ಬೆಂಗಳೂರು: ಎಲ್ಲಾ ಸಮುದಾಯಗಳಿಗೂ ಅವಕಾಶ ಸಿಗಬೇಕೆಂಬ ನಿಟ್ಟಿನಲ್ಲಿ 3 ಡಿಸಿಎಂ ಹುದ್ದೆ ಕೇಳಿದರೆ ತಪ್ಪಿಲ್ಲ ಎಂದು ಡಾ. ಎಚ್ಸಿ ಮಹದೇವಪ್ಪ ಹೇಳಿದರು. ಲೋಕಸಭಾ ಚುನಾವಣೆಗೂ ಮುನ್ನ ಹೆಚ್ಚುವರಿ ಡಿಸಿಎಂ ಹುದ್ದೆಗೆ ಕೆ.ಎನ್.ರಾಜಣ್ಣ ಒತ್ತಾಯ ವಿಚಾರವಾಗಿ ಮಾತನಾಡಿದ ಅವರು, ಈ ರೀತಿಯಲ್ಲಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಕೆ.ಎನ್ ರಾಜಣ್ಣ ಹಿರಿಯ ನಾಯಕರು. ಅವರು ರಾಜಕೀಯ ವಿಶ್ಲೇಷಣೆ ಮಾಡಿ ಈ ರೀತಿಯಾಗಿ ಹೇಳಿದ್ದಾರೆ. ಆದರೆ, ಈ ಬಗ್ಗೆ ತೀರ್ಮಾನ ಕೈಗೊಳ್ಳುವುದು ಹೈಕಮಾಂಡ್ ಗೆ ಬಿಟ್ಟ ವಿಚಾರ ಎಂದರು.
https://ainlivenews.com/elon-musk-offered-1-billion-dollars-to-change-the-name-on-wikipedia/
ಲೋಕಸಭೆ ಚುನಾವಣೆಯಲ್ಲಿ ಸಚಿವರನ್ನು ಕಣಕ್ಕಿಳಿಸುವ ಬಗ್ಗೆ ಸದ್ಯಕ್ಕೆ ಏನು ಚರ್ಚೆ ಆಗಿಲ್ಲ. ಹೆಚ್ಚು ಸ್ಥಾನ ಗೆಲ್ಲುವ ನಿಟ್ಟಿನಲ್ಲಿ ಹೈಕಮಾಂಡ್ ಏನು ತೀರ್ಮಾನ ಮಾಡುತ್ತೋ ನೋಡಬೇಕು ಎಂದರು.
ಲೋಕಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಜನವರಿ 10 ಕ್ಕೆ ಎಐಸಿಸಿಯಿಂದ ವೀಕ್ಷಕರು ಬರ್ತಾರೆ ಅವತ್ತು ಚರ್ಚೆ ಮಾಡ್ತಾರೆ ಎಂದು ಇದೇ ಸಂದರ್ಭದಲ್ಲಿ ಡಾ. ಎಚ್ ಸಿ ಮಹದೇಪ್ಪ ಹೇಳಿದರು.