ಜೈಪುರದ ಸವಾಯಿ ಮಾನ್ಸಿಂಗ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ತಂಡ ಭರ್ಜರಿ ಗೆಲುವು ದಾಖಲಿಸಿತು.
ಜೈಪುರದ ಸವಾಯಿ ಮಾನ್ಸಿಂಗ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ತಂಡ 6 ವಿಕೆಟ್ಗಳ ಭರ್ಜರಿ ಗೆಲುವು ದಾಖಲಿಸಿತು.
ತವರು ನೆಲದಲ್ಲಿ ಅಬ್ಬರಿಸಿದ ರಾಜಸ್ಥಾನ್ ಹುಡುಗರು ಸತತ 4ನೇ ಗೆಲುವು ಕಾಣುವ ಮೂಲಕ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಆರಂಭಿಕರಾಗಿ ಕಣಕ್ಕಿಳಿದ ಯಶಸ್ವಿ ಜೈಸ್ವಾಲ್ ಶೂನ್ಯಕ್ಕೆ ಔಟ್ ಆಗುವ ಮೂಲಕ ನಿರಾಸೆ ಮೂಡಿಸಿದರೆ, ಬಳಿಕ ಸಂಜು ಸ್ಯಾಮ್ಸನ್ ಮತ್ತು ಜೋಶ್ ಬಟ್ಲರ್ ಭರ್ಜರಿ ಬ್ಯಾಟಿಂಗ್ ಮಾಡಿದರು. ಈ ವೇಳೆ ನಾಯಕ ಸಂಜು ಸ್ಯಾಮ್ಸನ್ 42 ಎಸೆತದಲ್ಲಿ 2 ಸಿಕ್ಸ್ ಮತ್ತು 8 ಬೌಂಡರಿ ಸಹಿತ 69 ರನ್ ಸಿಡಿದರು. ಕೊನೆಯಲ್ಲಿ ಅಂತೂ ಇಂತೂ ಭರ್ಜರಿ ಶತಕ ಸಿಡಿಸಿ ಜೋಶ್ ಬಟ್ಲರ್ ಮಿಂಚಿದರು. ಬಟ್ಲರ್ 58 ಎಸೆತದಲ್ಲಿ 9 ಬೌಂಡರಿ ಮತ್ತು 4 ಸಿಕ್ಸ್ ಮೂಲಕ ಭರ್ಜರಿ ಶತಕ ಸಿಡಿಸಿದರು. ರಿಯಾನ್ ಪರಾಗ್ 4 ರನ್, ದ್ರುವ್ ಜುರೇಲ್ 2 ರನ್ ಮತ್ತು ಶಿಮ್ರಾನ್ ಹಿಟ್ಮಾಯರ್ 11 ರನ್ ಗಳಿಸಿದರು.
ಜೈಪುರದ ಸವಾಯಿ ಮಾನ್ಸಿಂಗ್ ಸ್ಟೇಡಿಯಂನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ರಾಜಸ್ಥಾನ್ ರಾಯಲ್ಸ್ ನಡುವೆ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಲು ಆರ್ಸಿಬಿಯ ವಿರಾಟ್ ಕೊಹ್ಲಿ ಮತ್ತು ನಾಯಕ ಫಾಫ್ ಡು ಪ್ಲೆಸಿಸ್ ಕಣಕ್ಕಿಳಿದರು. ಈ ಪಂದ್ಯದಲ್ಲಿ ವಿರಾಟ್ ಮತ್ತು ಫಾಫ್ ಇಬ್ಬರೂ ಉತ್ತಮ ಆರಂಭ ಪಡೆದು 14ನೇ ಓವರ್ ವರೆಗೆ ಮೈದಾನದಲ್ಲಿ ನೆಲೆಯೂರಿದರು. ಈ ಮೂಲಕ ಈ ಜೋಡಿ ಆರಂಭದಲ್ಲಿಯೇ ಶತಕದ ಜೊತೆಯಾಟವಾಡಿದರು. ವಿರಾಟ್ ಕೊಹ್ಲಿ ಮತ್ತು ನಾಯಕ ಫಾಫ್ ಡು ಪ್ಲೆಸಿಸ್ ಆರ್ಸಿಬಿಗೆ ಬಿರುಸಿನ ಆರಂಭ ನೀಡಿದರು.
ಇವರಿಬ್ಬರು ಮೊದಲ ವಿಕೆಟ್ಗೆ 125 ರನ್ಗಳ ಜೊತೆಯಾಟ ನೀಡಿದರು. ಡುಪ್ಲೆಸಿಸ್ 33 ಎಸೆತಗಳಲ್ಲಿ 44 ರನ್ ಗಳಿಸಿ ಔಟಾದರು. ಆದರೆ ಬಳಿಕವೂ ಉತ್ತಮವಾಗಿ ಬ್ಯಾಟಿಂಗ್ ಮಾಡಿದ ವಿರಾಟ್ ಕೊಹ್ಲಿ 72 ಎಸೆತದಲ್ಲಿ 12 ಬೌಂಡರಿ ಮತ್ತು 4 ಫೋರ್ ಮೂಲಕ 113 ರನ್ ಸಿಡಿಸಿ ಅಜೇಯರಾಗಿ ಉಳಿದರು. ಈ ಮೂಲಕ ಐಪಿಎಲ್ ನಲ್ಲಿ 8ನೇ ಶತಕ ಸಿಡಿಸಿದರು. ಉಳಿಂದತೆ ಗ್ಲೇನ್ ಮ್ಯಾಕ್ಸ್ವೆಲ್ 1 ರನ್, ಸೌರವ್ ಚೌಹಾಣ್ 9 ರನ್ ಮತ್ತು ಕ್ಯಾಮರೂನ್ ಗ್ರೀನ್ 5 ರನ್ ಸಿಡಿಸಿದರು. ಆದರೆ 17ನೇ ಸೀಸನ್ ಐಪಿಎಲ್ ನಲ್ಲಿ ಮೊದಲ ಶತಕ ಸಿಡಿಸಿ ವಿರಾಟ್ ಕೊಹ್ಲಿ ಮತ್ತೊಮ್ಮೆ ಕಿಂಗ್ ಆಗಿ ಮೆರೆದರು.