ಬಿಗ್ ಬಾಸ್ ಸೀಸನ್ 11 ರ ಸೀಸನ್ ಪ್ರೇಕ್ಷಕರ ಮನಸ್ಸು ಸೆಳೆದಿರೋದ್ರಲ್ಲಿ ಡೌಟೇ ಇಲ್ಲ. ಅದರಂತೆ ಶೋ ಶುರುವಾಗಿ ಎರಡು ವಾರ ಕಳೆದಿದೆ.
ಆದರೆ ಎರಡನೇ ವಾಹನ ಕಿಚ್ಚನ ಪಂಚಾಯಿತಿ ನಡೆದಿಲ್ಲ. ಇದಕ್ಕೆ ಕಿಚ್ಚ ಸುದೀಪ್ ಅವರು, ಕಾರಣ ಬಹಿರಂಗಪಡಿಸಿದ್ದಾರೆ. ಕಳೆದ ವಾರ ಭವ್ಯಾ ಗೌಡ, ಧನರಾಜ್, ಧರ್ಮ ಕೀರ್ತಿರಾಜ್, ರಂಜಿತ್ ಕುಮಾರ್, ತ್ರಿವಿಕ್ರಂ, ಮಾನಸಾ, ಐಶ್ವರ್ಯಾ, ಗೋಲ್ಡ್ ಸುರೇಶ್, ಹಂಸಾ, ಲಾಯರ್ ಜಗದೀಶ್, ಅನುಷಾ ರೈ ನಾಮಿನೇಟ್ ಆಗಿದ್ದರು. ಶನಿವಾರದ ಎಪಿಸೋಡ್ನಲ್ಲಿ ಸುದೀಪ್ ಯಾರನ್ನೂ ಸೇವ್ ಮಾಡಿರಲಿಲ್ಲ. ಭಾನುವಾರ ಒಬ್ಬೊಬ್ಬರನ್ನಾಗಿ ಸೇವ್ ಮಾಡುತ್ತಾ ಬಂದರು.
ಕೊನೆಯಲ್ಲಿ ಅನುಷಾ ರೈ, ತ್ರಿವಿಕ್ರಂ ಹಾಗೂ ರಂಜಿತ್ ಉಳಿದರು. ಈ ಮೂವರಲ್ಲಿ ಮೊದಲು ಅನುಷಾ ಅವರನ್ನು ಸೇವ್ ಮಾಡಿದರು. ಕೊನೆಯಲ್ಲಿ ತ್ರಿವಿಕ್ರಂ ಹಾಗೂ ರಂಜಿತ್ ಉಳಿದರು. ಇಬ್ಬರೂ ದೊಡ್ಮನೆಯಲ್ಲಿ ಸ್ಟ್ರಾಂಗ್ ಎನಿಸಿಕೊಂಡಿದ್ದಾರೆ. ಯಾರೇ ಹೋದರೂ ಅದು ಬಿಗ್ ಬಾಸ್ ಆಟಕ್ಕೆ ಆಗುವ ನಷ್ಟವೇ. ಹೀಗಾಗಿ, ಎಲ್ಲರಲ್ಲೂ ಟೆನ್ಷನ್ ಮೂಡಿತ್ತು.
‘ತ್ರಿವಿಕ್ರಂ ಬ್ಯಾಡ್ಲಕ್’ ಎಂದರು ಸುದೀಪ್. ಬಿಗ್ ಬಾಸ್ ಮನೆಯಲ್ಲಿ ಒಮ್ಮೆ ಮೌನ ಆವರಿಸಿತು. ಯಾರೂ ತುಟಿ ಪಿಟಕ್ ಎನ್ನಲಿಲ್ಲ. ಕೊನೆಗೆ ಸುದೀಪ್ ಅವರು, ‘ಇಬ್ಬರೂ ಹೋಗುತ್ತಿಲ್ಲ, ಅಭಿನಂದನೆಗಳು’ ಎಂದರು. ಈ ವಿಚಾರ ಕೇಳಿ ಎಲ್ಲರೂ ಖುಷಿಪಟ್ಟರು.
ಈ ವಾರ ನಿಯಮಗಳನ್ನು ಸಾಕಷ್ಟು ಬ್ರೇಕ್ ಮಾಡಿದ್ದೀರಿ, ಬಿಗ್ ಬಾಸ್ ಮನೆಯ ನಿಯಮಗಳಿಗೆ ಯಾರೂ ಗೌರವ ನೀಡಲೇ ಇಲ್ಲ. ಈ ಕಾರಣದಿಂದಲೇ ಬಿಗ್ ಬಾಸ್ ನೀಡಿದ್ದ ಪನಿಶ್ಮೆಂಟ್, ನಾಮಿನೇಷನ್. ಎಲ್ಲರೂ ನಾಮಿನೇಟ್ ಆದಾಗ ಕೆಲವೊಮ್ಮೆ ಅರ್ಹವಲ್ಲದ ವ್ಯಕ್ತಿ ಹೋಗಿ ಬಿಡುತ್ತಾರೆ’ ಎಂದರು ಸುದೀಪ್. ಈ ವಾರ ಎಲಿಮಿನೇಟ್ ಮಾಡದಿರಲು ಇದುವೇ ಕಾರಣ. ಇದನ್ನು ಅನೇಕರು ಇಪ್ಪಿದ್ದಾರೆ. ‘ಅನಿರೀಕ್ಷಿತಗಳಿಗೆ ರೆಡಿ ಆಗಿ’ ಎಂದು ಸುದೀಪ್ ಹೇಳಿದ್ದಾರೆ.