ಪುಣೆ: ಇಲ್ಲಿನ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ನ್ಯೂಜಿಲೆಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯದ 2ನೇ ದಿನದಾಟದಲ್ಲಿ ಸ್ಪಿನ್ನರ್ಗಳ ಆರ್ಭಟವೇ ಮುಂದುವರಿದಿದ್ದು, ಉಭಯ ತಂಡಗಳ ಒಟ್ಟು 14 ವಿಕೆಟ್ ಪತನಗೊಂಡಿದೆ. ಭಾರತದ ವಿರುದ್ಧ ತನ್ನ 2ನೇ ಇನ್ನಿಂಗ್ಸ್ ಆರಂಭಿಸಿರುವ ನ್ಯೂಜಿಲೆಂಡ್ ತಂಡ 2ನೇ ದಿನದ ಅಂತ್ಯಕ್ಕೆ 5 ವಿಕೆಟ್ ನಷ್ಟಕ್ಕೆ 198 ರನ್ ಗಳಿಸಿದ್ದು, 301 ರನ್ಗಳ ಭರ್ಜರಿ ಮುನ್ನಡೆ ಕಾಯ್ದುಕೊಂಡಿದೆ. ಇದರ ಬೆನ್ನಲ್ಲೇ ವಿರಾಟ್ ಕೊಹ್ಲಿ ಔಟ್ ಆದ ರೀತಿಯನ್ನು ಗಮನಿಸಿದ ಕ್ರಿಕೆಟ್ ದಿಗ್ಗಜ ಅನಿಲ್ ಕುಂಬ್ಳೆ, ರನ್ ಮಷೀನ್ಗೆ ಕಿವಿಮಾತು ಹೇಳಿದ್ದಾರೆ.
ಸಾಕಷ್ಟು ಸಮಯದಿಂದಲೂ ವಿರಾಟ್ ಕೊಹ್ಲಿ, ಸ್ಪಿನ್ ಬೌಲಿಂಗ್ ದಾಳಿ ಎದುರಿಸಲು ಸಮಸ್ಯೆ ಎದುರಿಸುತ್ತಲೇ ಬಂದಿದ್ದಾರೆ. ಇದನ್ನು ಎಡಗೈ ಸ್ಪಿನ್ನರ್ ಮಿಚೆಲ್ ಸ್ಯಾಂಟ್ನರ್ ಚೆನ್ನಾಗಿಯೇ ಬಳಸಿಕೊಳ್ಳುವಲ್ಲಿ ಯಶಸ್ವಿಯಾದರು. ಹೀಗಾಗಿ ವಿರಾಟ್ ಕೊಹ್ಲಿ ಕೇವಲ ನೆಟ್ ಪ್ರಾಕ್ಟೀಸ್ ಮಾಡಿದರಷ್ಟೇ ಸಾಲದು. ಬದಲಾಗಿ ದೇಶಿ ಕ್ರಿಕೆಟ್ ಆಡಲು ಇದು ಸಕಾಲ ಎಂದು ಅನಿಲ್ ಕುಂಬ್ಳೆ ಅಭಿಪ್ರಾಯಪಟ್ಟಿದ್ದಾರೆ. ಕೇವಲ ನೆಟ್ ಪ್ರಾಕ್ಟೀಸ್ ಮಾಡುವುದಕ್ಕಿಂತ, ದೇಶಿ ಕ್ರಿಕೆಟ್ನಲ್ಲಿ ಒಂದೆರಡು ಇನ್ನಿಂಗ್ಸ್ ಆಡಿದ್ದರೂ, ವಿರಾಟ್ ಕೊಹ್ಲಿಗೆ ತುಂಬಾನೇ ಪ್ರಯೋಜನವಾಗುತ್ತಿತ್ತು.
Stop Eating Rice: ಒಂದು ತಿಂಗಳು ಅನ್ನ ಸೇವಿಸದಿದ್ದರೆ ದೇಹದಲ್ಲಾಗುವ ಬದಲಾವಣೆ ಏನು ಗೊತ್ತಾ..?
ಮ್ಯಾನೇಜ್ಮೆಂಟ್ ಒಪ್ಪಿದ್ದರೇ, ಅವರು ಈ ಮೊದಲೇ ದೇಶಿ ಕ್ರಿಕೆಟ್ ಪಂದ್ಯಗಳನ್ನಾಡಿದರೆ, ಅವರಿಗೆ ಅನುಕೂಲವಾಗುತ್ತಿತ್ತು. ಸ್ಪಿನ್ನರ್ಗಳ ಎದುರು ವಿರಾಟ್ ಕೊಹ್ಲಿ ರನ್ ಗಳಿಸಲು ಪರದಾಡುತ್ತಿರುವುದಕ್ಕೆ ಇದೊಂದೇ ಕಾರಣ ಎಂದು ಹೇಳಲಾರೆ” ಎಂದು ಅನಿಲ್ ಕುಂಬ್ಳೆ ಅಭಿಪ್ರಾಯಪಟ್ಟಿದ್ದಾರೆ. “ಅವರು ಬ್ಯಾಟಿಂಗ್ ಮಾಡಲು ಕ್ರೀಸ್ಗಿಳಿದಾಗ, ಪಿಚ್ ಕೂಡಾ ಸ್ಪಿನ್ನರ್ಗಳಿಗೆ ಸಹಕಾರಿಯಾಗಿ ವರ್ತಿಸುತ್ತಿತ್ತು. ಆಧುನಿಕ ಕ್ರಿಕೆಟ್ನಲ್ಲಿ ಸ್ಪಿನ್ನರ್ಗಳ ತಂತ್ರಗಾರಿಕೆಯನ್ನು ಅರಿಯಲು ದಿಗ್ಗಜ ಬ್ಯಾಟರ್ಗಳಾದವರು ಸಿದ್ದರಿರಬೇಕಾಗುತ್ತದೆ” ಎಂದು ಕುಂಬ್ಳೆ ಹೇಳಿದ್ದಾರೆ.