ತುಮಕೂರು : ತುಮಕೂರಿನಲ್ಲಿ ನಾಯಕರ ವಾಕ್ಸಮರ ಮಧ್ಯೆಯೇ ಇದೀಗ ಸೋಷಿಯಲ್ ಮೀಡಿಯಾ ವಾರ್ ಸಹ ಜೋರಾಗಿದೆ. ಶೀಘ್ರದಲ್ಲೇ ಸಚಿವ ಸ್ಥಾನಕ್ಕೆ ಕೆ.ಎನ್ ರಾಜಣ್ಣ ರಾಜೀನಾಮೆ ಕೊಡುತ್ತಾರೆ ಎಂದು ಫೇಸ್ ಬುಕ್ ಫೇಜ್ ನಲ್ಲಿ ವಾಸು ಅಭಿಮಾನಿಗಳಿಂದ ಪೋಸ್ಟ್ ಮಾಡಿದ್ದು, ಚರ್ಚೆಗೆ ಕಾರಣವಾಗಿದೆ.
ರೈತನಿಗೆ ಮೆಸ್ಕಾಂ ಶಾಕ್ ; 13 ವರ್ಷಗಳ ಬಳಿಕ ಬಂದ ಕರೆಂಟ್ ಬಿಲ್ ಎಷ್ಟು ಗೊತ್ತಾ..?
ಸಹಕಾರಿ ಸಚಿವ ಕೆ.ಎನ್ ರಾಜಣ್ಣ ಕಂಪ್ಯೂಟರ್ ನೋಡುವ ಚಿತ್ರ ಎಡಿಟ್ ಮಾಡಿ ಹಾಕಿರುವ ವಾಸು ಅಭಿಮಾನಿಗಳು, ಎಸ್.ಆರ್. ಶ್ರೀನಿವಾಸ್ ಗುಬ್ಬಿ ಎಂ.ಎಲ್.ಎ ಫ್ಯಾನ್ಸ್ ಪೇಜ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ತುಮುಲ್ ಚುನಾವಣೆಯಲ್ಲಿ ಎಸ್.ಆರ್ ಶ್ರೀನಿವಾಸ್ ಪತ್ನಿ ಭಾರತಿದೇವಿಗೆ ಅಧ್ಯಕ್ಷ ಸ್ಥಾನ ಕೈತಪ್ಪಿತ್ತು. ಆ ಬಳಿಕ ಎಸ್ ಆರ್ ಶ್ರೀನಿವಾಸ್ ಕೆ.ಎನ್ ರಾಜಣ್ಣ ಹಾಗೂ ಪರಮೇಶ್ವರ್ ವಿರುದ್ಧ ಹರಿಹಾಯ್ದಿದ್ದರು. ಅಧ್ಯಕ್ಷ ಸ್ಥಾನ ಕೈ ತಪ್ಪಿದ್ದಕ್ಕೆ ಕೆ.ಎನ್ ರಾಜಣ್ಣ ಕಾರಣ ಅಂತ ಆಕ್ರೋಶ ಹೊರ ಹಾಕಿದ್ದರು. ಇದೀಗ ವಾಸು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ರಾಜಣ್ಣ ಹಾಗೂ ಪರಮೇಶ್ವರ್ ವಿರುದ್ಧ ಪೋಸ್ಟ್ ಚಳುವಳಿ ಆರಂಭಿಸಿದ್ದು, ಪ್ರತಿನಿತ್ಯ ಇಬ್ಬರು ಸಚಿವರ ವಿರುದ್ಧ ಒಂದಲ್ಲೊಂದು ಪೋಸ್ಟ್ ಹಾಕಿ ಆಕ್ರೋಶ ಹೊರಹಾಕುತ್ತಲೇ ಇದ್ದಾರೆ.