ಲಕ್ನೋ: ಐಪಿಎಲ್ ಪ್ರವೇಶಿಸಿದ ಮೊದಲ ಎರಡು ಆವೃತ್ತಿಗಳಲ್ಲಿ ತಂಡವನ್ನು ಪ್ಲೇ ಆಫ್ಸ್ಗೆ ಕೊಂಡೊಯ್ದಿದ್ದ ನಾಯಕ ಕೆ.ಎಲ್ ರಾಹುಲ್ ಅವರನ್ನು ಬಿಡುಗಡೆಗೊಳಿಸಲು ಲಕ್ನೋ ಸೂಪರ್ ಜೈಂಟ್ಸ್ ಫ್ರಾಂಚೈಸಿ ನಿರ್ಧರಿಸಿದೆ ಎಂದು ವರದಿಗಳು ತಿಳಿಸಿವೆ.
Okra For Diabetes: ಮಧುಮೇಹಕ್ಕೆ ಬೆಂಡೆಕಾಯಿ ರಾಮಬಾಣ! ಕ್ಷಣಾರ್ಧದಲ್ಲಿ ನಿಮ್ಮ ಸಕ್ಕರೆ ಮಟ್ಟ ನಿಯಂತ್ರಣ
ಕೆ.ಎಲ್ ರಾಹುಲ್ ಅವರನ್ನು ಹೊರದಬ್ಬಲು ಮುಂದಾಗಿರುವ ಫ್ರಾಂಚೈಸಿಯು ಸ್ಫೋಟಕ ಬ್ಯಾಟರ್ ನಿಕೋಲಸ್ ಪೂರನ್, ರಾಕೆಟ್ ವೇಗಿ ಮಯಾಂಕ್ ಯಾದವ್ ಮತ್ತು ಸ್ಪಿನ್ನರ್ ರವಿ ಬಿಷ್ಣೋಯಿ ಅವರನ್ನು ಉಳಿಸಿಕೊಳ್ಳಲು ನಿರ್ಧರಿಸಿದೆ. ಮುಂದಿನ ಆವೃತ್ತಿಯಲ್ಲಿ ಕನ್ನಡಿಗ ಕೆ.ಎಲ್ ರಾಹುಲ್ ಅವರು ಆರ್ಸಿಬಿ ಸೇರ್ಪಡೆಯಾಗಲಿದ್ದಾರೆ ಎಂಬ ವದಂತಿಗಳ ನಡುವೆ ಅವರನ್ನು ಫ್ರಾಂಚೈಸಿ ಬಿಡುಗಡೆ ಮಾಡಿದೆ ಎಂದು ವರದಿಗಳು ಹೇಳಿವೆ.
ಪೂರನ್ ಮುಂದಿನ ಕ್ಯಾಪ್ಟನ್?
29 ವರ್ಷದ ನಿಕೋಲಸ್ ಪೂರನ್ 2017ರ ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ತಂಡಕ್ಕೆ 30 ಲಕ್ಷಕ್ಕೆ ಬಿಕರಿಯಾಗಿದ್ದರು. ಆ ಬಳಿಕ 2019ರ ಹರಾಜಿನಲ್ಲಿ ಪಂಜಾಬ್ ಕಿಂಗ್ಸ್ ಅವರನ್ನ 4.2 ಕೋಟಿ ರೂ.ಗೆ ಖರೀದಿ ಮಾಡಿತ್ತು. ಆದ್ರೆ 2022ರ ಮೆಗಾ ಹರಾಜಿನಲ್ಲಿ 10.72 ಕೋಟಿ ರೂ.ಗೆ ಪೂರನ್ ಅವರನ್ನು ಖರೀದಿ ಮಾಡಿದ್ದ ಸನ್ ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ 2023ರಲ್ಲಿ ತಂಡದಿಂದ ರಿಲೀಸ್ ಮಾಡಿತು. ನಂತರ ಲಕ್ನೋ ಫ್ರಾಂಚೈಸಿ 16 ಕೋಟಿ ರೂ.ಗೆ ಪೂರನ್ ಅವರನ್ನ ಖರೀದಿ ಮಾಡಿತು. ಇದೀಗ ರಾಹುಲ್ ಅವರನ್ನು ಬಿಡುಗಡೆಗೊಳಿಸಿದ್ದು,
ಪೂರನ್ ತಂಡದ ನಾಯಕನಾಗಲಿದ್ದಾರೆ ಎಂದು ತಿಳಿದುಬಂದಿದೆ. 2019 ರಿಂದ 2024ರ ವರೆಗೆ 76 ಪಂದ್ಯಗಳನ್ನಾಡಿರುವ ನಿಕೋಲಸ್ ಪೂರನ್, 1,769 ರನ್ ಗಳಿಸಿದ್ದಾರೆ. ಇದರಲ್ಲಿ 9 ಅರ್ಧಶತಕ, 113 ಬೌಂಡರಿ, 127 ಭರ್ಜರಿ ಸಿಕ್ಸರ್ಗಳೂ ಸೇರಿವೆ. 2025 ರಿಂದ 2027ರ ಐಪಿಎಲ್ ಆವೃತ್ತಿಗಳಿಗೆ ಹೊಸ ನಿಯಮ ಘೋಷಣೆ ಮಾಡಿರುವ ಬಿಸಿಸಿಐ, ನವೆಂಬರ್ 24 ಮತ್ತು 25 ರಂದು ಸೌದಿ ಅರೇಬಿಯಾದ ರಿಯಾದ್ನಲ್ಲಿ ಮೆಗಾ ಹರಾಜು ನಡೆಸಲು ತೀರ್ಮಾನಿಸಿದೆ. ಅದಕ್ಕಾಗಿ ಅಕ್ಟೋಬರ್ 31ರ ಸಂಜೆ 4:30 ಗಂಟೆಗೆ ಉಳಿಸಿಕೊಳ್ಳುವ ಆಟಗಾರರ ಪಟ್ಟಿ ಬಿಡುಗಡೆಯಾಗಲಿದೆ.