ಬೇತಮಂಗಲ – ಬಂಗಾಳಕೊಲ್ಲಿಯಲ್ಲಿ ವಾಯಭಾರ ಕುಸಿತ ಫೆಂಗಲ್ ಚಂಡಮಾರುತದಿಂದ ಜಿಲ್ಲೆಯಲ್ಲಿ ಬಿರುಗಾಳಿ ಸಹಿತ ಬಾರಿ ಮಳೆಯಾಗುತ್ತಿದ್ದು, ಜನರು ಚಳಿ, ಮಳೆಯಿಂದ ಬೇಸೆತ್ತು ಮನೆಯಿಂದ ಆಚೆ ಬರದ ಪರಿಸ್ಥಿತಿ ಇದ್ದು, ಅಂಬೇಡ್ಕರ್ ಯುವ ವೇದಿಕೆ ಅಧ್ಯಕ್ಷ ಶ್ರೀನಿವಾಸ್ ಚಳಿ, ಮಳೆ ಲೆಕ್ಕಿಸದೆ ಮೂಖ ಜೀವಿಗಳಿಗೆ ಆಹಾರ ಪದಾರ್ಥಗಳನ್ನು ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
Hubballi; 2024ರ ಕಾರ್ಯಕ್ರಮ ಪಾಲ್ಗೊಳ್ಳಲು ಸಜ್ಜಾದ ಟೊಯೋಟಾ ಕಿರ್ಲೋಸ್ಕರ್ ಮೋಟಾರ್!
ಬೇತಮಂಗಲ ಗ್ರಾಮದ ಬಳಿಯ ಬಡಮಾಕನಹಳ್ಳಿಯ ಸರ್ಕಾರಿ ಶಾಲೆ, ಅರಣ್ಯ ಪ್ರದೇಶ ಹಾಗೂ ಅನೇಕ ಭಾಗಗಳಲ್ಲಿದ್ದ (ವಾನರ) ಕೋತಿಗಳಿಗೆ ಬಾಳೆ ಹಣ್ಣು, ಬಿಸ್ಕೇಟ್, ಬ್ರೇಡ್ ಹಾಗೂ ವಿವಿಧ ಆಹಾರ ಪದಾರ್ಥಗಳನ್ನು ಕೊರೆಯುವ ಚಳಿ, ಮಳೆಯಲ್ಲಿ ನಲುಗುತ್ತಿದ್ದ ಮೂಖ ಜೀವಿಗಳಿಗೆ ಆಹಾರ ನೀಡಿದ್ದಾರೆ. ಕಳೆದ ನಾಲ್ಕು ದಿನಗಳಿಂದ ಎಡೆ ಬಿಡದೆ ಸುರಿಯುತ್ತಿರುವ ಮಳೆಯಿಂದ ಅತೀ ಹೆಚ್ಚು ಚಳಿಯಿಂದ ತುತ್ತು ಅನ್ನಕ್ಕೂ ಪರಿತಪಿಸುತ್ತಿದ್ದ ಮೂಖ ಪ್ರಾಣಿಗಳಿಗೆ ತಮ್ಮಿಂದ ಸಾಧ್ಯವಾದಷ್ಟು ಆಹಾರ ನೀಡಿ ನೆರವಾದರು.