ಕೋಲಾರ: ಸಿದ್ದರಾಮಯ್ಯ ಸಿಎಂ ಆದ ನಂತರ ರಾಜ್ಯದಲ್ಲಿ ನಡೆಯುತ್ತಿರುವುದು ರಕ್ತಪಾತ ಎಂದು ಕೋಲಾರ ಲೋಕಸಭಾ ಸದಸ್ಯರಾದ ಎಸ್ ಮುನಿಸ್ವಾಮಿ ಅವ್ರು ಹೇಳಿದ್ರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವ್ರು, ಸಂವಿಧಾನ ತಿದ್ದುಪಡಿ ಮಾಡಿದರೆ ರಕ್ತಪಾತ ಆಗುತ್ತದೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಸಿಎಂ ಆದ ನಂತರ ರಾಜ್ಯದಲ್ಲಿ ಆಗುತ್ತಿರುವ ಬೆಳವಣಿಗೆಗಳು ರಕ್ತಪಾತದ ರೀತಿಯೆ ಇವೆ ಎಂದರು. ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಇಟ್ಟದ್ದು, ತಲ್ವಾರ್ ಹಾಕುವುದೆಲ್ಲವೂ ಇದೇ ಮಾತಿನ ಅರ್ಥ ಎಂದರು.
ಅಲ್ಲದೆ ಹಿಂದೂ ವಿರುದ್ದವಾಗಿ ಮಾತನಾಡುವವರಿಗೆ ರಕ್ಷಣೆ ಕೊಡುವುದು ಜೊತೆಗೆ ಬಾಬರ್, ಮೊಹಮ್ಮದ್ ಘಜಿನಿ, ಟಿಪ್ಪು ಸುಲ್ತಾನ್ ಫೊಟೊ ಹಾಕುವಂತಹ ಕೆಲಸ ಮಾಡುತ್ತಿದ್ದಾರೆ ಎಂದರು. ಇನ್ನೂ ಡಿಜೆ ಹಳ್ಳಿ ಕೆಜೆ ಹಳ್ಳಿ ಪ್ರಕರಣಗಳನ್ನ ಮನ್ನಾ ಮಾಡುವ ಮೂಲಕ, ಬಾಂಬ್ ಇಟ್ಟವರನ್ನ ಬ್ರದರ್ಸ್ ಎಂದು ಹೇಳುವ ಮೂಲಕ, ಅವರೆಲ್ಲಾ ರಕ್ತಪಾತಗಳನ್ನ ಮಾಡಲು ರೆಡಿಯಾಗಿದಾರೆ ಎಂದು ಹೇಳಿದ್ರು. ಸಂಘಟನೆಗಳಲ್ಲಿ ದೇಶ ವಿರೋಧಿ ಚಟುವಟಿಕೆಗಳನ್ನು ಮಾಡಿದಂತಹ ಕೇಸಗಳನ್ನು ಮನ್ನಾ ಮಾಡುವಂತಹ ನಿಟ್ಟಿನಲ್ಲಿ ಇದರೊಂದಿಗೆ ವಿಧಾನ ಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂದು ಕೂಗುವುದು ಇದೆಲ್ಲಾ ನೋಡಿದಾಗ ಸಿದ್ದರಾಮಯ್ಯ ನೀಡಿರುವ ರಕ್ತಪಾತದ ಹೇಳಿಕೆ ನಿಜ ಎಂದರು.
ಸಂವಿಧಾನ ಬದಲಾವಣೆ ವಿಚಾರ
ಇನ್ನೂ ಸಂವಿಧಾನ ಬದಲಾವಣೆ ಹೇಳಿಕೆ ಅನಂತ್ ಕುಮಾರ್ ಅವರ ವೈಯಕ್ತಿಕವಾದದ್ದು, ಪಕ್ಷಕ್ಕೂ ಅದಕ್ಕೂ ಸಂಭಂಧವಿಲ್ಲ ಎಂದರು. ಇನ್ನೂ ಅಂಬೇಡ್ಕರ್ ಅವರಿಗೆ ಗೌರವ ಕೊಟ್ಟಿರುವ ಪಕ್ಷ ಬಿಜೆಪಿ ಪಕ್ಷ ಚುನಾವಣೆಗೆ ಸ್ಪರ್ಧಿಸಲು ಬೆಂಬಲ ಕೊಟ್ಟದ್ದು, ಭಾರತ ರತ್ನ ಕೊಡಲು ಸಪೋರ್ಟ್ ಮಾಡಿರುವುದು ಬಿಜೆಪಿ ಪಕ್ಷ ಎಂದರು. ಜೊತೆಗೆ ಅಂಬೇಡ್ಕರ್ ಹುಟ್ಟಿ ಬೆಳೆದ ಪಂಚತೀರ್ಥ ಜಾಗಗಳನ್ನ ಅಭಿವೃದ್ದಿಗೊಳಿಸಿರುವುದು ಬಿಜೆಪಿ ಪಕ್ಷ ಎಂದರು. ಇನ್ನೂ ಸಾಕಷ್ಟು ಬರಿ ಸಂವಿಧಾನ ಬದಲಾವಣೆ ಮಾಡಿರುವುದು ಪ್ರಯತ್ನ ಪಟ್ಟಿರುವುದು ಕಾಂಗ್ರೇಸ್ ಪಕ್ಷ ಎಂದು ಹೇಳಿದ್ರು. ಅಲ್ಲದೆ ದಲಿತರ ಅಭಿವೃದ್ದಿಗೆ ಮೀಸಲಿಟ್ಟಿದ್ದ ಹಣವನ್ನ ಗ್ಯಾರಂಟಿಗಳಿಗೆ ಬಳಕೆ ಮಾಡಿದ್ದಾರೆ , ದಲಿತ ವಿರೋಧಿಗಳು ಕಾಂಗ್ರೇಸ್ ಪಕ್ಷದವರು ಎಂದರು. ಜೊತೆಗೆ
ದಲಿತರನ್ನ ಸಿಎಂ ಆಗುವುದನ್ನ ತಪ್ಪಿಸಿರುವುದು ಯಾರು ಎಂದು ಗೊತ್ತಿದೆ ಎಂದು ಹೇಳಿದ್ರು.