ಆರೋಗ್ಯವು ಸಮತೋಲನವಾಗಿರ ಬೇಕಾದರೆ ನೀರಿನ ಸೇವನೆ ಅತ್ಯಗತ್ಯ. ನೀರಿನ ಸೇವನೆಯಿಂದ ಹಲವಾರು ರೀತಿಯ ಅನಾರೋಗ್ಯ ಸಮಸ್ಯೆಗಳಿಂದ ದೂರ ಇರಬಹುದಾಗಿದೆ. ಅದರಲ್ಲೂ ಮುಂಜಾನೆ ಎದ್ದು ಬಿಸಿಯಾದ ನೀರನ್ನು ಕುಡಿಯುವುದಿಂದ ಅನೇಕ ಲಾಭ ಸಿಗುತ್ತದೆ.
ತಣ್ಣಗಿನ ನೀರು ಮತ್ತು ಬಿಸಿ ನೀರು ಎಂದು ಕುಡಿಯುತ್ತೇವೆ. ಹೆಚ್ಚಾಗಿ ಬೇಸಿಗೆಯಲ್ಲಿ ತಣ್ಣಗಿನ ನೀರು ಕುಡಿಯಲು ಇಷ್ಟಪಡುತ್ತೇವೆ. ಮಳೆಗಾಲ ಹಾಗೂ ಚಳಿಗಾಲದಲ್ಲಿ ಬಿಸಿ ನೀರು ಇಷ್ಟವಾಗುತ್ತದೆ. ಮುಂಜಾನೆ ಖಾಲಿ ಹೊಟ್ಟೆಗೆ ಬಿಸಿ ನೀರು ಕುಡಿದರೆ ದೇಹಕ್ಕೆ ಹಲವಾರು ರೀತಿಯ ಲಾಭಗಳು ಸಿಗುತ್ತವೆ.
* ಬಿಸಿ ನೀರು ಕುಡಿಯುವುದರಿಂದ ಸಿಗುವಂತಹ ಅತೀ ಮುಖ್ಯ ಲಾಭ ಎಂದರೆ ಅದು ಜೀರ್ಣ ಕ್ರಿಯೆ ಸುಧಾರಣೆಯಾಗುತ್ತದೆ. ಬಿಸಿ ನೀರು ಕುಡಿದರೆ ಅದರಿಂದ ಮಲಬದ್ಧತೆ ನಿವಾರಣೆ ಮಾಡಬಹುದಾಗಿದೆ.
* ಬಿಸಿ ನೀರು ಕುಡಿದರೆ ಅದರಿಂದ ತೂಕ ಇಳಿಸಿಕೊಳ್ಳಲು ನೆರವಾಗುವುದು ಎಂದು ಹಲವಾರು ಅಧ್ಯಯನಗಳು ಹೇಳಿವೆ. ಬಿಸಿ ನೀರು ಹೊಟ್ಟೆ ತುಂಬಿದಂತೆ ಮಾಡುತ್ತದೆ ಮತ್ತು ಬಿಸಿ ನೀರು ಹೆಚ್ಚು ಕಾಲ ಹೊಟ್ಟೆಯಲ್ಲಿ ಉಳಿಯುತ್ತದೆ.
* ಬಿಸಿ ನೀರನ್ನು ಕುಡಿಯುವುದರಿಂದ ಕಟ್ಟಿದ ಮೂಗಿನ ನಿವಾರಣೆಯಾಗುತ್ತದೆ.
* ಬಿಸಿ ನೀರಿನಿಂದಾಗಿ ದೇಹದಲ್ಲಿ ರಕ್ತ ಸಂಚಾರವು ಸುಗಮವಾಗಿ ಆಗಲು ನೆರವಾಗುತ್ತದೆ. ಬಿಸಿ ನೀರು ರಕ್ತನಾಳನ್ನು ಹಿಗ್ಗಿಸುವ ಮೂಲಕವಾಗಿ ರಕ್ತವು ಸರಿಯಾಗಿ ಸಂಚಾರವಾಗುವಂತೆ ಮಾಡುತ್ತದೆ.
* ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
* ಬಿಸಿ ನೀರು ಸೇವನೆ ಮಾಡುವುದರಿಂದ ಚರ್ಮದ ತಾರುಣ್ಯವನ್ನು ಕಾಪಾಡಿಕೊಳ್ಳಬಹುದಾಗಿದೆ.
* ಒತ್ತಡ, ಖಿನ್ನತೆ ದೂರ ಮಾಡಿ ಆರಾಮದಾಯಕ ಅನುಭವವನ್ನು ಬಿಸಿ ನೀರು ಸೇವನೆಯಿಂದ ಪಡೆಯಬಹುದಾಗಿದೆ.