ಕೋಲಾರ : ರಾಜ್ಯದ ರೈತರ ಜಮೀನುಗಳು, ದಲಿತ, ಹಿಂದೂಗಳ ದೇವಸ್ಥಾನ ಹಾಗೂ ಸ್ಮಶಾನದ ಜಾಗವನ್ನು ವಕ್ಫ್ ಬೋರ್ಡ್ ಅಸ್ತಿ ಎಂದು ಪಹಣಿಗಳಲ್ಲಿ ದಾಖಲಾಗಿರುವ ರಾಜ್ಯ ಸರಕಾರ ಹಾಗೂ ಜಿಲ್ಲಾಧಿಕಾರಿಗಳ ಕ್ರಮವನ್ನು ಖಂಡಿಸಿ, ಜಿಲ್ಲಾ ಕೇಂದ್ರದಲ್ಲಿ ಬಿಜೆಪಿ ಪಕ್ಷ ದಿಂದ ಅಹೋರಾತ್ರಿ ಧರಣಿ ಸತ್ಯಾಗ್ರಹವನ್ನು ಮುಂದಿನ ಎರಡೂಮೂರು ದಿನಗಳಲ್ಲಿ ಹಮ್ಮಿಕೊಳ್ಳಲಾಗುವುದೆಂದು ಮಾಜಿ ಸಂಸದ ಎಸ್. ಮುನಿಸ್ವಾಮಿ ಅವ್ರು ಹೇಳಿದರು.
Hubballi: ಕುಂದಗೋಳಕ್ಕೆ ಬಸ್ ಘಟಕ ಮಂಜೂರಾತಿಗೆ ಬಸವರಾಜ ಸಚಿವರಿಗೆ ಮನವಿ!
ನಗರದ ಹೊರ ವಲಯದ ಬಿಜೆಪಿ ಪಕ್ಷ ದ ಜಿಲ್ಲಾ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು, ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ, ವಿಧಾನ ಸಭೆ ಯ ವಿರೋಧ ಪಕ್ಷದ ನಾಯಕ ಆರ್. ಅಶೋಕ, ವಿಧಾನ ಪರಿಷತ್ ವಿರೋಧ ಪಕ್ಷ ದ ನಾಯಕ ಛಲವಾದಿ ನಾರಾಯಣಸ್ವಾಮಿ, ಸೇರಿದಂತೆ ರಾಜ್ಯ ನಾಯಕರ ನೇತೃತ್ವದಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಅಹೋರಾತ್ರಿ ಧರಣಿ ಸತ್ಯಾಗ್ರಹವನ್ನು ಮಾಡಲಾಗುತ್ತಿದೆ ಎಂದರು.
ರಾಜ್ಯದ ವಕ್ಫ್ ಬೋರ್ಡ್ ವಿಚಾರದಲ್ಲಿ ಕೋಲಾರ ಜಿಲ್ಲಾಧಿಕಾರಿ ಆಕ್ರಂಪಾಷ ಹಾಗೂ ಆಡಳಿತ ವರ್ಗದ ಸೇವೆಯನ್ನು ದೇಶದ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ಗಮನ ಸೆಳೆದಿದೆ ಎಂದು ಹೇಳಿದರು.