಧೂರಿಯಾಗಿ ನೆರವೇರಿತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಂಸ್ಥೆ ಮುಖ್ಯಸ್ಥ ಅರುಣ್ ಸ್ಯಾಮ್ಯುಯಲ್ ಅವರು,೧೩೦ ವರ್ಷದ ಐತಿಹಾಸಿಕ ಮತ್ತು ಪುರಾತನ ಇಟಿಸಿಎಂ ವೈದ್ಯಕೀಯ ಸಂಸ್ಥೆ ಆರೋಗ್ಯ, ಶೈಕ್ಷಣಿಕ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು ಇಲ್ಲಿ ಅಧ್ಯಯನ ಮಾಡಿರುವ ಸಾವಿರಾರು ಮಂದಿ ವಿದೇಶಗಳಲ್ಲಿ ಉದ್ಯೋಗಿಗಳಾಗಿದ್ದು ಭಾರತದಲ್ಲಿ ಲಕ್ಷಾಂತರ ಮಂದಿ ಬದುಕು ಕಟ್ಟಿಕೊಂಡಿದ್ದಾರೆ.
ನಿಮಗೆ ಗೊತ್ತೆ..? ಇಲ್ಲಿ ಒಡಹುಟ್ಟಿದವರು, ತಾಯಿ -ಮಗ ಮತ್ತು ತಂದೆ- ಮಗಳ ಜೊತೆ ದೈಹಿಕ ಸಂಬಂಧ ಇರುತ್ತೆ..!
ಬಿಎಸ್ಸಿ ನರ್ಸಿಂಗ್ನಲ್ಲಿ ೧೧೩ನೇ ಬ್ಯಾಚ್ ವಿದ್ಯಾರ್ಥಿಗಳು ಇದೀಗ ಲ್ಯಾಂಪ್ ಲೈಟಿಂಗ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಇವರೆಲ್ಲರೂ ನೈಟಿಂಗೇಲ್ ಮಾದರಿಯಲ್ಲಿ ರೋಗಿಗಳ ಸೇವೆ ಮಾಡುವ ಮೂಲಕ ಜೀವನವನ್ನು ಸಾರ್ಥಕ್ಯಪಡಿಸಿಕೊಳ್ಳಬೇಕು. ರೋಗಿಗೆ ತಾಯಿ ಪ್ರೇಮವನ್ನು ನೆನಪಿಸುವ ನಿಟ್ಟಿನಲ್ಲಿ ಪ್ರೀತಿ-ವಾತ್ಸಲ್ಯದಿಂದ ಶ್ರದ್ಧೆಯಾಗಿ ಚಿಕಿತ್ಸೆ ನೀಡಬೇಕೆಂದು ಅರುಣ್ ತಿಳಿಸಿದರು. ಸಂಸ್ಥೆಯ ಅಧಿಕಾರಿ ಹರೀಶ್, ತಾರಾ ಇದ್ದರು.