ಚೆನ್ನೈ: ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) ಟೀಂ ಇಂಡಿಯಾ (Team India) ಪರ ಮೈಲಿಗಲ್ಲು ಬರೆದಿದ್ದಾರೆ. ತವರು ನೆಲದಲ್ಲಿ 12 ಸಾವಿರ ರನ್ ಹೊಡೆಯುವ ಮೂಲಕ ತೆಂಡೂಲ್ಕರ್, ಪಾಂಟಿಂಗ್, ಕ್ಯಾಲಿಸ್ ಅವರ ಪಟ್ಟಿ ಸೇರಿದ್ದಾರೆ.
ಬಾಂಗ್ಲಾ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ನ ಎರಡನೇ ಇನ್ನಿಂಗ್ಸ್ನಲ್ಲಿ 6 ರನ್ ಗಳಿಸಿದಾಗ ಈ ಸಾಧನೆ ನಿರ್ಮಿಸಿದರು. ಈ ಮೂಲಕ ತವರು ನೆಲದಲ್ಲಿ 12 ಸಾವಿರ ರನ್ ಗಳಿಸಿದ ಭಾರತದ ಎರಡನೇಯ ವಿಶ್ವದ ಐದನೇ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
219 ಪಂದ್ಯಗಳ (ಟೆಸ್ಟ್/ಏಕದಿನ/ ಟಿ20 ಸೇರಿ) 243 ಇನ್ನಿಂಗ್ಸ್ ಆಡಿ ಕೊಹ್ಲಿ ಈಗ ಒಟ್ಟು 12,012 ರನ್ ಹೊಡೆದಿದ್ದಾರೆ.
ಬೌನ್ಸ್ ಮತ್ತು ಕ್ಯಾರಿ ಇದ್ದರೆ ಆಡಲು ನನಗೆ ತುಂಬಾ ಇಷ್ಟ: ಶತಕದ ಬಗ್ಗೆ ಆರ್. ಅಶ್ವಿನ್ ಮಾತು!
ಯಾರು ಎಷ್ಟು ರನ್ ಹೊಡೆದಿದ್ದಾರೆ?
ತವರಿನಲ್ಲಿ ಸಚಿನ್ ತೆಂಡೂಲ್ಕರ್ (Sachin Tendulkar) 258 ಪಂದ್ಯಗಳ 313 ಇನ್ನಿಂಗ್ಸ್ ಆಡಿ 14,192 ರನ್ ಹೊಡೆಯುವ ಮೂಲಕ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದ್ದಾರೆ.
ಆಸ್ಟ್ರೇಲಿಯಾದ ರಿಕ್ಕಿ ಪಾಟಿಂಗ್ (Ricky Ponting) 249 ಪಂದ್ಯಗಳ 308 ಇನ್ನಿಂಗ್ಸ್ಗಳಿಂದ 13,117 ರನ್ ಚಚ್ಚಿ ಎರಡನೇ ಸ್ಥಾನ ಪಡೆದಿದ್ದಾರೆ. ದಕ್ಷಿಣ ಆಫ್ರಿಕಾದ ಜಾಕ್ ಕ್ಯಾಲಿಸ್ (Jacques Kallis) 234 ಪಂದ್ಯವಾಡಿ 282 ಇನ್ನಿಂಗ್ಸ್ಗಳಿಂದ 12,305 ರನ್ ಹೊಡೆದಿದ್ದಾರೆ.
ಶ್ರೀಲಂಕಾದ ಮಾಜಿ ನಾಯಕ ಕುಮಾರ ಸಂಗಕ್ಕಾರ (Kumara Sangakkara) 235 ಪಂದ್ಯ, 270 ಇನ್ನಿಂಗ್ಸ್ಗಳಿಂದ 12,043 ರನ್ ಬಾರಿಸಿ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದಾರೆ.
ಬಾಂಗ್ಲಾ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ ಕೊಹ್ಲಿ 6 ರನ್ ಹೊಡೆದರೆ ಎರಡನೇ ಇನ್ನಿಂಗ್ಸ್ನಲ್ಲಿ 17 ರನ್ ಹೊಡೆದು ಔಟಾಗಿದ್ದಾರೆ.