ಏಕದಿನ ಕ್ರಿಕೆಟ್ನಲ್ಲಿ ವಿರಾಟ್ ಕೊಹ್ಲಿ ಅವರು ಐತಿಹಾಸಿಕ ಸಾಧನೆ ಮಾಡಿದ್ದಾರೆ. ತಾನು ಆಡಿರೋ 287 ಏಕದಿನ ಇನ್ನಿಂಗ್ಸ್ನಲ್ಲಿ 14 ಸಾವಿರ ರನ್ ಪೂರೈಸಿದ್ದಾರೆ. ಪಾಕ್ ವಿರುದ್ಧದ ಏಕದಿನ ಪಂದ್ಯದಲ್ಲೇ ಕೊಹ್ಲಿ ಈ ದಾಖಲೆ ಸೃಷ್ಟಿಸಿದ್ದಾರೆ.
ಮಂಗಳೂರಿನಲ್ಲಿ ಭೀಕರ ಅಪಘಾತ ; ಪಾದಚಾರಿಗಳ ಮೇಲೆ ಹರಿದ ಕಾರು, ಓರ್ವ ಮೃತ್ಯು
ಪ್ರಸ್ತುತ ಕಾಲದ ಅತ್ಯುತ್ತಮ ಏಕದಿನ ಬ್ಯಾಟರ್ಗಳಲ್ಲಿ ವಿರಾಟ್ ಕೊಹ್ಲಿ ಒಬ್ಬರು. ಇವರು ಟೀಮ್ ಇಂಡಿಯಾ ದಿಗ್ಗಜ ಬ್ಯಾಟರ್ ಸಚಿನ್ ತೆಂಡೂಲ್ಕರ್ ಮತ್ತು ಶ್ರೀಲಂಕಾ ಮಾಜಿ ಕ್ಯಾಪ್ಟನ್ ಕುಮಾರ್ ಸಂಗಕ್ಕಾರ ಅವರಿಂದ ಸಾಧ್ಯವಾಗದ ಸಾಧನೆಯನ್ನು ಮಾಡಿದ್ದಾರೆ.
ಕಿಂಗ್ ವಿರಾಟ್ ಕೊಹ್ಲಿ ಅವರು, ಚಾಂಪಿಯನ್ ಟ್ರೋಫಿಯಲ್ಲಿ ಎರಡು ವಿಶೇಷ ದಾಖಲೆ ಬರೆದಿದ್ದಾರೆ. ದುಬೈನ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾನುವಾರ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ 158 ಕ್ಯಾಚ್ಗಳನ್ನು ಪಡೆಯುವ ಮೂಲಕ ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್ನಲ್ಲಿ ಅತಿ ಹೆಚ್ಚು ಕ್ಯಾಚ್ ಪಡೆದ ಫೀಲ್ಡರ್ ದಾಖಲೆ ಬರೆದರು
47ನೇ ಓವರ್ನಲ್ಲಿ ಕುಲದೀಪ್ ಯಾದವ್ ಅವರ ಬೌಲಿಂಗ್ ನಲ್ಲಿ ನಸೀಮ್ ಶಾ ಅವರ ಕ್ಯಾಚ್ ಪಡೆಯುವ ಮೂಲಕ ಕೊಹ್ಲಿ ಈ ಸಾಧನೆ ಮಾಡಿದ್ದಾರೆ. ಕೊನೆಯ ಓವರ್ನಲ್ಲಿ ಖುಶ್ದಿಲ್ ಷಾ ಅವರ ಕ್ಯಾಚ್ ಪಡೆದು ಕ್ಯಾಚ್ ಗಳ ಸಂಖ್ಯೆಯನ್ನು ಮತ್ತೆ ಹೆಚ್ಚಿಸಿಕೊಂಡರು.