ಸ್ಟಾರ್ ಆಟಗಾರನ ಆ್ಯಕ್ಷನ್ಗೆ ಕೊಹ್ಲಿ ಖಡಕ್ ರಿಯಾಕ್ಷನ್ ಕೊಟ್ಟಿದ್ದು, ಅಲ್ಲೇ ಡ್ರಾ ಅಲ್ಲೇ ಬಹುಮಾನ ಎಂದು ಕಿಂಗ್ ಫ್ಯಾನ್ಸ್ ಹೇಳುತ್ತಿದ್ದಾರೆ.
Prahlad Joshi: ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ನೈತಿಕತೆ ಇಲ್ಲದಂತೆ ವರ್ತಿಸುತ್ತಿದೆ ಸರ್ಕಾರ – ಜೋಶಿ..!
ನಿನ್ನೆ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಯುವ ಕ್ರಿಕೆಟಿಗರಾದ ರಜತ್ ಪಾಟಿದಾರ್ ಮತ್ತು ಕ್ಯಾಮರೂನ್ ಗ್ರೀನ್ ಅವರೊಂದಿಗೆ ಸ್ಟಾರ್ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿ ಬ್ಯಾಟಿಂಗ್ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದರಿಂದ ಆರ್ಸಿಬಿ 241 ರನ್ಗಳ ಬೃಹತ್ ಸ್ಕೋರ್ ಮಾಡಿತು.
ನಂತರ ಆರ್ಸಿಬಿ ಬೌಲರ್ಗಳು ಪಂಜಾಬ್ ವಿರುದ್ಧ 181 ರನ್ಗಳಿಂದ ಜಯ ಸಾಧಿಸಿದರು. ಆದರೆ, ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಸ್ಟಾರ್ ಫಾರ್ಪಮೆನ್ಸ್ ನೀಡಿದ್ದು, 242 ರನ್ಗಳ ಗುರಿ ನೀಡುವ ಮೂಲಕ ಆರ್ಸಿಬಿ ಪಂಜಾಬ್ಗೆ ಆಘಾತ ನೀಡಿತ್ತು. ಆರಂಭಿಕ ಆಟಗಾರ ಪ್ರಭುಸಿಮ್ರಾನ್ ಸಿಂಗ್ ಅವರನ್ನು ಸ್ವಪ್ನಿಲ್ ಸಿಂಗ್ ಔಟ್ ಮಾಡಿದರು. ಆದರೆ ಒನ್ ಡೌನ್ ನಲ್ಲಿ ಬಂದ ರಿಲೀ ರೊಸೊವ್, ಆರ್ ಸಿಬಿ ಬೌಲರ್ ಗಳ ಮೇಲೆ ಸ್ಪೋಟಕ ಪ್ರದರ್ಶನ ನೀಡಿದ್ದರು. ಬಂದ ಕೂಡಲೇ ಸತತ ಎರಡು ಬೌಂಡರಿಗಳ ಸಿಡಿಸಿದ್ದರು.
ರಿಲೀ ರೊಸೊವ್ ಅವರು 27 ಎಸೆತಗಳಲ್ಲಿ 9 ಬೌಂಡರಿ ಮತ್ತು 3 ಸಿಕ್ಸರ್ಗಳೊಂದಿಗೆ ಒಟ್ಟು 61 ರನ್ ಸಿಡಿಸಿದ್ದರು. ಅಲ್ಲದೇ ಅರ್ಧಶತಕ ಪೂರೈಸಿದ ಬಳಿಕ, ತಮ್ಮ ಟ್ರೇಡ್ ಮಾರ್ಕ್ ಸಂಭ್ರಮದಲ್ಲಿ ಗಾಳಿಯಲ್ಲಿ ಬಂದೂಕಿನಿಂದ ಗುಂಡು ಹಾರಿಸುತ್ತಿದ್ದಂತೆ ಬ್ಯಾಟ್ ಹಿಡಿದು ಪೋಸ್ ನೀಡಿ ಸಂಭ್ರಮಿಸಿದ್ದರು.
ಆದರೆ, ಇನಿಂಗ್ಸ್ನ 9ನೇ ಓವರ್ನ ಕೊನೆಯ ಎಸೆತದಲ್ಲಿ ಕರಣ್ ಶರ್ಮಾ ಬೃಹತ್ ಶಾಟ್ ಗೆ ಕೈ ಹಾಕಿದ್ದರು. ಆದರೆ ರಿಲೀ ರೊಸೊವ್ ಸಿಡಿಸಿದ್ದ ಚೆಂಡು ವಿಲ್ ಜಾಕ್ಸ್ ಕೈ ಸೇರಿತ್ತು. ಈ ವೇಳೆ ಬೌಂಡರಿ ಗೆರೆಯಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ವಿರಾಟ್ ಕೊಹ್ಲಿ ನಿರ್ಣಾಯಕ ವಿಕೆಟ್ ಪತನದ ನಂತರ ಓಡಿ ಬಂದು ಸಂಭ್ರಮಿಸಿದ್ದರು. ಅಲ್ಲದೇ ರೊಸೊವ್ ಅವರ ಟ್ರೇಡ್ಮಾರ್ಕ್ ಆಚರಣೆಗೆ ತಿರುಗೇಟು ನೀಡುವಂತೆ, ಕೌಂಟರ್ ನೀಡಿದ್ದಾರೆ. ಇದನ್ನು ಕಂಡ ಅಭಿಮಾನಿಗಳು ಕೊಹ್ಲಿ ಅವರ ಆಕ್ರಮಣಕಾರಿ ಸಂಭ್ರಮಾಚರಣೆ ಹೊಸದೇನಲ್ಲ ಅಂತ ಅಭಿಮಾನಿಗಳು ಹೇಳಿದ್ದಾರೆ