ಇಂದು ನಡೆದ ವಿಶ್ವಕಪ್ 2023 ಟೂರ್ನಿಯ ಪಂದ್ಯದಲ್ಲಿ ವಿರಾಟ್ ಕೊಹ್ಲಿ ದಾಖಲೆಯ ಶತಕದಾಟದ ನೆರವಿನೊಂದಿಗೆ ದ.ಆಫ್ರಿಕಾಗೆ ಭಾರತ 327 ರನ್ಗಳ ಗುರಿ ನೀಡಿದೆ.
ತಮ್ಮ ಹುಟ್ಟುಹಬ್ಬದ ದಿನದಂದೇ ಕಿಂಗ್ ಕೊಹ್ಲಿ ಅಭಿಮಾನಿಗಳಿಗೆ ಶತಕದ ಸಿಹಿ ಕೊಟ್ಟರು. ಭಾರತ ತಂಡ 50 ಓವರ್ಗಳಿಗೆ 5 ವಿಕೆಟ್ ನಷ್ಟಕ್ಕೆ 326 ರನ್ಗಳಿಸಿತು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಭಾರತ ಉತ್ತಮ ಇನ್ನಿಂಗ್ಸ್ ಆರಂಭಿಸಿತು. ಆರಂಭಿಕರಾಗಿ ಕಣಕ್ಕಿಳಿದ ರೋಹಿತ್ ಶರ್ಮಾ ಹಾಗೂ ಶುಭಮನ್ ಗಿಲ್ ಜೋಡಿ ಅರ್ಧಶತಕದ ಜೊತೆಯಾಟ ನೀಡಿತು. ಉತ್ತಮ ಬ್ಯಾಟಿಂಗ್ ಪ್ರದರ್ಶನ ನಡೆಸಿದ ರೋಹಿತ್ ಶರ್ಮಾ 24 ಬಾಲ್ಗಳಿಗೆ 40 ರನ್ ಗಳಿಸಿ (6 ಫೋರ್, 2 ಸಿಕ್ಸರ್) ಗಳಿಸಿ ಅರ್ಧಶತಕ ವಂಚಿತರಾದರು. ಆದರೂ ತಂಡಕ್ಕೆ ಉತ್ತಮ ಆರಂಭಕ್ಕೆ ನೆರವಾದರು.
ನಂತರ ಭರವಸೆ ಮೂಡಿಸಿದ್ದ ಗಿಲ್ ಮತ್ತು ಕಿಂಗ್ ಕೊಹ್ಲಿ ಜೋಡಿ ಹೆಚ್ಚು ಹೊತ್ತು ನಿಲ್ಲಲಿಲ್ಲ. ಗಿಲ್ 22 ರನ್ ಗಳಿಸಿ ಕ್ಲೀನ್ ಬೌಲ್ಡ್ ಆಗಿ ನಿರ್ಗಮಿಸಿದರು. ಈ ವೇಳೆ ಕೊಹ್ಲಿ ಮತ್ತು ಶ್ರೇಯಸ್ ಐಯ್ಯರ್ ಜೋಡಿ ಉತ್ತಮ ಪ್ರದರ್ಶನ ನೀಡಿತು. ಈ ಜೋಡಿ 158 ಬಾಲ್ಗೆ 134 ರನ್ ದಾಖಲಿಸಿತು. ಆ ಮೂಲಕ ಆಫ್ರಿಕಾಗೆ ಸವಾಲಿನ ಮೊತ್ತದ ಗುರಿ ನೀಡಲು ನೆರವಾಯಿತು.
ಬೌಂಡರಿ, ಸಿಕ್ಸರ್ಗಳ ಮೂಲಕ ಆಫ್ರಿಕಾ ಬೌಲರ್ಗಳನ್ನು ದಂಡಿಸಿದ ಐಯ್ಯರ್ ವೇಗವಾಗಿ ಅರ್ಧಶತಕ ಪೂರೈಸಿದರು. 87 ಬಾಲ್ಗೆ 77 ರನ್ಗಳಿಸಿ (7 ಫೋರ್, 2 ಸಿಕ್ಸರ್) ತಂಡಕ್ಕೆ ರನ್ ಏರುವಲ್ಲಿ ಪಾತ್ರ ವಹಿಸಿದರು. ನಂತರ ಬಂದ ಬ್ಯಾಟರ್ಗಳು ಹೆಚ್ಚು ಹೊತ್ತು ಕ್ರೀಸ್ನಲ್ಲಿ ಉಳಿಯಲಿಲ್ಲ. ಈ ವೇಳೆ ಕೊಹ್ಲಿ ಜವಾಬ್ದಾರಿಯುತ ಆಟದ ಮೂಲಕ ಶತಕ ಸಿಡಿಸಿದರು. ಕೊಹ್ಲಿ 121 ಬಾಲ್ಗಳಿಗೆ 101 ರನ್ (10 ಫೋರ್) ಗಳಿಸಿ ಗಮನ ಸೆಳೆದರು. ಈ ಗ್ಯಾಪ್ನಲ್ಲಿ ಕೆ.ಎಲ್.ರಾಹುಲ್ ಕೇವಲ 8 ರನ್ಗೆ ಔಟಾಗಿ ಪೆವಿಲಿಯನ್ ಸೇರಿದರು. ಸೂರ್ಯಕುಮಾರ್ ಯಾದವ್ (22) ರನ್ಗಳಿಸಿ ಕ್ಯಾಚ್ ನೀಡಿ ನಿರ್ಗಮಿಸಿದರು.
ಈ ವೇಳೆ ಕೊಹ್ಲಿಗೆ ಜೊತೆಗೆ ರವೀಂದ್ರ ಜಡೇಜಾ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದರು. 15 ಬಾಲ್ಗಳಿಗೆ ಔಟಾಗದೇ 29 ರನ್ ಸಿಡಿಸಿದರು. ಅದರಲ್ಲಿ 3 ಬೌಂಡರಿ ಮತ್ತು 1 ಸಿಕ್ಸರ್ ಸಿಡಿಸಿದರು